ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣ ಬೆನ್ನತ್ತಿರುವ ಬೆನ್ನಲ್ಲೇ ನಗರ ಪೊಲೀಸರು ಮಾದಕ ದ್ರವ್ಯ ಮಟ್ಟ ಹಾಕಲು ಮುಂದಾಗಿದ್ದಾರೆ. ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ಸೇಚಿಸುತ್ತಿದ್ದ ಮಾಹಿತಿ ಮೇರೆಗೆ ಇಂದು ದಾಳಿ ನಡೆಸಿದ್ದಾರೆ.
ಈ ವೇಳೆ ಐದು ಜನ ಆರೋಪಿಗಳಾದ ಅಹಮ್ಮದ್ ಓಮರ್, ತಬ್ಸಿರ್, ತಜೀಮ್, ಸೈಯದ್ ಶಾಕಿರ್, ಮೊಹಮ್ಮದ್ ಸಾಹೀಮ್ ಅಪಾರ್ಟ್ಮೆಂಟ್ ವೊಂದರಲ್ಲಿ ಗಾಂಜಾ ಶೇಖರಣೆ ಮಾಡಿ ಸೇವನೆ ಮಾಡುತ್ತಿದ್ದರು. ಹೀಗಾಗಿ ದಾಳಿ ನಡೆಸಿ ಆರೋಪಿಗಳನ್ನ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಪ್ರಮುಖ ಆರೋಪಿಯಾದ ಅಹಮ್ಮದ್ ಓಮರ್ ಒತ್ತಡ ನಿವಾರಣೆಗಾಗಿ ಮಾದಕ ವಸ್ತು ಸೇವಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದು ತಾನು ಕುಟುಂಬದಿಂದ ದೂರವಿದ್ದ ಕಾರಣ ರೂಂನಲ್ಲಿ ಒಬ್ಬನೇ ಇದ್ದಾಗ ಒತ್ತಡಕ್ಕೆ ಸಿಲುಕಿದ್ದೆ. ಹೀಗಾಗಿ ಒತ್ತಡ ನಿವಾರಣೆಗಾಗಿ ಮಾದಕ ವಸ್ತುಗಳನ್ನು ಸೇವಿಸುವ ಚಟಕ್ಕೆ ಬಿದ್ದೆ. ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಪರಿಚಯಚಯವಿರುವ ಆಫ್ರಿಕನ್ ಪ್ರಜೆಗಳಿಂದ ಮಾದಕ ವಸ್ತು ಖರೀದಿಸಿ ತನ್ನ ಜೊತೆಗೆ ವ್ಯಾಸಂಗ ಮಾಡುತ್ತಿದ್ದ ಇತರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದ ವಿಚಾರವನ್ನು ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.
ಸದ್ಯ ಆರೋಪಿಯಿಂದ 50 ಗ್ರಾಂ ತೂಕದ 100 ಮಾತ್ರೆಗಳು, 10ಗ್ರಾಂ ತೂಕದ ಮಾತ್ರೆಗಳು ಸೇರಿ ಒಟ್ಟು 5 ಲಕ್ಷ ಬೆಲೆ ಬಾಳುವ ಮಾದಕ ವಸ್ತು ಜಪ್ತಿ ಮಾಡಲಾಗಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.