ETV Bharat / state

ಕೋವಿಡ್ ಜತೆಗೆ ಕಾಡಲಿವೆ ಮಳೆಗಾಲದ ಸಾಂಕ್ರಾಮಿಕ ಕಾಯಿಲೆಗಳು: ಆರೋಗ್ಯ ಸಚಿವರ ಎಚ್ಚರಿಕೆ

ಕೋವಿಡ್‌ ಪ್ರಕರಣಗಳು ಇಳಿಕೆಯಾಗಿವೆಯೇ ಹೊರತು ಸೋಂಕು ಸಂಪೂರ್ಣವಾಗಿ ತೊಲಗಿಲ್ಲ. ಕೋವಿಡ್​ ಜತೆಗೆ ಮಳೆಗಾಲದ ಸಾಂಕ್ರಾಮಿಕ ಕಾಯಿಲೆಗಳು ನಮ್ಮನ್ನು ಕಾಡಲಿವೆ. ಹಾಗಾಗಿ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್​ ಮನವಿ ಮಾಡಿದ್ದಾರೆ.

ಸಾಂಕ್ರಾಮಿಕ ಕಾಯಿಲೆಗಳು
Infectious diseases
author img

By

Published : Jun 22, 2021, 2:04 PM IST

ಬೆಂಗಳೂರು: ಕೋವಿಡ್ ಜೊತೆಗೆ ರಾಜ್ಯದ ಜನರು ಮಳೆಗಾಲದಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಸಾಂಕ್ರಾಮಿಕ ಕಾಯಿಲೆ ಕುರಿತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಪ್ರತಿಕ್ರಿಯೆ

ಡೆಂಗ್ಯೂನಂತಹ ಕಾಯಿಲೆಗಳೀಗ ಪುನಃ ಸದ್ದು ಮಾಡಲು ಶುರು ಮಾಡಿವೆ. ಸಾಮಾನ್ಯವಾಗಿ ಪ್ರತೀ ವರ್ಷ ರಾಜ್ಯದಲ್ಲಿ 15-20 ಸಾವಿರ ಜನರಿಗೆ ಈ ಜ್ವರ ಕಾಣಿಸಿಕೊಳ್ಳುತ್ತಿದ್ದು, ಈಡಿ ಸೂಳ್ಳೆಯಿಂದ ಇದು ಉಲ್ಬಣಗೊಳ್ಳುತ್ತದೆ. ಮುಂಗಾರು ಆರಂಭವಾಗಿರುವ ಕಾರಣ ಮಳೆ ನೀರು ಅಥವಾ ಸಂಗ್ರಹಿಸಿದ ನೀರು, ವಾರಗಟ್ಟಲೆ ಮನೆಯಲ್ಲಿಯೇ ನೀರಿನ ಶೇಖರಣೆ, ಗಿಡಗಳ ಕುಂಡ, ಎಸೆದ ಟೈರ್, ಹಳೆಯ ಡ್ರಮ್, ತೊಟ್ಟಿಯಲ್ಲಿ ನಿಂತಿರುವ ನೀರಿನ ಜಾಗದಲ್ಲಿ ಡೆಂಗ್ಯೂ ಹರಡುವ ಸೊಳ್ಳೆ ಉತ್ಪತ್ತಿ ಹೆಚ್ಚಾಗಲಿದೆ.

ಹೀಗಾಗಿ, ಜನರು ಕೊರೊನಾ ಸಂದರ್ಭದಲ್ಲಿ ಹೇಗೆ ಮುನ್ನೆಚ್ಚರಿಕೆ ಜಾಗ್ರತೆಯನ್ನು ವಹಿಸಿದ್ದರೋ ಹಾಗೆಯೇ ಡೆಂಗ್ಯೂ ಬಗ್ಗೆಯೂ ಸ್ವಚ್ಛತೆ ಕಾಪಾಡುವ ಅವಶ್ಯಕತೆ ಇದೆ.

