ETV Bharat / state

ಹೆಚ್ಚು ಸ್ಮಾರ್ಟ್ ಫೋನ್ ಬಳಕೆಯಿಂದ ನಿದ್ರಾಹೀನತೆಯ ಸಮಸ್ಯೆ: ವೈದ್ಯ ಶಶಿಧರ್ ಕುಮಾರ್

author img

By

Published : Mar 25, 2023, 6:45 PM IST

ಸ್ಮಾರ್ಟ್ ಫೋನ್ ಗಳನ್ನು ನಿರಂತರವಾಗಿ ವೀಕ್ಷಿಸುವುದರಿಂದ ಆರೋಗ್ಯ ಸಮಸ್ಯೆಗಳು ಸಾಕಷ್ಟು ಸಾಮಾನ್ಯವಾಗುತ್ತಿದೆ. ಹೀಗಾಗಿ ಗೌರಿಬಿದನೂರಿನಲ್ಲಿ ಡಿಜಿಟಲ್ ಡಿಟಾಕ್ಸ್ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಶಶಿಧರ್ ಕುಮಾರ್ ತಿಳಿಸಿದ್ದಾರೆ.

dr-h-s-shashidhar-kumar-reaction-on-digital-detox
ಹೆಚ್ಚು ಸ್ಮಾರ್ಟ್ ಫೋನ್ ಬಳಕೆಯಿಂದ ನಿದ್ರಾಹೀನತೆಯ ಸಮಸ್ಯೆ: ಡಾ.ಹೆಚ್.ಎಸ್. ಶಶಿಧರ್ ಕುಮಾರ್

ಬೆಂಗಳೂರು: ಗ್ರಾಮೀಣ ಭಾಗದ ಯುವ ಜನರಿಂದ ಹಿಡಿದು ವೃದ್ಧರವರೆಗೆ ಹಲವರು ನಿದ್ರಾಹೀನತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೆಚ್ಚು ಸ್ಮಾರ್ಟ್ ಫೋನ್​ಗಳನ್ನು ಬಳಸುವ ವ್ಯಸನ ತಮ್ಮ ನಿದ್ರಾಚಕ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಯದೆ ಅವರು ಈ ನಿದ್ರೆಯ ಕೊರತೆ ಸಮಸ್ಯೆಯೊಂದಿಗೆ ವೈದ್ಯರನ್ನು ಕಾಣುತ್ತಿದ್ದಾರೆ. ಇದರಿಂದ ನಿರಂತರ ತಲೆನೋವು ಮತ್ತು ಆಯಾಸ ಯುವಜನರಲ್ಲಿ ಸರ್ವೇ ಸಾಮಾನ್ಯವಾಗುತ್ತಿದೆ ಎಂದು ಮಾನಸ ಆಸ್ಪತ್ರೆಯ ವೈದ್ಯ ಡಾ.ಹೆಚ್.ಎಸ್. ಶಶಿಧರ್ ಕುಮಾರ್ ಗೌರಿಬಿದನೂರು ಹೇಳಿದರು.

ಪ್ರೆಸ್ ಕ್ಲಬ್​​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಹೆಚ್.ಎಸ್. ಶಶಿಧರ್ ಕುಮಾರ್, ಸ್ಮಾರ್ಟ್ ಫೋನ್​​ಗಳನ್ನು ನಿರಂತರವಾಗಿ ವೀಕ್ಷಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯುವಜನರನ್ನು ಮತ್ತು ಇತರರನ್ನು ಈ ಡಿಜಿಟಲ್ ವ್ಯಸನದಿಂದ ದೂರ ಮಾಡಲು ಗೌರಿಬಿದನೂರಿನಲ್ಲಿ ಡಿಜಿಟಲ್ ಡಿಟಾಕ್ಸ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಾಧನಗಳಿಗೆ ಅಂಟಿಕೊಂಡಿರುವ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ಸ್ಮಾರ್ಟ್ ಫೋನ್​ಗಳು, ಟಿವಿ ಮಾಧ್ಯಮ, ಇಂಟರ್ನೆಟ್, ಡಿಜಿಟಲ್ ಗೇಮ್ಸ್ ಮತ್ತು ಜೂಜು ಹಾಗೂ ಸಾಮಾಜಿಕ ಮಾಧ್ಯಮಗಳಿಂದ ದೂರ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಗೌರಿಬಿದನೂರಿನಲ್ಲಿರುವ ಈ ಕೇಂದ್ರದಲ್ಲಿ ಡಿಜಿಟಲ್ ದಾಸರಾಗಿರುವವರಿಗೆ ಆರೋಗ್ಯಕರ ಜೀವನಶೈಲಿ ಹಾಗೂ ಡಿಜಿಟಲ್ ತಂತ್ರಜ್ಞಾನಗಳ ಬಳಕೆಯ ಕುರಿತು ಸಲಹೆ ನೀಡಲಾಗುತ್ತದೆ. ಈ ಕೇಂದ್ರವು ಇಂತಹ ವ್ಯಕ್ತಿಗಳಿಗೆ ಮುಖಾಮುಖಿ ಸಂವಹನದ ಪ್ರಾಮುಖ್ಯತೆಯನ್ನು ತಿಳಿಯಪಡಿಸಿ, ಅವರನ್ನು ಸ್ಮಾರ್ಟ್ ಫೋನ್, ಲ್ಯಾಪ್​ ಟಾಪ್​ ಇತ್ಯಾದಿಗಳಿಂದ ವಿರಾಮ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ತಂತ್ರಜ್ಞಾನದ ವ್ಯಸನವು ವ್ಯಕ್ತಿಗಳಲ್ಲಿ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಈ ವ್ಯಸನಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ಬಗೆಗಿನ ಸಂಶೋಧನೆಯನ್ನು ಉಲ್ಲೇಖಿಸುವ ವ್ಯಸನ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾ.ಹೆಚ್.ಎಸ್. ಶಶಿಧರ್ ಕುಮಾರ್ ತಿಳಿಸಿದರು.

