ETV Bharat / state

ಆಟೋ ಚಾಲಕರ ಜೊತೆ ಸಂವಾದ: ಆಟೋ ಚಾಲನೆ ಮಾಡಿ ಭರವಸೆ ನೀಡಿದ ಡಿ ಕೆ ಶಿವಕುಮಾರ್ - ಈಟಿವಿ ಭಾರತ್ ಕನ್ನಡ ಸುದ್ದಿ

ಬೆಲೆ ಏರಿಕೆಯಿಂದ ಪರದಾಡುತ್ತಿರುವ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್​ ಪಕ್ಷ ಒಟ್ಟು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
author img

By

Published : Mar 23, 2023, 9:38 PM IST

Updated : Mar 24, 2023, 7:41 AM IST

ಆಟೋ ಚಾಲನೆ ಮಾಡಿ ಭರವಸೆ ನೀಡಿದ ಡಿ ಕೆ ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಂಗಳೂರು ಅರಮನೆ ಮೈದಾನದಲ್ಲಿ ಆಟೋ ಚಾಲಕರ ಜೊತೆ ಗುರುವಾರ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಶಿವಕುಮಾರ್ ಅವರು ಅರಮನೆ ಮೈದಾನದ ಪ್ರವೇಶದ್ವಾರದಿಂದ ಸಂವಾದ ಸ್ಥಳದವರೆಗೂ ಆಟೋ ಚಾಲನೆ ಮಾಡಿ ಚಾಲಕ ಸಮೂಹದ ಜೊತೆ ತಾವು ಇರುವುದಾಗಿ ವಿಶ್ವಾಸ ತುಂಬಿದರು.

ಈ ವೇಳೆ ಮಾತನಾಡಿದ ಅವರು, ಇಂದು ನನ್ನ ಜೀವನದಲ್ಲಿ ಬಹಳ ನೆನಪಿನಲ್ಲಿ ಉಳಿಯಲಿರುವ ದಿನ. ಕಾರಣ ಇಂದು ನಾನು ಪವಿತ್ರ ಆಟೋ ಚಾಲನೆ ಮಾಡಿದ ದಿನ. ನಿಮ್ಮ ಕುಟುಂಬದ ಸದಸ್ಯನಾಗಿ ನಾನು ಇಲ್ಲಿ ನಿಂತಿದ್ದೇನೆ. ಇದಕ್ಕಾಗಿ ನನಗೆ ಹೆಮ್ಮೆ ಇದೆ. ನೀವು ಸ್ವಾಭಿಮಾನದ ಬದುಕು ನಡೆಸುತ್ತಿದ್ದೀರಿ. ನೀವು ದೇಶ ಹಾಗೂ ಜನ ಸೇವಕರು. ಮಧ್ಯಮವರ್ಗ ಹಾಗೂ ಜನ ಸಾಮಾನ್ಯರ ಸಾರಥಿಗಳು. ಇಡೀ ಪ್ರಪಂಚದಲ್ಲಿ ಈ ವರ್ಗಕ್ಕೆ ಜಾತಿ, ಧರ್ಮದ ಬೇಧವಿಲ್ಲ. ಜನ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಿಸುವ ಪವಿತ್ರ ಕೆಲಸ ಮಾಡಿಕೊಂಡು ಬಂದಿದ್ದೀರಿ. ಒಬ್ಬ ವ್ಯಕ್ತಿ ಸಾಧನೆಗೆ ನೀವು ಸಂಪರ್ಕದ ವ್ಯವಸ್ಥೆಯಾಗಿದ್ದೀರಿ. ಜನರ ನಂಬಿಕೆ ಗಳಿಸಿದ್ದೀರಿ. ನಿಮಗೆ ಕೋಟಿ ಧನ್ಯವಾದಗಳು ಎಂದರು.

ಆಟೋ ಚಾಲಕರ ಜತೆ ನಿಂತಿರುವ ಡಿ ಕೆ ಶಿವಕುಮಾರ್
ಆಟೋ ಚಾಲಕರ ಜತೆ ನಿಂತಿರುವ ಡಿ ಕೆ ಶಿವಕುಮಾರ್

ಸರ್ಕಾರ ನಿಮ್ಮ ಜೇಬನ್ನು ಪಿಕ್​ಪಾಕೆಟ್​ ಮಾಡುತ್ತಿದೆ: ಇತ್ತೀಚೆಗೆ ನಡೆಯುತ್ತಿರುವ ಸಮೀಕ್ಷೆಗಳಲ್ಲಿ ಶೇ. 80 ರಷ್ಟು ಜನ ಕಾಂಗ್ರೆಸ್ ಪಕ್ಷದ ಪರ ಒಲವು ತೋರಿಸುತ್ತಿದ್ದಾರೆ. ನೀವು ದಿನನಿತ್ಯ ಗ್ಯಾಸ್, ಡೀಸೆಲ್ ಮೂಲಕ ಗಾಡಿ ಚಾಲನೆ ಮಾಡುತ್ತಿದ್ದು, ಬೆಲೆ ಏರಿಕೆಯಿಂದ ಸರ್ಕಾರ ನಿಮ್ಮ ಜೇಬನ್ನು ದಿನನಿತ್ಯ ಪಿಕ್ ಪಾಕೆಟ್ ಮಾಡುತ್ತಿದೆ. ಕೋವಿಡ್ ಸಮಯದಲ್ಲಿ ನಿಮ್ಮ ಬದುಕಿನ ಮೇಲೆ ಬರೆ ಹಾಕಿದರು. ಈ ಸಮಯದಲ್ಲಿ ನಾವು ಚಾಲಕರಿಗೆ ನೆರವು ನೀಡಬೇಕು ಎಂದು ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ಆಗ್ರಹ ಮಾಡಿದೆವು.

