ETV Bharat / state

ವಿಧಾನಸಭೆಯಲ್ಲಿ ಕುಮಾರಸ್ವಾಮಿ vs ಸಿಎಂ ಸಿದ್ದರಾಮಯ್ಯ ಟಾಕ್​​ಫೈಟ್​

author img

By

Published : Jul 6, 2023, 9:27 PM IST

Updated : Jul 7, 2023, 9:33 AM IST

ಭೋಜನ‌ ವಿರಾಮ ಬಳಿಕ ವಿಧಾನಸಭೆ ಶೂನ್ಯವೇಳೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಚಾಲಕ ಆತ್ಮಹತ್ಯೆಗೆ ಯತ್ನ ಪ್ರಕರಣ ವಿಷಯ ಪ್ರಸ್ತಾಪಿಸಿ, ಸಚಿವ ಚಲುವರಾಯ ಸ್ವಾಮಿ ರಾಜೀನಾಮೆ ನೀಡಬೇಕು ಎಂದು ಆಗ್ರಹಪಡಿಸಿದರು.. ಈ ವೇಳೆ, ಸಚಿವ ಚೆಲುವರಾಯ ಸ್ವಾಮಿ, ಸಚಿವ ಕೆ ಜೆ ಜಾರ್ಜ್, ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.

HD Kumaraswamy, Minister Cheluvaraya Swamy, CM Siddaramaiah
ಹೆಚ್ ಡಿ ಕುಮಾರಸ್ವಾಮಿ, ಸಚಿವ ಚೆಲುವರಾಯ ಸ್ವಾಮಿ,ಸಿಎಂ ಸಿದ್ದರಾಮಯ್ಯ

ವಿಧಾನಸಭೆಯಲ್ಲಿ ಕುಮಾರಸ್ವಾಮಿ vs ಸಿಎಂ ಸಿದ್ದರಾಮಯ್ಯ ಟಾಕ್​​ಫೈಟ್​

ಬೆಂಗಳೂರು: ನಾಗಮಂಗಲ ಕೆಎಸ್ಆರ್ ಟಿಸಿ ಸಿಬ್ಬಂದಿ ಆತ್ಮಹತ್ಯೆ ಯತ್ನ ವಿಚಾರ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಚೆಲುವರಾಯ ಸ್ವಾಮಿ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಭೋಜನ‌ ವಿರಾಮದ ಬಳಿಕ ಶೂನ್ಯ ವೇಳೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿ, ಕೆಎಸ್ಆರ್ ಟಿಸಿ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಬೇಕು. ಸಚಿವ ಚಲುವರಾಯ ಸ್ವಾಮಿ ರಾಜೀನಾಮೆ ನೀಡಬೇಕು. ಆತ್ಮಹತ್ಯೆಗೆ ಯಾರು ಕಾರಣ?. ಆತ ಮಾನಸಿಕವಾಗಿ ಹಿಂಸೆ ಆಗಿದೆ ಎಂದು ಪತ್ರ ಬರೆದಿದ್ದಾರೆ.‌

ಪ್ರಕರಣ ಸಂಬಂಧ ಎಫ್ ಐಆರ್ ಹಾಕಿಲ್ಲ, ಅಂತ ಪೊಲೀಸರು ಹೇಳಿದ್ದಾರೆ. ನೇರವಾಗಿ ಪತ್ರದಲ್ಲಿ ಯಾರ ಹೆಸರು ಬರೆದಿದ್ದೇನೆ. ಏಕೆ ಹೆಸರು ಬರೆದ?. ಯಾರು, ಯಾವ ತನಿಖೆ ನಡೆಸುತ್ತೀರಿ. ಈ ಹಿಂದೆ ಆರೋಪ ಬಂದಾಗ ಎಷ್ಟು ಮಂದಿ ರಾಜೀನಾಮೆ ನೀಡಿದ್ದರು. ನ್ಯಾಯಯುತವಾಗಿ ತನಿಖೆ ಮಾಡಬೇಕು. ಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಚಲುವರಾಯಸ್ವಾಮಿ, ನಾನು ವರ್ಗಾವಣೆಯ ಬಗ್ಗೆ ಯಾರಿಗೂ ಕರೆ ಮಾಡಿಲ್ಲ, ಪತ್ರ ಕೊಟ್ಟಿಲ್ಲ. ಆದರೆ ಅವರ ಕುಟುಂಬದವರೇ ವರ್ಗಾವಣೆ ರದ್ದು ಮಾಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಯವರಿಗೆ ಕರೆ ಮಾಡಿ ವಿಚಾರಿಸಿದ್ದೆ. ಅನಿವಾರ್ಯ ಇದ್ದರೆ ವರ್ಗಾವಣೆ ಮಾಡಿ, ಇಲ್ಲ ಎಂದರೆ ಬೇಡ ಎಂದಿದ್ದೆ. ಈ ಹಿನ್ನೆಲೆಯಲ್ಲಿ ಹೋಲ್ಡ್ ಮಾಡಿದ್ದಾರೆ.

