ETV Bharat / state

ಕೆಲಸ ಕಾಯಂ ಮಾಡದಿದ್ದರೆ ವಿಷ ಕುಡಿಯುತ್ತೇವೆ: ಸಿಎಂ ಎದುರು ಕಣ್ಣೀರಿಟ್ಟ ಅನುದಾನ ರಹಿತ ಶಿಕ್ಷಕರು

ಶಿಕ್ಷಕರ ಕೆಲಸ ಕಾಯಂ ಮಾಡದಿದ್ದರೆ ವಿಷ ಕುಡಿಯುತ್ತೇವೆ ಎಂದು ಅನುದಾನ ರಹಿತ ಶಾಲಾ ಶಿಕ್ಷಕರು ಸಿಎಂ ಬೊಮ್ಮಾಯಿ‌ ಎದುರು ಕಣ್ಣೀರಿಟ್ಟಿರುವ ಘಟನೆ ವಿಧಾನಸೌಧದಲ್ಲಿ ಬುಧವಾರ ನಡೆದಿದೆ.

Teachers tears
ಸಿಎಂ ಎದುರು ಕಣ್ಣೀರಿಟ್ಟ ಅನುದಾನ ರಹಿತ ಶಿಕ್ಷಕರು
author img

By

Published : Mar 8, 2023, 11:10 PM IST

ಬೆಂಗಳೂರು: ಶಿಕ್ಷಕರ ಕೆಲಸ ಕಾಯಂ ಮಾಡದಿದ್ದರೆ ವಿಷ ಕುಡಿಯುತ್ತೇವೆ ಎಂದು ಅನುದಾನ ರಹಿತ ಶಾಲಾ ಶಿಕ್ಷಕರು ಸಿಎಂ ಬೊಮ್ಮಾಯಿ‌ ಎದುರು ಕಣ್ಣೀರಿಟ್ಟಿರುವ ಘಟನೆ ವಿಧಾನಸೌಧದಲ್ಲಿ ನಡೆಯಿತು. ಕಾಯಂ ನೇಮಕಾತಿ ಮಾಡುವಂತೆ ಅನುದಾನಿತ ರಹಿತ ಶಾಲಾ ಶಿಕ್ಷಕರು ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ‌ ಎದುರು ಕಣ್ಣೀರು ಹಾಕುತ್ತ ತಮ್ಮ ಅಳಲು ತೋಡಿಕೊಂಡರು. ನಮ್ಮ ಕೆಲಸ ಕಾಯಂ ಮಾಡದಿದ್ದರೇ ವಿಷ ಕುಡಿಯುತ್ತೇವೆ. ವಿಧಾನ ಸೌಧದ ಎದುರು ವಿಷ ಕುಡಿಯುತ್ತೇವೆ ಎಂದು ಅನುದಾನ ರಹಿತ ಶಿಕ್ಷಕರು ಭಾವುಕರಾಗಿ ನುಡಿದರು.

1985 ರಿಂದ 1995 ಸಾಲಿನಲ್ಲಿ ಇರುವವರಿಗೆ ಅನುದಾನ ಕೊಡಬೇಕಿತ್ತು.2018ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸರ್ಕಾರದ ಕಡತದಲ್ಲಿರುವ ಕೆಲ ಶಾಲೆಗಳನ್ನು ಮಾತ್ರ ಒಳಪಡಿಸಿದ್ರು. ಅವುಗಳಲ್ಲಿ 177 ಶಾಲೆಗಳನ್ನು ಮಾತ್ರ ಅನುದಾನಕ್ಕೆ ಒಳಪಡಿಸಿದ್ದರು. ಅನುದಾನಕ್ಕೆ ಒಳಪಡಿಸುವ ಸಂದರ್ಭದಲ್ಲಿ ಕೆಲವು ಸಂಸ್ಥೆಗಳನ್ನು ಅಂದರೆ ಕಮಿಷನರ್ ಆಫೀಸ್, ಬಿಇಒ ಆಫೀಸ್​​ದಲ್ಲಿರುವ ಹಂತದ ಕಡತಗಳನ್ನು ಬಿಟ್ಟಿದ್ದರು ಎಂದು ವಿವರಿಸಿದರು.

