ಬೆಂಗಳೂರು: ಸದಾಶಿವನಗರ ಪೂರ್ಣಪ್ರಜ್ಞಾ ಎಜುಕೇಶನ್ ಸ್ಕೂಲ್ನಲ್ಲಿಂದು ಸರತಿ ಸಾಲಿನಲ್ಲಿ ನಿಂತು ಡಾ.ರಾಜ್ ಕುಟುಂಬದ ಸದಸ್ಯರು ಮತ ಚಲಾಯಿಸಿದರು. ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಯುವ ರಾಜ್ಕುಮಾರ್ ಮತ ಹಾಕಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ, ರಾಘವೇಂದ್ರ ರಾಜ್ಕುಮಾರ್ ಅವರು ಸಹೋದರ ಪುನೀತ್ ನೆನೆದು ಭಾವುಕರಾದರು.
"ಅಪ್ಪು ಇಲ್ಲದೇ ಮತದಾನ ಮಾಡಿದ ನೋವಿದೆ. ಮೊದಲು ಅಪ್ಪ ಅಮ್ಮನ ಜೊತೆಗೆ ವೋಟ್ಗೆ ಬರ್ತಿದ್ವಿ. ನಂತರ ನಾನು ಶಿವಣ್ಣ ಮತ್ತು ಅಪ್ಪು ಬರ್ತಿದ್ವಿ. ಆದರೆ ಮೊದಲ ಬಾರಿಗೆ ಅಪ್ಪು ಇಲ್ಲದೇ ಮತದಾನ ಮಾಡಲು ಬಂದಿದ್ದೇವೆ. ಬೇಜಾರಿದೆ. ಮತದಾನ ಎಲ್ಲರ ಹಕ್ಕು. ನಾನು ಮತ ಚಲಾಯಿಸಿದ್ದೇನೆ. ನೀವೂ ಕೂಡ ವೋಟ್ ಮಾಡಿ" ಎಂದು ಕನ್ನಡ ಜನತೆಯಲ್ಲಿ ಮನವಿ ಮಾಡಿದರು.
ಯುವ ರಾಜ್ಕುಮಾರ್ ಮಾತನಾಡಿ, "ಅಪ್ಪು ಚಿಕ್ಕಪ್ಪನನ್ನು ಈ ದಿನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ಪ್ರತಿ ದಿನ ಪ್ರತಿ ಕ್ಷಣ ನೆನಪಾಗ್ತಾರೆ. ನಾನು ಮತ ಚಲಾಯಿಸಿದ್ದೇನೆ. ಮತದಾನ ನಮ್ಮೆಲ್ಲರ ಕರ್ತವ್ಯ. ಎಲ್ಲರೂ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ" ಎಂದು ಹೇಳಿದರು.
ಇದನ್ನೂ ಓದಿ: ಮದುವೆಗೂ ಮುನ್ನ ಮತ: ಚಿಕ್ಕಮಗಳೂರಿನಲ್ಲಿ ಕರ್ತವ್ಯ ಪ್ರಜ್ಞೆ ಮೆರೆದ ವಧು!