ವರ್ಗಾವಣೆ ಆದ ಮೂರು ದಿನಗಳ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಚಾಲಕನ ಪತ್ನಿ ಗೆದ್ದಿದ್ದಾರೆ. ಆದರೆ ಅಲ್ಲಿ 12 ಸದಸ್ಯರು ಜೆಡಿಎಸ್ ಬೆಂಬಲಿತರು. ಅಧ್ಯಕ್ಷರನ್ನಾಗಿ ಮಾಡುವ ಪ್ರಯತ್ನ ನಾವು ಮಾಡುವ ಪ್ರಮೇಯ ಬರಲ್ಲ. ಸತ್ಯಕ್ಕೆ ದೂರವಾದ ವಿಚಾರ. ದೂರಿನಲ್ಲಿ ನನ್ನ ಹೆಸರು ಉಲ್ಲೇಖ ಮಾಡಿಲ್ಲ. ಸುಸೈಡ್ ಯತ್ನ ಮಾಡುವಾಗ ಲೆಟರ್ ಬರೆದಿದ್ದಾರೆ. ಆದರೆ ಪದೇ ಪದೆ ಮಾಜಿ ಸಿಎಂ ಡೆತ್ ನೋಟ್ ಅಂದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಿಕಿತ್ಸೆಗೆ ಮೈಸೂರಿಗೆ ಶಿಫ್ಟ್ ಮಾಡಲು ಮುಂದಾದರೆ ಕುಮಾರಸ್ವಾಮಿ ಸದ್ಯಕ್ಕೆ ಬೇಡ ಅಂದಿದ್ದಾರೆ. ನಾನು ಬರುವವರೆಗೆ ಆಸ್ಪತ್ರೆಗೆ ಶಿಫ್ಟ್ ಮಾಡಬೇಡಿ ಅಂದರೆ ಹೇಗೆ? ಹಾಗಾದರೆ ಯಾರ ಮೇಲೆ ಕೇಸ್ ಹಾಕಬೇಕು? ಪೊಲೀಸರ ಸಮ್ಮುಖದಲ್ಲಿ ಮತ್ತೆ ಶಿಫ್ಟ್ ಮಾಡಲಾಗುತ್ತದೆ.‌ ಫೋನ್ ಮಾಡಿ ಶಿಫ್ಟ್ ಮಾಡಬೇಡಿ ಮಾಜಿ ಸಿಎಂ ಕರೆ ಮಾಡುತ್ತಾರೆ. ಅವರ ಮೇಲೆ ಕೇಸ್ ಹಾಕಬೇಕಾ, ನನ್ನ ಮೇಲೆ ಕೇಸ್ ಹಾಕಬೇಕಾ ನೀವೇ ಹೇಳಿ. ಜೊತೆಗೆ ಶಿಫ್ಟ್ ಮಾಡದಂತೆ ತಡೆ ಮಾಡಿದರು. ನನ್ನನ್ನು ಅಪರಾಧಿ ಅಂದಿದ್ದು ತಪ್ಪು. ತೇಜೋವಧೆ ಮಾಡುವುದು ಸರಿಯಲ್ಲ. ಇದರಲ್ಲಿ ಯಾವುದೇ ಪಾತ್ರ ಇಲ್ಲ. ಇದರಲ್ಲಿ ರಾಜಕಾರಣ ಬೆರೆಸಿಲ್ಲ ಎಂದು ವಿವರಿಸಿದರು.