ಏಡಿಸ್ ಈಜಿಪ್ಟಿ ಸೊಳ್ಳೆಯಿಂದ ಹರಡುವ ಡೆಂಗ್ಯೂ:

ಏಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆಯಿಂದ ಹರಡುವ ಸೋಂಕು ಡೆಂಗ್ಯೂ. ಈ ಸೊಳ್ಳೆ ನಿಂತಿರುವ ಶುದ್ಧ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಹೆಚ್ಚು ಮಾಡುತ್ತದೆ. ಇದು ಇತರೆ ಜ್ವರದಂತೆ ಒಬ್ಬರಿಂದ ಮತ್ತೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಬದಲಿಗೆ ಹಗಲು ಹೊತ್ತಿನಲ್ಲಿ ಕಚ್ಚುವ ಏಡಿಸ್ ಈಜಿಪ್ಟಿ ಸೊಳ್ಳೆಯಿಂದ ಡೆಂಗ್ಯೂ ಕಾಣಿಸಿಕೊಳ್ಳುತ್ತದೆ. ಹೀಗೆ ಡೆಂಗ್ಯೂ ಬಂದ ವ್ಯಕ್ತಿಯಲ್ಲಿ ಪ್ರತಿ ಎಂಎಲ್ ರಕ್ತದಲ್ಲಿ ಪ್ಲೇಟೆಟ್ ಸಂಖ್ಯೆ ಕಡಿಮೆ ಆಗುತ್ತಾ, ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆಯಿದೆ.

ಡೆಂಗ್ಯೂ ಜ್ವರದ ಲಕ್ಷಣಗಳೇನು?

- ತೀವ್ರ ಜ್ವರ ಕಾಣಿಸಿಕೊಳ್ಳುವುದು.

- ತಲೆ ನೋವು ಹಾಗೂ ಹಣೆಯ ಮುಂಭಾಗದಲ್ಲಿ ನೋವು ಬರುವುದು.

- ಮೈ-ಕೈ ನೋವು, ಕೀಲು ನೋವಾಗುವುದು.

- ವಾಂತಿ, ಭೇದಿ, ಆಲಸ್ಯ ಉಂಟಾಗುವುದು.

ಮುನ್ನೆಚ್ಚರಿಕೆ ಹೇಗೆ?

- ಸ್ವಚ್ಛತೆ ಕಡೆ ಗಮನ ಕೊಡುವುದು.

- ನೀರು ಸ್ವಚ್ಛಗೊಳಿಸುವುದು.

- ಮನೆ, ಅಕ್ಕ-ಪಕ್ಕ ನೀರು ನಿಲ್ಲದಂತೆ ಎಚ್ಚರ ವಹಿಸುವುದು.

- ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ಬತ್ತಿ, ಲಿಕ್ಟಿಡ್ ಬಳಸುವುದು.

-ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ ಹಾಕುವುದು ಉತ್ತಮ.

- ಪೂರ್ತಿ ತೋಳಿರುವ ಉಡುಪು ಧರಿಸುವುದು ಒಳಿತು.

ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ: ಸಿಎಂಗೆ ವರದಿ ಸಲ್ಲಿಸಿದ ತಜ್ಞರ ಸಮಿತಿ

ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಕೋವಿಡ್ ಜತೆಗೆ ಡೆಂಗ್ಯೂದಂತಹ ಜ್ವರವೂ ಕಾಡಲಿದ್ದು ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಸಾಮಾನ್ಯವಾಗಿ ಪ್ರತೀ ವರ್ಷ ನಮ್ಮ ರಾಜ್ಯದಲ್ಲಿ 15-20 ಸಾವಿರ ಜನರಲ್ಲಿ ಈ ರೋಗ ಕಾಣಿಸಿಕೊಳ್ತಿದೆ. ಮಳೆಗಾಲದಲ್ಲಿ ಹೆಚ್ಚು ಕಾಡಲಿದ್ದು, ಶುಚಿತ್ವದ ಕುರಿತು ಎಚ್ಚರಿಕೆ ವಹಿಸಬೇಕು.‌

ಜ್ವರ, ತಲೆ ನೋವು, ಮೈ-ಕೈ ನೋವು, ವಾಂತಿ, ಸ್ನಾಯು ಸೆಳೆತ, ರಕ್ತಸ್ರಾವದಂತಹ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೇ ಹತ್ತಿರದ ವೈದ್ಯರ ಸಂಪರ್ಕ ಮಾಡಬೇಕು. ಹಿರಿಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು ವಿಶೇಷವಾಗಿ ಕಾಳಜಿಯನ್ನು ವಹಿಸಬೇಕೆಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.