ಸೂಳಗಿರಿ(ತಮಿಳುನಾಡು): ಬೆಳ್ಳಂ ಬೆಳಗ್ಗೆ ಹಾದಿ ತಪ್ಪಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯನ್ನು ನಾಯಿಗಳು ಅಟ್ಟಾಡಿಸಿ ಗಾಯಗೊಳಿಸಿದ ಘಟನೆ ಸೂಳಗಿರಿಯಲ್ಲಿ ನಡೆದಿದೆ.
ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಸಾರ್ವಜನಿಕರು ಜಿಂಕೆಯನ್ನ ರಕ್ಷಿಸಿದ್ದಾರೆ. ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸೂಳಗಿರಿ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಚಿಕಿತ್ಸೆ ಕೊಡಿಸಿದ್ದಾರೆ.