ಬೆಂಗಳೂರು: ನನಗಿಂತ ದೊಡ್ಡ ದಲಿತ ಯಾರಿದ್ದಾರೆ ಎಂದು ಸಿದ್ದರಾಮಯ್ಯ, ಪಕ್ಷ ಸಂಘಟಿಸಿದ್ದು ನಾನು. ಅಧಿಕಾರ ಬೇರೆಯವರಿಗೆ ಏಕೆ ಬಿಟ್ಟುಕೊಡಬೇಕು ಎಂದು ಡಿ.ಕೆ. ಶಿವಕುಮಾರ್ ಸಿಎಂ ಪದವಿ ಕನಸು ಕಾಣುತ್ತಿದ್ದಾರೆ. ಈ ಇಬ್ಬರು ನಾಯಕರು ಪರಮೇಶ್ವರ್ ಅವರನ್ನು ಗೆಲ್ಲಲು ಬಿಡುತ್ತಾರೆಯೇ? ಪರಮೇಶ್ವರ್ ಅವರೇ 2023 ರಲ್ಲೂ ನಿಮ್ಮ ಸೋಲು ನಿಶ್ಚಿತ ಎಂದು ಬಿಜೆಪಿ ಟ್ವೀಟ್ ಮೂಲಕ ಕೈ ನಾಯಕರಿಗೆ ಟಾಂಗ್ ನೀಡಿದೆ.
ಕಾಂಗ್ರೆಸ್ ಪಕ್ಷ ಪದೇ ಪದೆ ದಲಿತ ನಾಯಕರಿಗೆ ಅನ್ಯಾಯ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷರಾದವರು ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗುವುದು ಅಲಿಖಿತ ನಿಯಮವಾಗಿತ್ತು. 2013 ರಲ್ಲಿ ದಲಿತ ಸಮುದಾಯದ ಪ್ರಬಲ ನಾಯಕ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಕುತಂತ್ರವೇ ನಡೆದು ಹೋಯಿತು.
ಪರಮೇಶ್ವರ್ ಮುಖ್ಯಮಂತ್ರಿಯಾಗುತ್ತಾರೆ ಎಂದರಿತ ಸಿದ್ದರಾಮಯ್ಯ, ಕುತಂತ್ರದಿಂದ ದಲಿತ ನಾಯಕನನ್ನು ಸೋಲಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಈಗ ದಲಿತ ಸಿಎಂ ವಾದ ಮತ್ತೆ ಮುನ್ನೆಲೆಗೆ ಬಂದಿದೆ. 2013 ರ ಇತಿಹಾಸ 2023 ರಲ್ಲೂ ಮರುಕಳಿಸುವ ಸೂಚನೆ ಲಭಿಸಿದೆ. ಪರಮೇಶ್ವರ್ ಅವರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ.
-
ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತರ ಪರ ಒಲವು ತೋರಿಸುತ್ತಿರುವ @siddaramaiah ಅವರೇ,
— BJP Karnataka (@BJP4Karnataka) May 26, 2022 " class="align-text-top noRightClick twitterSection" data="
2023 ರಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡುವ ತಾಕತ್ತು ಇದೆಯೇ?
ದಲಿತ ಮುಖ್ಯಮಂತ್ರಿ ಎಂಬ ಪದ @DKShivakumar ಮತ್ತು ಸಿದ್ದರಾಮಯ್ಯ ಅವರ ಕನಸಿಗೆ ಭಂಗ ತರುತ್ತಿದೆಯೇ?#ದಲಿತವಿರೋಧಿಕಾಂಗ್ರೆಸ್
">ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತರ ಪರ ಒಲವು ತೋರಿಸುತ್ತಿರುವ @siddaramaiah ಅವರೇ,
— BJP Karnataka (@BJP4Karnataka) May 26, 2022
2023 ರಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡುವ ತಾಕತ್ತು ಇದೆಯೇ?
ದಲಿತ ಮುಖ್ಯಮಂತ್ರಿ ಎಂಬ ಪದ @DKShivakumar ಮತ್ತು ಸಿದ್ದರಾಮಯ್ಯ ಅವರ ಕನಸಿಗೆ ಭಂಗ ತರುತ್ತಿದೆಯೇ?#ದಲಿತವಿರೋಧಿಕಾಂಗ್ರೆಸ್ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತರ ಪರ ಒಲವು ತೋರಿಸುತ್ತಿರುವ @siddaramaiah ಅವರೇ,
— BJP Karnataka (@BJP4Karnataka) May 26, 2022
2023 ರಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡುವ ತಾಕತ್ತು ಇದೆಯೇ?
ದಲಿತ ಮುಖ್ಯಮಂತ್ರಿ ಎಂಬ ಪದ @DKShivakumar ಮತ್ತು ಸಿದ್ದರಾಮಯ್ಯ ಅವರ ಕನಸಿಗೆ ಭಂಗ ತರುತ್ತಿದೆಯೇ?#ದಲಿತವಿರೋಧಿಕಾಂಗ್ರೆಸ್
ದಲಿತ ನಾಯಕ ಪರಮೇಶ್ವರ್ ಅವರನ್ನು 2013 ರಲ್ಲಿ ಸೋಲಿಸಲು ಸಿದ್ದರಾಮಯ್ಯ ಒಬ್ಬರೇ ಶ್ರಮಿಸಿದ್ದರು. ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೂ ಕೈ ಜೋಡಿಸುತ್ತಿದ್ದಾರೆ. ಇವರಿಬ್ಬರೂ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ದಲಿತರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇಷ್ಟೊಂದು ಅಸಹನೆ ಏಕೆ? ದಲಿತರ ಬಗ್ಗೆ ಭಾಷಣ ಬಿಗಿಯುವ ಸಿದ್ದರಾಮಯ್ಯ ಅವರೇ, ಪರಮೇಶ್ವರ್, ಖರ್ಗೆ ಅವರಂತಹ ದಲಿತ ನಾಯಕರಿಗೆ ನೀವು ಅವಕಾಶ ವಂಚಿಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲ. ಪದೇ ಪದೆ ದಲಿತ ಸಮುದಾಯದ ನಂಬಿಕೆಗೆ ದ್ರೋಹ ಬಗೆಯುವ ನಿಮ್ಮನ್ನು ರಾಜ್ಯದ ದಲಿತ ಸಮುದಾಯವೆಂದಿಗೂ ಕ್ಷಮಿಸದು ಎಂದು ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: ಕೆಸಿಆರ್ ಭೇಟಿ: ದೇವೇಗೌಡರ ನಿವಾಸದಲ್ಲಿ ಬಿರಿಯಾನಿ, ನಾಟಿ ಕೋಳಿ ಸಾರಿನ ಘಮಲು
ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತರ ಪರ ಒಲವು ತೋರಿಸುತ್ತಿರುವ ಸಿದ್ದರಾಮಯ್ಯ ಅವರೇ, 2023 ರಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡುವ ತಾಕತ್ತು ಇದೆಯೇ? ದಲಿತ ಮುಖ್ಯಮಂತ್ರಿ ಎಂಬ ಪದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಕನಸಿಗೆ ಭಂಗ ತರುತ್ತಿದೆಯೇ? ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನಿಸಿದೆ.