ETV Bharat / state

ಸಿದ್ದರಾಮಯ್ಯ ಸಿಎಂ ಆಗಿದ್ದವರು, ಹೀಗಾಗಿಯೇ ಯಡಿಯೂರಪ್ಪ ಪದತ್ಯಾಗದ ವಿವರ ತಿಳಿದಿರಬಹುದು: ಡಿಕೆಶಿ - RR Nagar by election

ಮುನಿರತ್ನ ಕಣ್ಣೀರು ವಿಚಾರವಾಗಿ ಡಿಕೆಶಿ ಆರ್​ಆರ್​ ನಗರದಲ್ಲಿ ಪ್ರತಿಕ್ರಿಯಿಸಿ, ಅವರು ನಿರ್ಮಾಪಕರಾಗಿದ್ದವರು ಈಗ ನಟರಾಗಿದ್ದಾರೆ ಅಷ್ಟೇ ಎಂದಿದ್ದಾರೆ. ಇನ್ನು, ಉಪಚುನಾವಣೆ ಫಲಿತಾಂಶ ಬರುತ್ತಿದ್ದಂಗೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು, ಹೀಗಾಗಿ ಬಿಎಸ್​ವೈ ಪದತ್ಯಾಗದ ಬಗ್ಗೆ ತಿಳಿದಿರಬಹುದು ಎಂದು ಹೇಳಿದ್ದಾರೆ.

DK Shivakumar
ಡಿ.ಕೆ ಶಿವಕುಮಾರ್
author img

By

Published : Oct 29, 2020, 3:25 PM IST

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಸಾಕಷ್ಟು ಮಾಹಿತಿ ಇದೆ. ಇದರಿಂದಲೇ 15 ದಿನದ ಬಳಿಕ ಸಿಎಂ ಯಡಿಯೂರಪ್ಪ ಅವರ ಪದತ್ಯಾಗದ ಕುರಿತು ತಿಳಿಸಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ರಾಜರಾಜೇಶ್ವರಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಜ್ಞಾನ ಇದೆ. ನಮ್ಮ ಪಾರ್ಟಿ ಬಿಟ್ಟು ಹೋದವರೆಲ್ಲಾ ಏನೇನು ಮಾತನಾಡಿದ್ದಾರೋ ಗೊತ್ತಿಲ್ಲ. ಅನೇಕ ಶಾಸಕರು, ಮಂತ್ರಿಗಳು ಈ ಬಗ್ಗೆ ಮಾತನಾಡುತ್ತಾ ಇದ್ದಾರೆ. ಆ ಹಿನ್ನೆಲೆಯಲ್ಲಿ ನಾನೇನು ವ್ಯಾಖ್ಯಾನ ಮಾಡೋಲ್ಲ. ಮೊದಲು ಎಲೆಕ್ಷನ್ ಮಾಡೋಣ. ಚುನಾವಣೆ ಮುಗಿದ ಮೇಲೆ‌ ನೋಡೋಣ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ

ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ವಿಚಾರ ಕುರಿತು ಮಾತನಾಡಿದ ಡಿಕೆಶಿ, ಹೌದ್ರಿ ಅವರು ರಕ್ತನೇ ಕಾಂಗ್ರೆಸ್, ತಾಯಿನೇ ಕಾಂಗ್ರೆಸ್ ನನ್ನ ಉಸಿರೇ ಕಾಂಗ್ರೆಸ್ ಅಂತಾ ಹೇಳಿರಲಿಲ್ವಾ? ಡಿ.ಕೆ ಶಿವಕುಮಾರೇ ಸಿಎಂ ಆಗ್ತಾರೆ ಅಂದಿದ್ರು. ಈಗ ಡಿ.ಕೆ ಶಿವಕುಮಾರ್ ಹಿಂದೆ ಯಾರು ಇಲ್ಲ ಅಂತಿದ್ದಾರೆ. ಹೌದು ನನ್ನ ಹಿಂದೆ ಯಾರೂ ಇಲ್ಲ, ನಾನು ಹುಟ್ಟುವಾಗ ಒಬ್ಬನೇ ಸಾಯೋವಾಗ ಇರೋದು ಒಬ್ಬನೇ. ಅವರು ನಿರ್ಮಾಪಕರಾಗಿದ್ದವರು ಈಗ ನಟರಾಗಿದ್ದಾರೆ ಅಷ್ಟೇ. ಮುನಿರತ್ನ‌ ಬಗ್ಗೆ ಹಿಂದೆ ಮೋದಿ ಮಾತನಾಡಿದ್ರು, ಯಡಿಯೂರಪ್ಪ ಮಾತನಾಡಿದ್ರು. ಮೊದಲು ಅದನ್ನ ಸಮರ್ಥನೆ ಮಾಡಿಕೊಳ್ಳಲಿ ಎಂದು ಟಾಂಗ್​ ಕೊಟ್ಟರು.

ಪಕ್ಷ ಸೇರ್ಪಡೆ: ಪ್ರೊಫೆಸರ್ ಸಿದ್ದರಾಜು ಹಾಗೂ ಬೆಂಬಲಿಗರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೆಂಗಳೂರಿನ ರಾಜರಾಜೇಶ್ವರಿನಗರ ಬಿಇಎಂಎಲ್ ಲೇಔಟ್​ನ ಸಿದ್ದರಾಜು ಅವರ ನಿವಾಸಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ಸಿದ್ದರಾಜು ಹಾಗೂ ಬೆಂಬಲಿಗರನ್ನು ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.