ಸಿಎಂ ಬೊಮ್ಮಾಯಿ ಅವರು, ಕುಮಾರ ಸ್ವಾಮಿ ಅವರ ಕಂಡಿಕೆಯನ್ನು ತರಿಸಿಕೊಂಡರು.1985-95 ವರೆಗಿನ ಕಡತಗಳನ್ನ ಪರಿಶೀಲನೆ ಮಾಡಿ ಕೊಡುತ್ತೇವೆ ಎಂದು 2022 ಮಾರ್ಚ 31 ರಂದು ಹೇಳಿದ್ದರು. ಕಳೆದ ಅಧಿವೇಶನದಲ್ಲಿ ಎಮ್ ಎಲ್ ಎ ಗಳು, ಎಮ್ ಎಲ್ ಸಿ ಗಳನ್ನು ಬಿ ಸಿ ನಾಗೇಶ್ ಅವರ ಮೂಲಕ ಭೇಟಿ ಮಾಡಿದೆವು. ಆ ಸಂದರ್ಭದಲ್ಲಿ ನಮ್ಮ ಬೇಡಿಕೆ ಹೇಳಿದ್ದೇವೆ. ಶುಕ್ರವಾರ ನಿರ್ಣಯ ಹೇಳ್ತೇವೆ ಅಂದ್ರು ಆದರೆ ಹೇಳಲಿಲ್ಲ. ನಂತರ ನಮ್ಮ‌ ಕಡತಗಳನ್ನು ಶಿಕ್ಷಣ ಇಲಾಖೆಗೆ ಮರಳಿ ಕಳಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

ಈ ಕಡತ ಈಗ ಮುಖ್ಯಮಂತ್ರಿ ಅವರ ಬಳಿ ಬಂದಿದೆ. ಅದನ್ನ ಪರಿಶೀಲನೆ ಮಾಡಿ ವೇತನಕ್ಕೆ ಸೇರಿಸಬೇಕು ಎಂದು ಶಿಕ್ಷಕರು ಮನವಿ ಮಾಡಿದ್ದಾರೆ. 576 ಶಿಕ್ಷಕರು ಭವಿಷ್ಯವಿದೆ ಇದನ್ನು ಸರ್ಕಾರ ಮಾಡಿಕೊಡಬೇಕು. ಚುನಾವಣಾ ನೀತಿ ಜಾರಿ ಆಗುವ ಮುನ್ನವೇ ಇದನ್ನ ಮಾಡಿಕೊಡಬೇಕು. ಇಲ್ಲಾ ಅಂದ್ರೆ ನಾವು ನಮ್ಮ ಊರಿಗೆ ಹೋಗುವುದಿಲ್ಲ‌ ಎಂದು ಪಟ್ಟು ಹಿಡಿದರು.

ಎಕ್ಸಾಂನಲ್ಲಿ ಅಕ್ರಮ ನಡೆಯದಂತೆ ಕ್ರಮ: ನಾಗೇಶ್: ಬೆಂಗಳೂರು: ಈ ಬಾರಿಯೂ ಕಳೆದ ಸಾಲಿನಂತೆ ದ್ವಿತೀಯ ಪಿಯು‌ ಪರೀಕ್ಷೆಗೆ ಸಮವಸ್ತ್ರ ನೀತಿ ಜಾರಿಯಾಗಿದ್ದು, ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ. ಸಮವಸ್ತ್ರ ನಿಯಮ ಈಗಲೂ ಅನ್ವಯ. ಕಳೆದ ವರ್ಷದ ನಿಯಮವೇ ಈ ಬಾರಿಯೂ ಜಾರಿಯಲ್ಲಿರಲಿದೆ. ಆ ಮಕ್ಕಳು ಪರೀಕ್ಷೆಯಿಂದ ವಂಚಿತರಾಗುವುದು ಬೇಡ. ಕಳೆದ ವರ್ಷ 6 ವಿದ್ಯಾರ್ಥಿನಿಯರು ಹಿಜಾಬ್ ವಿವಾದದಿಂದ ಪರೀಕ್ಷೆ ಬರೆದಿಲ್ಲ. ಮಾಧ್ಯಮದ ಮೂಲಕ ಅವರಿಗೆ ಪರೀಕ್ಷೆ ಬರೆಯುವಂತೆ ಮನವಿ ಮಾಡಿಕೊಳ್ಳುತ್ತೇನೆ. ಸಮವಸ್ತ್ರದ ನಿಯಮ ಪಾಲಿಸಿ ಪರೀಕ್ಷೆಗೆ ಹಾಜರಾಗಿ ಎಂದು ಮನವಿ ಮಾಡಿದರು.

ಇದನ್ನೂಓದಿ:ಜನರ ಬಳಿ ಹೋಗಿ ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು: ಸಿಎಂ ಬಸವರಾಜ ಬೊಮ್ಮಾಯಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.