ETV Bharat / state

ಒಮಿಕ್ರಾನ್ ಸೋಂಕಿತರಿಗೆ ರಿ- ಇನ್ಫೆಕ್ಷನ್ ಆಗ್ತಿರೋಕೆ ಕಾರಣ ಇಷ್ಟೇ ಅಂತಾರೆ ವೈದ್ಯರು..

author img

By

Published : Dec 18, 2021, 7:13 PM IST

ಒಮಿಕ್ರಾನ್ ಸೋಂಕಿತರಿಗೆ ರಿ-ಇನ್ಫೆಕ್ಷನ್ ಆಗುವ ಸಂಭವ ಇದೆ‌. ಯಾಕೆಂದರೆ, ರಾಜ್ಯದಲ್ಲಿ ಈಗಾಗಲೇ 5 ರೂಪಾಂತರಿ ಸೋಂಕು ಕಾಲಿಟ್ಟಿದೆ. ಡೆಲ್ಟಾದಿಂದಲ್ಲೇ ಬೇರೆ ಬೇರೆ ರೂಪ ಪಡೆದುಕೊಂಡಿರಬಹುದು. ಒಮಿಕ್ರಾನ್ ಸೋಂಕು ಮೊದಲ ಅಲೆಯಲ್ಲೇ ಇತ್ತು. ಆದರೆ, ಈ ಸೋಂಕು ರೀ ಆ್ಯಕ್ಟೀವ್ ಆಗಿ ಈಗ ಶಕ್ತಿಶಾಲಿಯಾಗಿದೆ..

Doctor Vishal rao interview with Etv bharat
ತಜ್ಞ ವೈದ್ಯ ಡಾ.ವಿಶಾಲ್ ರಾವ್ ಜೊತೆ ಈಟಿವಿ ಭಾರತ ಸಂದರ್ಶನ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಾಣು ಒಮಿಕ್ರಾನ್ ಸೋಂಕಿನ ಪ್ರಕರಣ ಪತ್ತೆಯಾಗುತ್ತಿವೆ. ಈ ಸೋಂಕು ತಗುಲಿದರೆ ಎಷ್ಟು ದಿನ ಆ್ಯಕ್ಟೀವ್​ ಆಗಿರಲಿದೆ, ಒಮಿಕ್ರಾನ್ ರಿ-ಇನ್ಫೆಕ್ಷನ್ ಮಾಡುತ್ತಾ ಎಂಬುದರ ಕುರಿತಂತೆ ತಜ್ಞರು ಮಾಹಿತಿ ನೀಡಿದ್ದಾರೆ.

ಒಮಿಕ್ರಾನ್ ಸೋಂಕು ಈಗಾಗಲೇ 8 ಮಂದಿಗೆ ಕಾಣಿಸಿಕೊಂಡಿದೆ. ಈ ಪೈಕಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಇವರಲ್ಲಿ ಮೊದಲು ಒಮಿಕ್ರಾನ್ ಸೋಂಕು ತಗುಲಿದ 46 ವರ್ಷದ ಸೋಂಕಿತ ವೈದ್ಯನಿಗೆ 14 ದಿನಗಳ ಕ್ವಾರಂಟೈನ್ ನಂತರ ಆರ್​ಟಿಪಿಸಿಆರ್ ಟೆಸ್ಟ್ ಮಾಡಿದಾಗಲೂ ಮತ್ತೊಮ್ಮೆ ಪಾಸಿಟಿವ್ ಎಂದು ಬಂದಿತ್ತು.

ಹೀಗಾಗಿ, ಮತ್ತೆ 8 ದಿನಗಳ ಕಾಲ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸಲಾಯ್ತು. ಹಾಗಾದರೆ, ಒಮಿಕ್ರಾನ್ ಸೋಂಕು ರಿ-ಇನ್ಫೆಕ್ಷನ್​​ಗೂ ಕಾರಣವಾಗುತ್ತಾ ಎಂಬುದರ ಕುರಿತು ರಾಜ್ಯ ಜಿನೋಮಿಕ್ ಸೀಕ್ವೆನ್ಸ್ ಸಮಿತಿಯ ತಜ್ಞ ವೈದ್ಯರಾದ ಡಾ.ವಿಶಾಲ್ ರಾವ್ ಈಟಿವಿ ಭಾರತದೊಂದಿಗೆ ಮಾಹಿತಿ ನೀಡಿದ್ದಾರೆ.

