ಬೆಂಗಳೂರು: ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಬೀದಿಗಿಳಿದಿರುವ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಂದೇಶ ರವಾನೆ ಮಾಡಿದ್ದು, ಲಾಠಿ ಬಿಟ್ಟು ಮಾತಿನಲ್ಲೇ ಬುದ್ಧಿ ಹೇಳಿ ಜನರನ್ನು ಮನೆಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೊರೊನಾ ನಿಯಂತ್ರಿಸಲು ಸರ್ಕಾರ 21 ದಿನಗಳ ಕಾಲ ಲಾಕ್ಡೌನ್ ಆದೇಶ ಹೊರಡಿಸಿದ್ದು,ಇದನ್ನು ಉಲ್ಲಂಘಿಸಿ ಜನ ಗುಂಪು ಗುಂಪಾಗಿ ಹೊರ ಬರುತ್ತಿದ್ದರು. ನಿಯಮ ಮೀರಿದ ಜನರಿಗೆ ಬುದ್ಧಿ ಕಲಿಸಲು ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದರು. ಈ ಸಂಬಂಧ ನಿನ್ನೆ ಸಿಎಂ ಯಡಿಯೂರಪ್ಪ ನಗರ ಆಯುಕ್ತರ ಜೊತೆ ಸಭೆ ಮಾಡಿದ್ದು, ಹೀಗಾಗಿ ಎಲ್ಲಾ ಸಿಬ್ಬಂದಿಗೂ ಆದೇಶ ಹೊರಡಿಸಿದ್ದಾರೆ.
ಸಿಎಆರ್, ಕೆಎಸ್ಆರ್‌ಪಿ ಹೊರತುಪಡಿಸಿ ಉಳಿದ ಸಿಬ್ಬಂದಿ ಲಾಠಿಯನ್ನು ಠಾಣೆಯಲ್ಲಿಟ್ಟು ಸಮವಸ್ತ್ರದಲ್ಲಿ ಬಂದೊಬಸ್ತ್ ಮಾಡಬೇಕು. ಹಾಗೆ ಸಿ ಎ,ಆರ್ಕೆಎಸ್ಆರ್ಪಿ ಅವಶ್ಯಕತೆ ಇದ್ದರೇ ಮಾತ್ರ ಲಾಠಿ ಉಪಯೊಗಿಸಬೇಕು. ಪ್ರತಿದಿನ ಪತ್ರಿಕಾ ವಿತರಣೆ ಮಾಡುವರಿಗೆ ಫುಡ್ ಡೆಲಿವರಿ, ದ್ವಿಚಕ್ರವಾಹನದವರಿಗೆ, ಪತ್ರಕರ್ತರಿಗೆ, ಡಯಾಲಿಸ್ ತುರ್ತು ಚಿಕಿತ್ಸೆಗೆ ಹೋಗುವವರಿಗೆ ಸಹಾಯ ಮಾಡಬೇಕು. ತರಕಾರಿ, ಮಾರುಕಟ್ಟೆ ತೆರೆದಿರುವಾಗ ಸಾಮಜಿಕ ಅಂತರ ಇರುವಂತೆ ನೋಡಿಕೊಂಡು ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಕಿವಿಮಾತು ಹೇಳಿ ತಾಳ್ಮೆಯಿಂದ ನಡೆದುಕೊಳ್ಳಬೇಕೆಂದು ಆದೇಶಿಸಿದ್ದಾರೆ.
ಎಲ್ಲಾ ಠಾಣಾ ಪೊಲೀಸ್ ಇನ್ಸ್ಪೆಕ್ಟರ್, ಪಿಎಸ್ಐಗಳು ಮೈಕ್ ಮೂಲಕ ಕೊರೊನಾ ಕುರಿತು ಜಾಗೃತಿ ಮೂಡಿಸಬೇಕು .ರಾಜ್ಯಾದ್ಯಂತ ಕೋರೊನಾ ಭಿತಿ ಹೆಚ್ಚುತ್ತಿದೆ. ಹೀಗಾಗಿ ಎಲ್ಲಾರು ಸರ್ಕಾರದ ಜೊತೆ ಕೈ ಜೋಡಿಸಿ ಕೆಲಸಮಾಡೋಣ ಎಂದು ಸಂದೇಶ ರವಾನೆ ಮಾಡಿದ್ದಾರೆ.