ಬೆಂಗಳೂರು: ವೈಫೈ ಮೂಲಕ ಹ್ಯಾಕರ್ಗಳು ಹಣದೋಚುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ವೈಫೈ ಬಳಕೆ ಮಾಡುವಾಗ ಕೆಲ ಸಲಹೆ ಸೂಚನೆಗಳನ್ನು ಪಾಲಿಸಿ ಎಂದು ಸೈಬರ್ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ಫ್ರೀ ವೈ - ಫೈ ನಗರದ ಪ್ರಮುಖ ಪ್ರದೇಶಗಳಲ್ಲಿ ಲಭ್ಯವಿರುತ್ತದೆ. ವೈಫೈ ಅವಲಂಬಿಸಿ ಇಂಟರ್ನೆಟ್ ಬ್ರೌಸಿಂಗ್ ಹಾಗೂ ಕೆಲ ಕಾರ್ಡ್ ಪೇಮೆಂಟ್ಗಳನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಹ್ಯಾಕರ್ಸ್ ಅಕೌಂಟ್ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಸೈಬರ್ ಅಧಿಕಾರಿಗಳು ಹೇಳಿದ್ದಾರೆ.
- ಸುರಕ್ಷಿತ ಪಬ್ಲಿಕ್ ನೆಟ್ವರ್ಕ್ಗೆ ಹೋಗುವುದು ಉತ್ತಮ. ಒಂದು ವೇಳೆ ಫ್ರೀ ವೈಫೈ ಇದ್ದಲ್ಲಿ ಅದನ್ನ ಬಳಕೆ ಮಾಡದೇ ಇರುವುದು ಉತ್ತಮ. ಲಾಗಿನ್ ಅಥವಾ ಪಾಸ್ವರ್ಡ್ ಕೇಳಿದ್ರೆ ಮಾತ್ರ ಬಳಸೋದು ಒಳ್ಳೆಯದು.
- ಇನ್ನೂ ಫ್ರೀ ವೈಫೈ ಮೂಲಕ ಕಾರ್ಡ್ ಪೇಮೆಂಟ್, ಬ್ಯಾಂಕ್ ಖಾತೆ ವಿವರಗಳನ್ನ ಹಾಕುವುದು, ಸೂಕ್ಷ್ಮವಾಗಿರುವ ಮಾಹಿತಿಯನ್ನ ಆ್ಯಕ್ಸಿಸ್ ಮಾಡಲೇಬಾರದು. ಇನ್ನೂ ಈ ವಿಚಾರದಲ್ಲಿ ಸೆಕ್ಯೂರ್ಡ್ ವೈಫೈಗಳಿಂದಲೂ ಪ್ರಾಬ್ಲಂ ಕಟ್ಟಿಟ್ಟ ಬುತ್ತಿ.
- ಲ್ಯಾಪ್ಟಾಪ್, ಸ್ಮಾರ್ಟ್ ಫೋನ್ ಪಬ್ಲಿಕ್ ಪ್ಲೇಸ್ನಲ್ಲಿ ಬಿಡಬಾರದು. ಸೆಕ್ಯೂರ್ಡ್ ವೈಫೈ ಇದ್ದರೂ ಸಹಿತ ಹ್ಯಾಕರ್ಸ್ಗಳು ನಿಮ್ಮ ಡಿವೈಸ್ನಿಂದಲೇ ಮಾಹಿತಿ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
- ಇನ್ನೂ ಶಾಪಿಂಗ್ಗೆ ಹೋಗುವಾಗ ಅಲ್ಲಿ ಫ್ರೀ ವೈಫೈ ಇದ್ರೆ ಬಳಸದೇ ಇರುವುದು ಉತ್ತಮ. ಒಂದು ವೇಳೆ ಆ ಶಾಪ್ ಗಳು ನಿಮಗೆ ಗೊತ್ತಿದ್ದರೂ ವೈಫೈ ಬಳಸಬೇಡಿ.
- ಆಟೋಮ್ಯಾಟಿಕ್ ಕನೆಕ್ಟ್ ಆಗುವ ಯಾವುದೇ ವೈಫೈ ಯ್ಯೂಸ್ ಮಾಡಬೇಡಿ. ಹಲವಾರು ಸ್ಮಾರ್ಟ್ ಫೋನ್ಗಳು ಆಟೋಮ್ಯಾಟಿಕ್ ಕನೆಕ್ಟ್ ಆಗಿರುತ್ತವೆ. ಒಂದು ಹಾಟ್ - ಸ್ಪಾಟ್ ಮತ್ತೊಂದು ಹಾಟ್ ಸ್ಪಾಟ್ಗೆ ಸುಲಭವಾಗಿ ಕನೆಕ್ಟ್ ಆಗುತ್ತವೆ. ಇದು ತುಂಬಾ ಅಪಾಯಕಾರಿ.
- ಯಾವಾಗಲೂ ಬ್ಲ್ಯೂ ಟೂತ್ನ ಕನೆಕ್ಟಿವಿಟಿ ಚೆಕ್ ಮಾಡುತ್ತಲೇ ಇರಬೇಕು. ಸಾರ್ವಜನಿಕ ಪ್ಲೇಸ್ಗಳಲ್ಲಿ ಬ್ಲ್ಯೂ ಟೂತ್ ಆನ್ ಮಾಡಿ ಇಡುವುದರಿಂದ ಸೈಬರ್ ಸೆಕ್ಯೂರಿಟಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
- ವರ್ಚುವಲ್ ಪ್ರೈವೇಟ್ ನೆಟ್ವರ್ಕ್ ಬಳಕೆ ಮಾಡುವುದು ಸುರಕ್ಷಿತ. ಹೊಸ ನಾರ್ಟನ್ ಸೆಕ್ಯೂರ್ ವಿಪಿಎನ್ ಪಬ್ಲಿಕ್ ವೈಫೈನಲ್ಲಿ ನೀವು ಕಳುಹಿಸುವ ಅಥವಾ ಪಡೆಯುವ ಡಾಟಾವನ್ನು ಎನ್ಕ್ರಿಪ್ಟ್ ಮಾಡಿ ಕಳುಹಿಸುವುದಕ್ಕೆ ಅವಕಾಶ ನೀಡುತ್ತದೆ. ಈ ಮೂಲಕ ನಿಮ್ಮ ಡಾಟಾಗಳು ಸೇಫ್ ಇರುತ್ತವೆ.
ಸದ್ಯ ನಗರದಲ್ಲಿ ಸೈಬರ್ ಅಪರಾಧ ಪ್ರಕರಣ ಹೆಚ್ಚಾಗ್ತಿದೆ. ಅದಕ್ಕೆ ಬೇಕಾದ ಕ್ರಮ ಹಾಗೂ ಸಿಬ್ಬಂದಿಗಳನ್ನ ನಾವು ನಿಯೋಜನೆ ಮಾಡಿದ್ದೇವೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.