ಅಧಿಕಾರ ಇಲ್ಲಾಂದ್ರೆ ಕುಮಾರಸ್ವಾಮಿ ಅವರು ಬೆಳಗ್ಗೆ ಎದ್ದು ಸಂಜೆ ನನ್ನ ಬಳಿ ಫೈಲ್ ಇದೆ. ಸಿಡಿ ಇದೆ, ಪೆನ್ ಡ್ರೈವ್ ಇದೆ ಅಂತಾರೆ. ಸೋಲು ಗೆಲುವು ಕಾಮನ್, ಯಾವುದು ಅಧಿಕಾರ ಶಾಶ್ವತ ಅಲ್ಲ. ಎಪ್ಪತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಕೇಂದ್ರದಲ್ಲಿ ಈಗ ವಿಪಕ್ಷದಲ್ಲಿದೆ. ಬಿಜೆಪಿ 10 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಜನರ ತೀರ್ಮಾನ ಏನು ಅಂತ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ತೇಜೋವಧೆ ಮಾಡಬೇಡಿ. ಇದನ್ನೆಲ್ಲ ಬಿಟ್ಟು ಬಿಡಿ ಎಂದು ಮನವಿ ಮಾಡಿದರು.

ಹೆಚ್ ಡಿಕೆ ವರ್ಸಸ್ ಚೆಲುವರಾಯಸ್ವಾಮಿ ಜಟಾಪಟಿ: ಜೆಡಿಎಸ್ ಬಿಟ್ಟಿದ್ದು, ಬಿಜೆಪಿ ಮೈತ್ರಿ, ಕಾಂಗ್ರೆಸ್ ಮೈತ್ರಿ, ಸಿದ್ದರಾಮಯ್ಯ ಇದ್ದಾಗಿನ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ಚೆಲುವರಾಯ ಸ್ವಾಮಿ ನಡುವೆ ತೀವ್ರ ವಾಕ್ಸಮರ ನಡೆಯಿತು. ಸಿದ್ದರಾಮಯ್ಯ ಅವರಾಗಿ ಅವರು ಜೆಡಿಎಸ್ ಬಿಡಲಿಲ್ಲ. ಪಕ್ಷದಿಂದ ಅವರನ್ನು ಹೊರ ಹಾಕಿದರು. ಚೆಲುವರಾಯಸ್ವಾಮಿ ಆರೋಪಕ್ಕೆ ಜೆಡಿಎಸ್ ಸದಸ್ಯರು ಆಕ್ಷೇಪಿಸಿದರು. ನಾವು ಜೆಡಿಎಸ್ ನಲ್ಲಿದ್ದಾಗ ಹೆಚ್​​ಡಿಕೆ ಅವರನ್ನು ಸಿಎಂ ಮಾಡಲಿಲ್ಲ. ಅವರಿಗೆ ಶಕ್ತಿ ಇತ್ತು, ಆದ್ರು. ಈ ಸದನ ಅನುಮತಿ ಕೊಟ್ರೆ ಹಿಂದಿನ ಚರಿತ್ರೆ ಬಗ್ಗೆ ಚರ್ಚೆಗೆ ಸಿದ್ಧ. ಒಂದು ದಿನ ಅವಕಾಶ ಕೊಡಿ ನಾವು ಒಂದಷ್ಟು ಜನ ಹಿಂದಿನ ಚರಿತ್ರೆ ಬಗ್ಗೆ ಮಾತಾಡ್ತೀವಿ. ನಮ್ಮ ವಿರುದ್ಧ ಅವರ ಕಿರುಕುಳಕ್ಕೆ ಬೇಸತ್ತಿದ್ದೇವೆ ಎಂದರು.

ಸಿಟ್ಟಿಗೆದ್ದ ಕುಮಾರಸ್ವಾಮಿ: ಸಚಿವ ಚೆಲುವರಾಯ ಸ್ವಾಮಿ ಮಾತಿಗೆ ಸಿಟ್ಟಾದ ಕುಮಾರಸ್ವಾಮಿ, ನನ್ನ ಜೀವನದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಿ ಬಂದವನು ನಾನು. ನಾನು ಇವರ ಥರ ಕೊಲೆಗಡುಕ ರಾಜಕೀಯ ಮಾಡಿ ಬಂದಿಲ್ಲ ಎಂದು ಬಾಲಕೃಷ್ಣ, ಚೆಲುವರಾಯಸ್ವಾಮಿ ವಿರುದ್ಧ ಕಿಡಿಕಾರಿದರು. ನಾನು ಮೈಸೂರಿಗೆ ಜಗದೀಶ್ ಶಿಫ್ಟ್ ಮಾಡದಂತೆ ತಡೆದಿದೀನಿ ಅಂತ ಚೆಲುವರಾಯಸ್ವಾಮಿ ಆರೋಪ ಮಾಡಿದ್ದಾರೆ. ಜಗದೀಶ್ ಸಾಯಬೇಕು, ನಾನು ರಾಜಕೀಯ ಲಾಭ ಪಡೀಬೇಕು ಅಂತ ನನ್ನ ಮೇಲೆ ಆರೋಪ ಮಾಡಿದ್ದಾರೆ. ನಾನು ಯಾರ್ಯಾರಿಗೆ ಕರೆ ಮಾಡಿದ್ದೇನೆ. ಏನೇನು ಹೇಳಿದ್ದೇನೆ ಅನ್ನೋ ಬಗ್ಗೆ ಪೊಲೀಸರ ಬಳಿ ಕರೆ ರೆಕಾರ್ಡ್ ಇದೆ, ನೋಡಿ ನೀವೇ ಎಂದರು