ಭಾರತದ ಪ್ರಪ್ರಥಮ ಡಿಜಿಟಲ್ ಡಿಟಾಕ್ಸ್ ಕೇಂದ್ರ: ನಂತರ ಮಾತನಾಡಿದ ಡಾ ಕೆ.ಎಸ್. ರತ್ನ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿ ಪ್ರತಿದಿನ ಸರಾಸರಿ 6 ರಿಂದ 8 ಗಂಟೆಗಳ ಕಾಲ ಸ್ಮಾರ್ಟ್​​ಫೋನ್​ಗಳನ್ನು ಬಳಸುತ್ತಿದ್ದಾರೆ. ಇದು ವೈರಲ್, ಅಶ್ಲೀಲ, ಬೆತ್ತಲೆ ವೀಡಿಯೊಗಳನ್ನು ವೀಕ್ಷಿಸುವುದು, ಡೇಟಿಂಗ್ ಅಪ್ಲಿಕೇಷನ್​ಗಳನ್ನು ಬ್ರೌಸ್ ಮಾಡುವುದು, ಸಂಗೀತ ಕೇಳುವುದು, ಸಂದೇಶ ಕಳುಹಿಸುವುದು, ಚಾಟ್ ಮಾಡುವುದು ಮತ್ತು ಮೇಲ್ ಪರಿಶೀಲಿಸುವುದು, ಆನ್ಲೈನ್ ಆಟ ಆಡುವುದು ಹೀಗೆ ನಾನಾ ಚಟುವಟಿಕೆಗಳನ್ನು ಒಳಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಭಾರತದ ಪ್ರಪ್ರಥಮ ಡಿಜಿಟಲ್ ಡಿಟಾಕ್ಸ್ ಕೇಂದ್ರವನ್ನು ಮಾನಸ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಡಾ. ವೈ.ಜೆ ಸುಮಂತ್ ಮಾತನಾಡಿ, ಈ ನಿದ್ರಾಹೀನ ವ್ಯಕ್ತಿಗಳಿಗೆ, ಸಮಸ್ಯೆಯಿಂದ ಹೊರ ಬಂದು ಹೆಚ್ಚು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಲು ಸಹಾಯ ಮಾಡಲು ನಿರ್ಧರಿಸಲಾಗಿದೆ. ಪ್ರತಿದಿನ, ನಾನು ಹಲವಾರು ಯುವಕರು ನಿದ್ರೆಯ ಮಾದರಿಯಲ್ಲಿ ಅಡಚಣೆ, ತಲೆನೋವು, ಕಣ್ಣಿನ ಸಮಸ್ಯೆ ಇತ್ಯಾದಿ ಸಮಸ್ಯೆಗಳೊಂದಿಗೆ ನಮ್ಮ ಬಳಿಗೆ ಆಗಮಿಸುತ್ತಾರೆ. ಇದಕ್ಕೆಲ್ಲ ಒಂದೇ ಕಾರಣವೆಂದರೆ ಯಾವುದೇ ಬೆಳಕು ಇಲ್ಲದ ಕೋಣೆಯಲ್ಲಿ ರಾತ್ರಿಯಲ್ಲಿ ಸ್ಮಾರ್ಟ್​​ಫೋನ್​ಗಳ ನಿರಂತರ ಬಳಕೆ ಎಂದು ತಿಳಿದುಬಂದಿದೆ ಎಂದರು.

ಇದನ್ನೂ ಓದಿ:ಬೇಸಿಯಲ್ಲಿ ಸನ್​ ಬರ್ನ್​ ತಡೆಯಲು ಸನ್​ ಸ್ಕ್ರೀನ್​ ಒಂದೇ ಪರಿಹಾರವಲ್ಲ.. ಇಲ್ಲುಂಟು ಹಲವು ಮಾರ್ಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.