ETV Bharat / state

ಡಯಾಲಿಸಿಸ್ ಕೇಂದ್ರಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಸಚಿವ ಡಾ.ಕೆ.ಸುಧಾಕರ್

author img

By

Published : Jun 24, 2022, 10:51 PM IST

ಡಯಾಲಿಸಿಸ್ ಸಿಬ್ಬಂದಿಯ ಬೇಡಿಕೆಗಳನ್ನು ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದ್ದಾರೆ.

ಡಯಾಲಿಸೀಸ್ ಕೇಂದ್ರಗಳಲ್ಲಿನ ಸಿಬ್ಬಂದಿ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಸಚಿವ ಡಾ. ಕೆ ಸುಧಾಕರ್

ಬೆಂಗಳೂರು: ಡಯಾಲಿಸೀಸ್ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪ್ರತಿನಿಧಿಗಳ ಜೊತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಇಂದು ಸಭೆ ನಡೆಸಿ ಅವರ ಬೇಡಿಕೆಗಳ ಬಗ್ಗೆ ಚರ್ಚಿಸಿದರು.

ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಮತ್ತು ನಿರ್ದೇಶಕರು ಹಾಗೂ ಡಯಾಲಿಸಿಸ್ ಏಜೆನ್ಸಿಯ ಪ್ರತಿನಿಧಿ ಹಾಗೂ ಮುಷ್ಕರದಲ್ಲಿ ಭಾಗವಹಿಸಿದ ಡಯಾಲಿಸಿಸ್‌ ಸಿಬ್ಬಂದಿಗಳು ಹಾಜರಿದ್ದರು. ಡಯಾಲಿಸಿಸ್ ಸಿಬ್ಬಂದಿಯ ಬೇಡಿಕೆಗಳನ್ನು ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಡಯಾಲಿಸಿಸ್ ಸಿಬ್ಬಂದಿಗಳು ಹಿಂಪಡೆದಿರುತ್ತಾರೆ. ಈ ಕೂಡಲೇ ಡಯಾಲಿಸಿಸ್ ಸೇವೆಯನ್ನು ಪುನರಾರಂಭಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಯ ಹೊಣೆಗಾರಿಕೆ ವಹಿಸಿಕೊಂಡು, ಡಯಾಲಿಸಿಸ್ ಸೇವೆಗಾಗಿ ಕಾಯ್ದಿರಿಸಲಾದ ರೋಗಿಗಳಿಗೆ ಶೀಘ್ರವಾಗಿ ಡಯಾಲಿಸಿಸ್ ಸೇವೆ ಒದಗಿಸಲು ಕ್ರಮವಹಿಸುವುದು ಎಂದು ಇಲಾಖೆ ತಿಳಿಸಿದೆ. ಬೇಡಿಕೆ ಈಡೇರಿಕೆ ಸಂಬಂಧಿಸಿದಂತೆ ಸೂಕ್ತ ಕ್ರಮದ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವುದಾಗಿ ಸಿಬ್ಬಂದಿ ಪ್ರಕಟಿಸಿದರು. ಈಗಾಗಲೇ ಬಹುತೇಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಯಾಲಿಸಿಸ್ ಘಟಕಗಳ ಸಿಬ್ಬಂದಿ ನಿನ್ನೆಯಿಂದ ಮುಷ್ಕರ ನಡೆಸುತ್ತಿದ್ದರು. ರಾಜ್ಯದಲ್ಲಿ 162 ಡಯಾಲಿಸಿಸ್ ಘಟಕಗಳಿದ್ದು, 900 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಘಟಕಗಳಲ್ಲಿನ 650 ಸಿಬ್ಬಂದಿಗೆ 2021ರ ಜೂನ್ ಮತ್ತು ಜುಲೈನಲ್ಲಿ ಪೂರ್ಣ ವೇತನ ಪಾವತಿಸಿಲ್ಲ.

2019 ರ ನವೆಂಬರ್‌ನಿಂದ 2021ರ ಆಗಸ್ಟ್‌ವರೆಗೂ ಇಎಸ್‌ಐ ಮತ್ತು ಪಿಎಫ್ ನೀಡಿಲ್ಲ. ಜೊತೆಗೆ ಸರ್ಕಾರದಿಂದ ಬರಬೇಕಾದ ವೇತನವೂ ಬಂದಿಲ್ಲ. 2021ರ ಆಗಸ್ಟ್‌ನಿಂದ 2022ರ ಜನವರಿವರೆಗೂ ಪೂರ್ಣ ವೇತನ ಬಿಡುಗಡೆಯಾಗಿದ್ದರೂ, ವೇತನ ಕಡಿತಗೊಳಿಸಿ ಕೇವಲ 14 ಸಾವಿರ ನೀಡಲಾಗಿದೆ ಎಂದು ಘಟಕಗಳ ಸಿಬ್ಬಂದಿ ದೂರಿದ್ದಾರೆ. ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕಾರಣ ನೀಡಿ ಈ ಹಿಂದೆ ಡಯಾಲಿಸಿಸ್ ಘಟಕಗಳನ್ನು ನಿರ್ವಹಣೆ ಮಾಡುತ್ತಿದ್ದ ಬಿಆರ್‌ ಎಸ್ ಏಜೆನ್ಸಿ ಒಪ್ಪಂದವನ್ನು ರದ್ದುಗೊಳಿಸಿತ್ತು.

ಓದಿ: ಸೂರಿಗಾಗಿ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್: ಜುಲೈ 25ಕ್ಕೆ 1,967 ಮನೆಗಳು ಲೋಕಾರ್ಪಣೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.