ಪ್ರತಿ ತಿಂಗಳು 10 ಸಾವಿರ ರೂ. ಪರಿಹಾರ ನೀಡುವಂತೆ ಕೇಳಿದೆವು. ಆದರೆ ಈ ಸರ್ಕಾರ 5 ಸಾವಿರ ಘೋಷಣೆ ಮಾಡಿ, ಒಂದು ತಿಂಗಳೂ ಅದನ್ನು ಸರಿಯಾಗಿ ನೀಡಲಿಲ್ಲ. ನಮ್ಮ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರು ಪಕ್ಷದಲ್ಲಿ ಚಾಲಕರ ವಿಭಾಗ ಆರಂಭಿಸಬೇಕು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಪಕ್ಷದಲ್ಲಿ ಚಾಲಕರ ಘಟಕ ಆಂರಂಭಿಸಿದ್ದೇವೆ. ಆ ಮೂಲಕ ನಿಮ್ಮ ಮನೆ ಸದಸ್ಯರಾಗಿದ್ದೇವೆ ಎಂದು ವಿವರಿಸಿದರು.

ಆಆಟೋ ಚಾಲಕರೊಂದಿಗೆ ಸಂವಾದದಲ್ಲಿ ನಿರತರಾಗಿರುವ ಡಿಕೆಶಿ
ಆಟೋ ಚಾಲಕರೊಂದಿಗೆ ಸಂವಾದದಲ್ಲಿ ನಿರತರಾಗಿರುವ ಡಿಕೆಶಿ

ಅನ್ನಭಾಗ್ಯ ಯೋಜನೆ ಮೂಲಕ 10 ಕೆಜಿ ಅಕ್ಕಿ: ಬೆಲೆ ಏರಿಕೆಯಿಂದ ಪರದಾಡುತ್ತಿರುವ ಜನರಿಗೆ ಸಹಾಯ ಮಾಡಲು ಕಾಂಗ್ರೆಸ್ ಪಕ್ಷ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆ. ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಮುಂದಿನ ಜೂನ್ ನಂತರ ಚಾಲಕರು ಯಾರೂ ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಅದೇ ರೀತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಪ್ರೋತ್ಸಾಹ ಧನ ನೀಡುತ್ತೇವೆ. ಇನ್ನು ಬಡ ಕುಟುಂಬಗಳ ಪ್ರತಿ ಸದಸ್ಯರಿಗೆ ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಉಚಿತ ಅಕ್ಕಿ ನೀಡಲಾಗುವುದು. ಇನ್ನು ನಿರುದ್ಯೋಗಿ ಯುವಕರಿಗೆ ನೆರವು ನೀಡಲು ಪದವೀಧರ ಯುವಕರಿಗೆ 3 ಸಾವಿರ ಹಾಗೂ ಡಿಪ್ಲೋಮಾ ಮಾಡಿರುವವರಿಗೆ ಪ್ರತಿ ತಿಂಗಳು 1500 ರೂ.ಗಳನ್ನು ನೀಡಲಾಗುವುದು ಎಂಬ ಮಾಹಿತಿ ನೀಡಿದರು.

ಬೆಂಗಳೂರು ಅರಮನೆ ಮೈದಾನದಲ್ಲಿ ಆಟೋ ಚಾಲಕರೊಂದಿಗೆ ಡಿ ಕೆ ಶಿವಕುಮಾರ್ ಸಂವಾದ ನಡೆಸಿದರು

ಪೊಲೀಸರು ನಿಮಗೆ ನೀಡುತ್ತಿರುವ ಕಿರುಕುಳ ತಪ್ಪಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದೆ ನಿಮ್ಮ ಕಾಂಗ್ರೆಸ್ ಸರ್ಕಾರ ಬರಲಿದೆ. ನಿಮ್ಮ ಹೋರಾಟದ ದಿಕ್ಕು ಮೇ ತಿಂಗಳಲ್ಲಿ ರಾಜ್ಯದಲ್ಲಿ ಬದಲಾವಣೆ ತರುವತ್ತ ಇರಬೇಕು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಆಟೋಗಳ ಮೇಲೆ ಹಾಕಿಕೊಂಡು ಪ್ರಚಾರ ಮಾಡುತ್ತಿರುವವರಿಗೆ ಧನ್ಯವಾದಗಳು. ಈ ಹೊಸ ವರ್ಷದ ಸಂದರ್ಭದಲ್ಲಿ ನಿಮಗೆ ಒಳ್ಳೆಯದಾಗಲಿ, ನಾನು ನಮ್ಮ ಪಕ್ಷದ ನಾಯಕರೆಲ್ಲರೂ ನಿಮ್ಮ ಜತೆ ಇರುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆ ಶಾಸಕ ರಿಜ್ವಾನ್ ಅರ್ಷದ್ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬಾದಾಮಿ ಕ್ಷೇತ್ರದಲ್ಲಿ ನಾಳೆ ಸಿದ್ದರಾಮಯ್ಯ ಪ್ರವಾಸ.. ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ

Last Updated : Mar 24, 2023, 7:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.