ETV Bharat / state

ಡ್ರಗ್ಸ್ ಕೇಸ್: ನೋಟಿಸ್ ನೀಡಿದರೂ ವಿಚಾರಣೆಗೆ ಶಂಕಿತರು ಗೈರು.. ರಾಜಕಾರಣಿ ಪುತ್ರ ಶಾಮೀಲು ಶಂಕೆ - ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದವ ಡ್ರಗ್ಸ್​ ಕೇಸ್ ಶಂಕಿತರು

ಇಂದು ವಿಚಾರಣೆಗೆ ಹಾಜರಾಗುವಂತೆ ಕೇರಳದ ಸಿನಿಮಾಟೋಗ್ರಾಫರ್ ಆಗಿರುವ ಸಂಜಯ್ ಹ್ಯಾರಿಸ್​​ಗೂ ನೋಟಿಸ್ ನೀಡಲಾಗಿತ್ತು. ಈ ಹಿಂದೆ ಕೂಡ ಸಂಜಯ್ ಹ್ಯಾರಿಸ್​​​ಗೆ ನೋಟಿಸ್ ನೀಡಿದ್ದರೂ ಅನಾರೋಗ್ಯ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು.

drug-case-suspects-skip-the-trial-after-notice-issued-by-police
ನೋಟಿಸ್ ನೀಡಿದರೂ ವಿಚಾರಣೆಗೆ ಶಂಕಿತರು ಗೈರು
author img

By

Published : Dec 17, 2021, 7:27 PM IST

ಬೆಂಗಳೂರು: ಗೋವಿಂದಪುರ ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಹಲವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಈ ನಡುವೆ ಗೋವಿಂದಪುರ ಡ್ರಗ್ಸ್ ಕೇಸ್ ಪ್ರಕರಣದ ಉರುಳು ಸೆಲೆಬ್ರಿಟಿಗಳು, ಉದ್ಯಮಿಗಳು ಮತ್ತು ರಾಜಕೀಯ ಹಿನ್ನೆಲೆ ಇರುವವರ ಕೊರಳಿಗೆ ಬಿಗಿಯುತ್ತಿದೆ.

ಪೆಡ್ಲರ್ ಥಾಮಸ್ ಕಲ್ಲು ಜೊತೆಗೆ ಲಿಂಕ್ ಹೊಂದಿರುವ ಆರೋಪ ಹಿನ್ನೆಲೆ ಪ್ರೆಸ್ಟೀಜ್ ಗ್ರೂಪ್ ಕಾರ್ಯ ನಿರ್ವಾಹಕ ನಿರ್ದೇಶಕಿ ಅಂಜುಂ ರಜಾಕ್​ಗೆ ನಿನ್ನೆ ನೋಟಿಸ್​​ ನೀಡಿ ವಿಚಾರಣೆ ನಡೆಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು, ಆದರೆ, ಅಂಜುಂ ರಜಾಕ್ ವಿಚಾರಣೆಗೆ ಹಾಜರಾಗಿಲ್ಲ.

ಇನ್ನೊಂದೆಡೆ ಇಂದು ವಿಚಾರಣೆಗೆ ಹಾಜರಾಗುವಂತೆ ಕೇರಳದ ಸಿನಿಮಾಟೋಗ್ರಾಫರ್ ಆಗಿರುವ ಸಂಜಯ್ ಹ್ಯಾರಿಸ್​​ಗೂ ನೋಟಿಸ್ ನೀಡಲಾಗಿತ್ತು. ಈ ಹಿಂದೆ ಕೂಡ ಸಂಜಯ್ ಹ್ಯಾರಿಸ್​​​ಗೆ ನೋಟಿಸ್ ನೀಡಿದ್ದರೂ ಅನಾರೋಗ್ಯ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು.

ಇಂದು ಕೂಡ ಸಂಜಯ್ ಹ್ಯಾರಿಸ್ ವಿಚಾರಣೆಗೆ ಹಾಜರಾಗಿಲ್ಲ. ಪಾರ್ಟಿ ಆಯೋಜಕಿ ಆರ್ಜೂ ಸೇಟ್​ಗೂ ಗೋವಿಂದಪುರ ಪೊಲೀಸರು ನೋಟಿಸ್ ನೀಡಿದ್ದಾರೆ. ಪೆಡ್ಲರ್ ಥಾಮಸ್ ಕಲ್ಲು ಜೊತೆಗೆ ಲಿಂಕ್ ಹೊಂದಿರುವ ಆರ್ಜೂ. ದೊಡ್ಡ ದೊಡ್ಡವರ ಪಾರ್ಟಿ ಆಯೋಜನೆ ಮಾಡುತ್ತಿದ್ದಳಂತೆ. ಥಾಮಸ್ ಕಲ್ಲು ಮೂಲಕ ಡ್ರಗ್ಸ್ ತರಿಸಿ ಹಂಚಿರುವ ಶಂಕೆ ಹಿನ್ನೆಲೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ದರೂ ನೋಟಿಸ್ ನೀಡಿರುವ ಬೆನ್ನಲ್ಲೇ ಆರ್ಜೂ ಸೇಟ್ ಮುಂಬೈಗೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ.

ಆರ್ಜೂ ಜೊತೆ ಪ್ರತಿಷ್ಠಿತ ರಾಜಕಾರಣಿ ಪುತ್ರ ಕೂಡ ಸಂಪರ್ಕದಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ‌.‌ ಅದೇ ರಾಜಕಾರಣಿ ಪುತ್ರನ ಕಾರು ಚಾಲಕ ಪೆಡ್ಲರ್ ಥಾಮಸ್ ಜೊತೆಗೂ ನಿರಂತರ ಸಂಪರ್ಕ ಹೊಂದಿರುವ ಬಗ್ಗೆಯೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ರಾಜಕಾರಣಿ ಪುತ್ರನ ಕಾರು ಚಾಲಕನಿಗೂ ನೋಟಿಸ್ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: Drugs Case: 2 ಬಾರಿ ನೋಟಿಸ್​ ನೀಡಿದ್ರೂ ವಿಚಾರಣೆಗೆ ಬಾರದ ಪ್ರೆಸ್ಟೀಜ್ ಕಂಪನಿ ಸಿಇಒ.. ಮೂರನೇ ಬಾರಿ ನೋಟಿಸ್?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.