ETV Bharat / state

ಮುಕ್ತ ಮಾತುಕತೆಯಿಂದ ಆತ್ಮಹತ್ಯೆ ತಡೆ ಸಾಧ್ಯ : ಮನೋವೈದ್ಯ ಡಾ. ಸತೀಶ್ ಕುಮಾರ್ - ಆತ್ಮಹತ್ಯೆಗೆ ಪ್ರಚೋದಿಸುವ ವಿಚಾರ

ನಮ್ಮ ದೇಶದಲ್ಲಂತೂ ಅಚ್ಚರಿಯೆಂಬಂತೆ ಪ್ರತಿ 4 ನಿಮಿಷಗಳಿಗೊಮ್ಮೆ ಕನಿಷ್ಟ ಅಂದ್ರt ಒಂದು ಆತ್ಮಹತ್ಯೆ ಪ್ರಕರಣ ವರದಿ ಆಗ್ತಿವೆ. ಉದ್ಯೋಗ ನಷ್ಟ, ಕೌಟುಂಬಿಕ ಕಲಹ, ಸಾಲದ ಸುಳಿಯಲ್ಲಿ ಸಿಲುಕಿ ಕಡೆಗೆ ಆತ್ಮಹತ್ಯೆಯ ದಾರಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ, ಜನರಲ್ಲಿ ಸಕಾರಾತ್ಮಕ ಭಾವನೆ ಮೂಡಿಸಲು ನಾನಾ ತಂತ್ರಗಳನ್ನ ಮಾಡ್ತಿದ್ದರೂ, ಯಾವುದೇ ಪ್ರಯೋಜನ ಆಗ್ತಿಲ್ಲ..

dr-sathish-kumar
ಡಾ. ಸತೀಶ್ ಕುಮಾರ್
author img

By

Published : Sep 25, 2021, 12:00 AM IST

ಬೆಂಗಳೂರು : ಆತ್ಮಹತ್ಯೆ.. ಈಗಂತೂ ಸಣ್ಣ ಸಮಸ್ಯೆ ಎದುರಾದರೂ ಅದನ್ನ ಎದುರಿಸಲು ಆಗದೇ ಅದರಿಂದ ಹೊರಬರಲು ಆಗದೇ ಜನ ಬಹುಬೇಗ ದುಡುಕುವ ನಿರ್ಧಾರಕ್ಕೆ ಬಂದು ಬಿಡ್ತಾರೆ. ಆತ್ಮಹತ್ಯೆಯನ್ನ ಇಂತಹದ್ದೇ ನಿರ್ದಿಷ್ಟ ವಿಷಯಕ್ಕೆ ಮಾಡಿಕೊಳ್ತಾರೆ ಅನ್ನುವುದು ಇಲ್ಲ.

ಪರೀಕ್ಷೆಯಲ್ಲಿ ಫೇಲ್ ಆದೆ ಎಂಬುದರಿಂದ ಶುರುವಾಗಿ ಪ್ರೀತಿಸದವರು ಸಿಗದೇ ಇದ್ದಾಗ, ಉದ್ಯೋಗಾವಕಾಶ ತಪ್ಪಿದಾಗ, ಪೋಷಕರು ಹೊಡೆದ್ರೂ, ಬೈದ್ರೂ ಹೀಗೆ ನೂರಾರು ಕಾರಣಕ್ಕೆ ಕೆಟ್ಟ ನಿರ್ಧಾರಕ್ಕೆ ಕೈಹಾಕಿ ಬಿಡ್ತಾರೆ. ಅದರಲ್ಲೂ ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಹಾಗೂ ದಾವಣಗೆರೆಯಲ್ಲಿ ಕುಟುಂಬ ಆತ್ಮಹತ್ಯೆ ಪ್ರಕರಣಗಳನ್ನು ಕಾಣಬಹುದು‌‌.

ಮನೋವೈದ್ಯ ಡಾ. ಸತೀಶ್ ಕುಮಾರ್

ನಮ್ಮ ದೇಶದಲ್ಲಂತೂ ಅಚ್ಚರಿಯೆಂಬಂತೆ ಪ್ರತಿ 4 ನಿಮಿಷಗಳಿಗೊಮ್ಮೆ ಕನಿಷ್ಟ ಅಂದ್ರು ಒಂದು ಆತ್ಮಹತ್ಯೆ ಪ್ರಕರಣ ವರದಿ ಆಗ್ತಿವೆ. ಉದ್ಯೋಗ ನಷ್ಟ, ಕೌಟುಂಬಿಕ ಕಲಹ, ಸಾಲದ ಸುಳಿಯಲ್ಲಿ ಸಿಲುಕಿ ಕಡೆಗೆ ಆತ್ಮಹತ್ಯೆಯ ದಾರಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ, ಜನರಲ್ಲಿ ಸಕಾರಾತ್ಮಕ ಭಾವನೆ ಮೂಡಿಸಲು ನಾನಾ ತಂತ್ರಗಳನ್ನ ಮಾಡ್ತಿದ್ದರೂ, ಯಾವುದೇ ಪ್ರಯೋಜನ ಆಗ್ತಿಲ್ಲ.