ಹೆಚ್ ಡಿಕೆ ಕೊಲೆಗಡುಕ ಆರೋಪಕ್ಕೆ ಕಾಂಗ್ರೆಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಬಾಲಕೃಷ್ಣ ಹಾಗೂ ಸಚಿವ ಚಲುವರಾಯಸ್ವಾಮಿ ಆಕ್ರೋಶ ಹೊರಹಾಕಿದರು. ನಮ್ಮ ಹಂಗಿನಲ್ಲಿ ನೀವು ಸಿಎಂ ಆಗಿದ್ದು. ಈ ಸದನ ನಿಮ್ಮ ಅಪ್ಪಂದು ಅಲ್ಲ, ನಮ್ಮ ಅಪ್ಪಂದು ಅಲ್ಲ. ರಾಜ್ಯದ ಆರೂವರೆ ಕೋಟಿಯ ಜನರದ್ದು ಎಂದು ಬಾಲಕೃಷ್ಣ, ಚಲುವರಾಯಸ್ವಾಮಿ ಹಾಗೂ ಕುಮಾರಸ್ವಾಮಿ ನಡುವೆ ಮಾತಿನ ಫೈಟ್ ನಡೆಯಿತು.

ಇದಕ್ಕೆ ಕೆಂಡಾಮಂಡಲರಾದ ಕುಮಾರಸ್ವಾಮಿ, ಉಡುಪಿಯಲ್ಲಿ ಕಂಟ್ರ್ಯಾಕ್ಟರ್ ಸತ್ತ ಅಂತಾ ಈಶ್ವರಪ್ಪ ರಾಜೀನಾಮೆ ಮಾಡಿಸಿದ್ರಲ್ಲ ಕಿತ್ತೊದ ಕಾಂಗ್ರೆಸ್ ನವ್ರರೇ. ನಿಮಗೆ ಯಾವ ನೈತಿಕತೆ ಇದೆ ಮಾತಾಡೋಕೆ. ಇವರು ನನ್ನ ಜೊತೆ ಮಾತಾನಾಡಬೇಕಾ ಪುಟ್ಗೋಸಿ. ಮೊದಲು ತನಿಖೆ ಕೊಡಿ, ಅಲ್ಲಿವರೆಗೂ ಅವರು ರಾಜೀನಾಮೆ ಕೊಡಲಿ. ಅಲ್ಲಿವರೆಗೂ ನಾವು ಪ್ರತಿಭಟನೆ ನಿಲ್ಲಿಸಲ್ಲ. ನಾವು ನಮ್ಮ ಧರಣಿ ಮುಂದುವರಿಸುತ್ತೇವೆ ಎಂದು ಬಾವಿಗಿಳಿದರು ಪ್ರತಿಭಟನೆಗಿಳಿದರು.

224 ಶಾಸಕರಿಗೂ ಪೆನ್ ಡ್ರೈವ್ ಆಡಿಯೋ ಕಳಿಸುತ್ತೇನೆ:ಇದೇ ವೇಳೆ ಸಚಿವ ಕೆ ಜೆ ಜಾರ್ಜ್ ಚೆಲುವರಾಯಸ್ವಾಮಿ ಪರ ರಕ್ಷಣೆಗೆ ಬಂದು ಎಚ್ಡಿಕೆ ವಿರುದ್ಧ ಮುಗಿಬಿದ್ರು. ಜಾರ್ಜ್ ಮತ್ತು ಎಚ್ಡಿಕೆ ಮಧ್ಯೆಯೂ ಸಾಕಷ್ಟು ಜಟಾಪಟಿ ನಡೀತು. ತಾಕತ್ ಇದ್ರೆ ನಿಮ್ಮ ಬಳಿ ಇರೋ ಪೆನ್‌ಡ್ರೈವ್ ಕೊಡಿ ತನಿಖೆ ಮಾಡ್ತೀವಿ ಅಂತ ಕೆ.ಜೆ.ಜಾರ್ಜ್ ಸವಾಲು ಹಾಕಿದ್ರು. ಇದಕ್ಕೆ ಎಚ್ ಡಿಕೆ, ಇಲ್ಲೇ ಆಡಿಯೋ ವ್ಯವಸ್ಥೆ ಮಾಡಿ 224 ಶಾಸಕರಿಗೂ ಪೆನ್‌ಡ್ರೈವ್ ಆಡಿಯೋ ಕೇಳಿಸ್ತೀನಿ ಅಂತ ಹೆಚ್ ಡಿಕೆ ಪ್ರತಿ ಸವಾಲೊಡ್ಡಿದ್ರು. ಇನ್ನೂ ಪೆನ್‌ಡ್ರೈವ್ ನಲ್ಲಿರುವ ಸಚಿವರ ಹೆಸರೇ ಹೇಳಿಲ್ಲ. ನೀವ್ಯಾಕೆ ಮೈಪರಚಿಕೊಳ್ತೀರ ಅಂತ ಜಾರ್ಜ್ ಗೆ ಎಚ್ ಡಿಕೆ ಟಾಂಗ್ ಕೊಟ್ರು.