ಒಮಿಕ್ರಾನ್ ಆ್ಯಕ್ಟೀವ್​ ಆಗಿದೆ : ಒಮಿಕ್ರಾನ್ ಸೋಂಕಿತರಿಗೆ ರಿ-ಇನ್ಫೆಕ್ಷನ್ ಆಗುವ ಸಂಭವ ಇದೆ‌. ಯಾಕೆಂದರೆ, ರಾಜ್ಯದಲ್ಲಿ ಈಗಾಗಲೇ 5 ರೂಪಾಂತರಿ ಸೋಂಕು ಕಾಲಿಟ್ಟಿದೆ. ಡೆಲ್ಟಾದಿಂದಲ್ಲೇ ಬೇರೆ ಬೇರೆ ರೂಪ ಪಡೆದುಕೊಂಡಿರಬಹುದು. ಒಮಿಕ್ರಾನ್ ಸೋಂಕು ಮೊದಲ ಅಲೆಯಲ್ಲೇ ಇತ್ತು. ಆದರೆ, ಈ ಸೋಂಕು ರೀ ಆ್ಯಕ್ಟೀವ್ ಆಗಿ ಈಗ ಶಕ್ತಿಶಾಲಿಯಾಗಿದೆ ಎಂದರು.

ಎರಡು ಡೋಸ್ ಲಸಿಕೆ ಪಡೆಯಲು ಸಲಹೆ : ದಕ್ಷಿಣ ಆಫ್ರಿಕಾದಲ್ಲಿ ಡೆಲ್ಟಾ ಸೋಂಕು ಕಾಣಿಸಿಕೊಂಡವರಲ್ಲೂ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಹೀಗಾಗಿ, ಜನರು ನನಗೆ ಈ ಹಿಂದೆ ಸೋಂಕು ತಗುಲಿತ್ತು. ಈಗ ಯಾವುದು ಹರಡೋದಿಲ್ಲ ಎಂಬ ಮನಸ್ಥಿತಿಯಲ್ಲಿರಬಾರದು. ಈಗಾಗಲೇ ಕೋವಿಡ್ ಸೋಂಕು ತಗುಲಿದ್ದರೂ ಸಹ ಕೊರೊನಾ ಲಸಿಕೆಯನ್ನು ಜನರು ಪಡೆಯಬೇಕು.

ಕೋವಿಡ್ ಲಸಿಕೆ ಪಡೆದುಕೊಂಡರೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಅವಕಾಶ ಸಿಗುತ್ತದೆ‌. ಇದರಿಂದ ಒಂದು ವೇಳೆ ಸೋಂಕು ಹರಡಿದರೂ ರೋಗದ ತೀವ್ರತೆ ಕಡಿಮೆ ಇರಲಿದೆ. ಜನರು ಅನಾವಶ್ಯಕವಾಗಿ ಲಸಿಕೆ ಕುರಿತು ಇದೊಂದು ವ್ಯಾಪಾರ ಎಂದು ತಿಳಿಯಬಾರದು. ಎರಡು ಡೋಸ್ ಲಸಿಕೆಯನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ರಿ-ಇನ್ಫೆಕ್ಷನ್ ಆಗದಂತೆ ತಡೆಯಲು ಆಂಟಿಬಯೋಟಿಕ್ಸ್ : ಸದ್ಯ ಸರ್ಕಾರ ಗುರುತಿಸಿರುವ ಆಸ್ಪತ್ರೆಯಲ್ಲಿ ಒಮಿಕ್ರಾನ್ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಮಿಕ್ರಾನ್ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಈ ಹಿಂದೆ ಕೊರೊನಾ ಸೋಂಕಿತರಿಗೆ ನೀಡುತ್ತಿದ್ದ ಝಿಂಕ್ ಮಾತ್ರೆ,ವಿಟಮಿನ್ ಸಿ ಮಾತ್ರೆ ಜೊತೆಗೆ ಮತ್ತೆ ಸೋಂಕು ತಗುಲಬಾರದು ಎಂಬ ಕಾರಣಕ್ಕೆ ಆಂಟಿಬಯೋಟಿಕ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಬೆಳಗಾವಿಯಲ್ಲಿ ಸೋಮವಾರದವರೆಗೆ ನಿಷೇಧಾಜ್ಞೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.