ಪ್ರತಿ ವರ್ಷ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆ ದಿನ ಆಚರಿಸಲಾಗುತ್ತಿದೆ. ಆತ್ಮಹತ್ಯೆ ಆಲೋಚನೆಗಳಿಂದ ಕೂಡಿರುವ ಜನರಿಗೆ ಭರವಸೆ ನೀಡುವ ಕೆಲಸ ಮಾಡಲಾಗುತ್ತಿದೆ. ಮಾಹಿತಿ ಪ್ರಕಾರ, ಆತ್ಮಹತ್ಯೆ ಪ್ರಕರಣದಲ್ಲಿ ಭಾರತ 16ನೇ ಸ್ಥಾನದಲ್ಲಿದೆ. ಆತ್ಮಹತ್ಯೆ ಕುರಿತು ಸಮೀಕ್ಷೆಯೊಂದನ್ನ ನಡೆಸಿದಾಗ ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ 20 ಜನ ಆತ್ಮಹತ್ಯೆಗೆ ಯತ್ನಿಸುವ ಕೆಲಸ ಮಾಡಿದ್ದಾರೆ.

ಹಾಗೆಯೇ, 200 ಜನ ಆತ್ಮಹತ್ಯೆ ಬಗೆ ಯೋಚನೆ ಮಾಡುವ ಮನಸ್ಥಿತಿ ಹೊಂದಿದ್ದಾರೆ. ಹೀಗಾಗಿ, ಸೂಕ್ತ ಸಮಾಲೋಚನೆ, ಮಾರ್ಗದರ್ಶನ ನೀಡುವ ಮೂಲಕ ಆತ್ಮಹತ್ಯೆ ನಿಯಂತ್ರಣ ಮಾಡಬಹುದು.‌ ‌

ಆತ್ಮಹತ್ಯೆಗೆ ಪ್ರಚೋದಿಸುವ ವಿಚಾರಗಳೇನು?

* ವ್ಯಕ್ತಿಯು ಒಂಟಿಯಾಗಿರುವುದು.
* ವ್ಯಕ್ತಿಗೆ ತನ್ನ ಬಗ್ಗೆ ತಾನೇ ಕೀಳರಿಮೆ ಹೊಂದುವುದು.
* ಭದ್ರತೆ ಇಲ್ಲವೆಂದು ತಿಳಿಯುವುದು.
* ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ಅಂದರೆ ಆತ್ಮೀಯರ ಸಾವು, ಸ್ನೇಹಿತರಿಂದ ದೂರ, ಪ್ರೇಮವೈಫಲ್ಯ, ಉದ್ಯೋಗ ನಷ್ಟ ಇತ್ಯಾದಿ.
* ಮರಣಾಂತಿಕ ಶರೀರದ ಅನಾರೋಗ್ಯ ಸಮಸ್ಯೆ ಅಂದರೆ ಏಡ್ಸ್, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಆತ್ಮಹತ್ಯೆಗೆ ಪ್ರೇರಣೆ ಆಗಬಹುದು.
* ಮಾನಸಿಕ ಖಿನ್ನತೆಗೆ ಒಳಗಾದವರು.
* ಮದ್ಯ ಸೇವನೆ ಸೇರಿ ಆತ್ಮಹತ್ಯೆಗೆ ಸುತ್ತಮುತ್ತಿಲಿನ ವಾತಾವರಣ ಹಾಗೂ ಮನೆಯ ವ್ಯವಹಾರಗಳು ಕಾರಣವಾಗಬಹುದು ಅಂತಾರೆ ವೈದ್ಯರು.

ಮುಕ್ತ ಮಾತುಕತೆಯಿಂದ ಆತ್ಮಹತ್ಯೆ ತಡೆಯಲು ಸಾಧ್ಯ

ಇತ್ತೀಚೆಗಂತೂ ಕೆಲ ಕುಟುಂಬಗಳು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಮಾನಸಿಕವಾಗಿ ದುಗುಡಗಳು ಇದ್ದಾಗಲೂ ಅಥವಾ ಕಿರಿಕಿರಿ ಅನುಭವಿಸುತ್ತಿದ್ದರೆ ಅದನ್ನು ಮುಕ್ತವಾಗಿ ಇನ್ನೊಬ್ಬರಲ್ಲಿ ಹಂಚಿಕೊಳ್ಳಬೇಕು. ಆದರೆ, ಸಾಕಷ್ಟು ಮಂದಿ ಈ ಕೆಲಸ ಮಾಡೋದಿಲ್ಲ.

