ETV Bharat / state

ಡಿಕೆ ಶಿವಕುಮಾರ್​​​​ಗೆ ಬೇಲ್ ಸಿಕ್ಕಿದೆ ಅಷ್ಟೇ, ಕೇಸ್ ವಜಾ ಆಗಿಲ್ಲ: ಆರ್​. ಅಶೋಕ್ - DK Sivakumar gets bail, case is not dismissed: R. Ashok

ಡಿಕೆ ಶಿವಕುಮಾರ್​ಗೆ ಜಾಮೀನು ಸಿಕ್ಕ ಹಿನ್ನೆಲೆ ಡಿಕೆಶಿ ಅಭಿಮಾನಿಗಳು ನೀಡುತ್ತಿರುವ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ಕಿಡಿ ಕಾರಿದ್ದಾರೆ.

ಡಿಕೆ ಶಿವಕುಮಾರ್ ಗೆ ಬೇಲ್ ಸಿಕ್ಕಿದೆ ಅಷ್ಟೇ:ಆರ್​. ಅಶೋಕ್
author img

By

Published : Oct 23, 2019, 7:45 PM IST

ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್​ಗೆ ಜಾಮೀನು ಸಿಕ್ಕಿದೆ ಅಷ್ಟೇ ಪ್ರಕರಣ ರದ್ದಾಗಿಲ್ಲ ಎಂದು ಹೇಳುವ ಮೂಲಕ ಮುಂದೈತೆ ಮಾರಿಹಬ್ಬ ಎನ್ನುವ ಡಿಕೆಶಿ ಅಭಿಮಾನಿಗಳ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಡಿಕೆ ಶಿವಕುಮಾರ್ ಗೆ ಬೇಲ್ ಸಿಕ್ಕಿದೆ ಅಷ್ಟೇ: ಆರ್​. ಅಶೋಕ್
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್​ಗೆ ಬೇಲ್ ಸಿಕ್ಕಿದೆ ಅಷ್ಟೇ. ಆದರೆ, ಕೇಸ್ ವಜಾ ಆಗಿಲ್ಲ. ಇದನ್ನ ಡಿಕೆಶಿ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು. ಇದರಲ್ಲಿ ಬಿಜೆಪಿ ಕೈವಾಡವಿಲ್ಲ, ಇನ್ನಾದರೂ ಬಿಜೆಪಿ ಬಗ್ಗೆ ಹೇಳಿಕೆ ಕೊಡೋದು ಬಿಡಬೇಕು. ಪ್ರಜಾಪ್ರಭುತ್ವದಲ್ಲಿ ಅವರ ವ್ಯವಹಾರಗಳು ಬಯಲಾಗಿವೆ ಕೋರ್ಟ್​​ನಲ್ಲಿ ಇನ್ನೂ ವಿಚಾರಣೆ ಇದೆ. ನ್ಯಾಯಾಲಯದ ಮೇಲೆ ಬಿಜೆಪಿಗೆ ಗೌರವವಿದೆ. ಇಲ್ಲಿ ತನಕ ಬಿಜೆಪಿ ಕೈವಾಡ ಅಂತಿದ್ದವರಿಗೆ ಈಗಲಾದರೂ ಗೊತ್ತಾಗಬೇಕು ಎಂದು ಟಾಂಗ್ ನೀಡಿದರು. ನಮ್ಮನೆಗೆ ಐಟಿ ರೈಡ್ ಆದರೆ ಯಡಿಯೂರಪ್ಪನವರ ದಾಖಲೆಗಳು ಸಿಗುತ್ತವೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಶೋಕ್, ಯಡಿಯೂರಪ್ಪ ಇದನ್ನೆಲ್ಲಾ ನೋಡಿಕೊಂಡೇ ಬಂದಿದ್ದಾರೆ. ಐಟಿ‌ ದಾಳಿ ಯಾರೋ ವ್ಯಕ್ತಿಯ ಹೇಳಿಕೆಯಿಂದ ನಡೆಯಲ್ಲ. ಈ ರೀತಿ ಸವಾಲು ಹಾಕುವುದು ರಾಜಕೀಯ ನಾಯಕರಿಗೆ ಒಳ್ಳೆಯದಲ್ಲ ಎಂದರು.

Intro:

ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಜಾಮೀನು ಸಿಕ್ಕಿದೆ ಅಷ್ಟೇ ಅವರ ಮೇಲಿನ ಪ್ರಕರಣ ರದ್ದಾಗಿಲ್ಲ ಎಂದು ಮುಂದೈತೆ ಮಾರಿಹಬ್ಬ ಎನ್ನುವ ಡಿಕೆ ಅಭಿಮಾನಿಗಳ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡಿಕೆ ಶಿವಕುಮಾರ್ ಗೆ ಬೇಲ್ ಸಿಕ್ಕಿದೆ ಅಷ್ಟೇ, ಆದರೆ ಕೇಸ್ ವಜಾ ಆಗಿಲ್ಲ ಇದನ್ನ ಅವರ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು ಇದರಲ್ಲಿ ಬಿಜೆಪಿ ಕೈವಾಡ ಇಲ್ಲ, ಇನ್ನಾದರೂ ಬಿಜೆಪಿ ಬಗ್ಗೆ ಹೇಳಿಕೆ ಕೊಡೋದು ಬಿಡಬೇಕು, ಪ್ರಜಾಪ್ರಭುತ್ವದಲ್ಲಿ ಅವರ ವ್ಯವಹಾರಗಳು ಬಯಲಾಗಿವೆ ಕೋರ್ಟ್ ನಲ್ಲಿ ಇನ್ನೂ ವಿಚಾರಣೆ ಇದೆ ನ್ಯಾಯಾಲಯದ ಮೇಲೆ ಬಿಜೆಪಿಗೆ ಗೌರವ ಇದೆ, ಇಲ್ಲಿ ತನಕ ಬಿಜೆಪಿ ಕೈವಾಡ ಅಂತಿದ್ದವರಿಗೆ ಈಗಲಾದರೂ ಗೊತ್ತಾಗಬೇಕು ಎಂದು ಟಾಂಗ್ ನೀಡಿದರು.

ನಮ್ಮನೆಗೆ ಐಟಿ ರೈಡ್ ಆದರೆ ಯಡಿಯೂರಪ್ಪನವರ ದಾಖಲೆಗಳು ಸಿಗುತ್ತವೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಶೋಕ್, ಯಡಿಯೂರಪ್ಪ ಇದನ್ನೆಲ್ಲಾ ನೋಡಿಕೊಂಡೇ ಬಂದಿದ್ದಾರೆ, ಐಟಿ‌ ದಾಳಿ ಯಾರೋ ವ್ಯಕ್ತಿಯ ಹೇಳಿಕೆಯಿಂದ ನಡೆಯಲ್ಲ ಈ ರೀತಿ ಸವಾಲು ಹಾಕುವುದು ಇಂತಹ ರಾಜಕೀಯ ನಾಯಕರಿಗೆ ಒಳ್ಳೆಯದಲ್ಲ ಎಂದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.