ಹೆಚ್ ಡಿಕೆ Vs ಸಿದ್ದರಾಮಯ್ಯ: ಮಾತಾಡುವಾಗ ಸಿಎಂ ಸಿದ್ದರಾಮಯ್ಯರನ್ನೂ ಎಚ್​​​ಡಿಕೆ ಕೆಣಕಿದ್ರು.‌ ಇಂದು ಬೆಳಗ್ಗೆ ಸಿದ್ದರಾಮಯ್ಯರ ಮಾಧ್ಯಮದ ಮುಂದೆ ನೀಡಿದ ಹೇಳಿಕೆ ಬಗ್ಗೆ ಉಲ್ಲೇಖಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಮಾಧ್ಯಮಗಳ ಎದುರು ಮಾತಾಡುವಾಗ ದೇವೇಗೌಡರು ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಒಳ್ಳೆಯದಾಗಿ ಉತ್ತರ ಕೊಟ್ಟುಬಿಟ್ಟಿದ್ದಾರೆ ಅಂತ‌ ಕೆಲವರು ಅವರಿಗೆ ಶೇಕ್ ಹ್ಯಾಂಡ್ ಕೊಟ್ರು. ಇದನ್ನೆಲ್ಲ ನಾನು ಗಮನಿಸುತ್ತಿದ್ದೇನೆ. ದೇವೇಗೌಡರನ್ನು ನೀವು ಕುತ್ತಿಗೆ ಕುಯ್ದ್ರಿ. ಜೆಡಿಎಸ್ ನ ಬಿಜೆಪಿ ಬಿ ಟೀಮ್ ಅಂದ್ರು.

ಈಶ್ವರಪ್ಪರನ್ನು ಸಣ್ಣ ವಿಷಯಕ್ಕೆ ರಾಜೀನಾಮೆ ತಗೊಂಡ್ರಲ್ಲ. ಈಗ ಯಾಕೆ ಚೆಲುವರಾಯಸ್ವಾಮಿ ರಾಜೀನಾಮೆ ಕೊಡ್ತಿಲ್ಲ ಅಂತ ಎಂದು ಸಿದ್ದರಾಮಯ್ಯಗೆ ಹೆಚ್​​​​​ಡಿಕೆ ಟಕ್ಕರ್ ಕೊಟ್ರು. ಹೆಚ್​​​ಡಿಕೆ ಮಾತಿಗೆ ಸಿಟ್ಟಾದ ಸಿಎಂ, ನಿಮಗೆ ಯಾರು ಹೆದರಿಕೊಳ್ಳವುದಿಲ್ಲ ಕುಮಾರಸ್ವಾಮಿ ಅವರೇ.‌ ನನಗೂ ಇದಕ್ಕೂ ಏನ್ರೀ ಸಂಬಂಧ, ನನಗೆ ಇದರ ಬಗ್ಗೆ ಗೊತ್ತೇ ಇಲ್ಲ. ಯಾರಿಗೇ ನೀವು ಹೆದರಿಸ್ತೀರಿ. ನಾನು‌ ಹೆದರಿಕೊಂಡು ರಾಜಕಾರಣ ಮಾಡಿಲ್ಲ ಅಂತ ಸಿಎಂ‌ ಸಹ ತಿರುಗೇಟು ಕೊಟ್ರು.

ಇದನ್ನೂಓದಿ:ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ: ವಾಗ್ವಾದ, ಧರಣಿ

Last Updated : Jul 7, 2023, 9:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.