ಬದಲಿಗೆ ನಮ್ಮ ನೋವು ಹೇಳಿಕೊಂಡರೆ ಅವರ ಮುಂದೆ ದುರ್ಬಲರಾಗಿ ಬಿಡ್ತೀವಿ ಅನ್ನೋ ಅಳುಕು ಹೆಚ್ಚಾಗಿ ಇರುತ್ತೆ ಅಂತಾ ಮಣಿಪಾಲ್ ಆಸ್ಪತ್ರೆಯ ಮನೋವೈದ್ಯರಾಗಿರುವ ಡಾ. ಸತೀಶ್ ಕುಮಾರ್ ಸಿ ಆರ್ ತಿಳಿಸಿದರು.

ಯಾವುದೇ ವಿಚಾರಗಳು ಆದರೂ ಮುಕ್ತವಾಗಿ ಮಾತಾಡಬೇಕು‌. ಆಗಷ್ಟೇ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತೆ‌. ಮನೆಯ ಸದಸ್ಯರು ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಅದು ಮಕ್ಕಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ‌. ಮುಂದೊಂದು ದಿನ ಅವ್ರಿಗೂ ಆತ್ಮಹತ್ಯೆ ಪ್ರಚೋದಿಸಿದಂತೆ ಆಗುತ್ತೆ ಅಂತಾ ವಿವರಿಸಿದರು.

ಬಹಳಷ್ಟು ಪ್ರಕರಣಗಳಲ್ಲಿ ವ್ಯಕ್ತಿಗಳು ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದರೂ, ಅದನ್ನ ತೋರಿಸಿಕೊಳ್ಳದೇ ಚೆನ್ನಾಗಿ ಇರುವಂತೆ ನಡೆದುಕೊಳ್ಳುತ್ತಾರೆ. ತೊಂದರೆ ಹೇಳಿಕೊಂಡರೆ ಏನು ಅಂದುಕೊಳ್ಳುತ್ತಾರೋ ಎಂಬ ಭಾವನೆಗಳಿಂದಲೇ ಮಾನಸಿಕ ರೋಗವನ್ನ ಹೆಚ್ಚು ಮಾಡಿಕೊಳ್ಳುತ್ತಾರೆ.

ಹಾಗೇ ಸಮಸ್ಯೆಯನ್ನು ನಾನೇ ನೋಡಿಕೊಳ್ತೀನಿ, ಸರಿಮಾಡಿಕೊಳ್ತೀನಿ ಅಂತಾ ಅಂದುಕೊಂಡು ತೊಂದರೆಗಳು ಹೆಚ್ಚಾದಾಗ ಅದನ್ನ ನಿರ್ವಹಿಸಲು ಆಗದೇ ಆತ್ಮಹತ್ಯೆಗೆ ಮುಂದಾಗ್ತಾರೆ ಅಂತಾ ತಿಳಿಸಿದರು.

ಆತ್ಮಹತ್ಯೆಯಲ್ಲಿ ಯುವ ಜನರೇ ಹೆಚ್ಚು ಪಾಲು

ಆತ್ಮಹತ್ಯೆ ಎಂಬ ವಿಚಾರ ಬಂದಾಗ ಬಹುಪಾಲು ಯುವಜನರೇ ಹೆಚ್ಚಿನ ಪಾಲಿನಲ್ಲಿ ಇರ್ತಾರೆ. ಭವಿಷ್ಯದ ಚಿಂತೆಯಿಂದ ಹಿಡಿದು ಪ್ರೇಮ ವೈಫಲ್ಯವಾದರೂ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಅಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಮಾನಸಿಕ ತೊಂದರೆಗಳನ್ನ ಯಾವುದೇ ಮುಜುಗರವಿಲ್ಲದೆ ತಜ್ಞರ ಬಳಿ ಬಂದು ಚಿಕಿತ್ಸೆ ಪಡೆದುಕೊಳ್ಳಬೇಕು. ಆಗ ಮಾತ್ರ ಜೀವರಕ್ಷಣೆ ಸಾಧ್ಯವಾಗುತ್ತೆ‌‌.

ಓದಿ: ಮಾನಸಿಕ ಆರೋಗ್ಯಕ್ಕೆ ಸಂಗೀತವೇ ಮದ್ದು.. ಇದು ಬರೀ ಮಾತಲ್ಲ, ಸಂಶೋಧನೆಯಿಂದ ಸಾಬೀತು..

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.