ETV Bharat / state

ವಿದ್ಯುತ್ ಸಂಸ್ಥೆಗಳ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ ಡಿಕೆಶಿ - ವಿದ್ಯುತ್ ಸಂಸ್ಥೆ ಖಾಸಗೀಕರಣಕ್ಕೆ ವಿರೋಧ

ರಾಜ್ಯ ಸರ್ಕಾರ ವಿದ್ಯುತ್​ ಸಂಸ್ಥೆಗಳ ಖಾಸಗೀಕರಣಕ್ಕೆ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಟ್ವಿಟ್​ ಮಾಡಿದ್ದಾರೆ.

D.K shivakumar
D.K shivakumar
author img

By

Published : Jun 1, 2020, 1:28 PM IST

ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವುದು ಕೆಟ್ಟ ಬೆಳವಣಿಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಟ್ವಿಟ್​ ಮಾಡಿರುವ ಅವರು, ವಿದ್ಯುತ್ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಜನರಿಗೆ ಬೆಲೆ ಏರಿಕೆಯ ಬರೆಯ ಜೊತೆಗೆ 70 ವರ್ಷಗಳಿಂದ ಕಟ್ಟಿ ಬೆಳೆಸಿದ ವಿದ್ಯುತ್ ಇಲಾಖೆಯನ್ನು ಹಾಳು ಮಾಡಲು ಬಿಜೆಪಿ ಸರ್ಕಾರ ಮುಂದಾಗಿರುವುದು ಅತ್ಯಂತ ಕೆಟ್ಟ ಬೆಳವಣಿಗೆ. ಇಂತಹ ಪ್ರಯತ್ನಕ್ಕೆ ಅವಕಾಶ ಕೊಡಕೂಡದು ಎಂದಿದ್ದಾರೆ.

ಮೈಶುಗರ್ ರೈತರ ಬೆನ್ನೆಲುಬು. ಮೈಶುಗರ್ ಕಾರ್ಖಾನೆ ಕರ್ನಾಟಕದಲ್ಲೇ ಮೊದಲ ಹಾಗೂ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯಾಗಿದ್ದು, ಮಂಡ್ಯ ಜಿಲ್ಲೆಯ ರೈತರ, ಜನರ ಬದುಕಿನ ಬೆನ್ನೆಲುಬಾಗಿದೆ. ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. 2003ರ ವಿದ್ಯುತ್ ಕಾಯ್ದೆ ತಿದ್ದುಪಡಿಗೆ ನನ್ನ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕಕ್ಕೆ ವಿದ್ಯುತ್‌ನ ಸಮರ್ಥ ನಿರ್ವಹಣೆಯ ಸಾಮರ್ಥ್ಯ ಇದೆ. ಈ ತಿದ್ದುಪಡಿ ಜಾರಿಗೆ ಬಂದರೆ ಕೆಲವೇ ಕೆಲವು ವ್ಯಕ್ತಿಗಳ ನಿಯಂತ್ರಣಕ್ಕೆ ವಿದ್ಯುತ್‌ ಕ್ಷೇತ್ರ ಒಳಪಡುತ್ತದೆ ಹಾಗೂ ವಿದ್ಯುತ್‌ ದರ ನಿಗದಿಯೂ ಅವರ ಇಚ್ಛೆಯಂತೆಯೇ ನಡೆದು, ದರ ಅಧಿಕವಾಗುತ್ತದೆ ಎಂದು ಡಿಕೆಶಿ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.