ETV Bharat / state

ಪದ್ಮನಾಭನಗರ ಕೈ ಅಭ್ಯರ್ಥಿ ರಘುನಾಥ್ ನಾಯ್ಡು ಸೇರಿ 50 ಮಂದಿಗೆ 'ಬಿ' ಫಾರಂ ನೀಡಿದ ಡಿಕೆಶಿ - ಬಿ ಫಾರಂ

ಪದ್ಮನಾಭನಗರದಲ್ಲಿ ಕಾಂಗ್ರೆಸ್ ಸ್ಪರ್ಧೆ ವಿಚಾರವಾಗಿ ಎದ್ದಿರುವ ದೊಡ್ಡ ಚರ್ಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತೆರೆ ಎಳೆದಿದ್ದಾರೆ. ರಘುನಾಥ್ ನಾಯ್ಡು ಅವರನ್ನ ದೂರವಾಣಿ ಮೂಲಕ ಸಂಪರ್ಕಿಸಿ ಕೆಪಿಸಿಸಿ ಕಚೇರಿಗೆ ಕರೆಸಿಕೊಂಡು ಬಿ ಫಾರಂ ವಿತರಿಸಿದ್ದಾರೆ.

DK Shivakumar distributes B form to Congress candidates
ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಿದ ಡಿ.ಕೆ ಶಿವಕುಮಾರ್
author img

By

Published : Apr 14, 2023, 7:31 AM IST

ಬೆಂಗಳೂರು: ಪದ್ಮನಾಭನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ವಿರುದ್ಧ ಕಾಂಗ್ರೆಸ್​​ನಿಂದ ಸಂಸದ ಡಿ.ಕೆ ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗೆ ತೆರೆ ಬಿದ್ದಿದೆ. ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಪದ್ಮನಾಭನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ. ರಘುನಾಥ್​ ನಾಯ್ಡು ಆಯ್ಕೆಯಾಗಿದ್ದರು. ಗುರುವಾರ(ನಿನ್ನೆ) ನಾಮಪತ್ರ ಸಲ್ಲಿಕೆ ಆರಂಭವಾಗಿರುವ ಹಿನ್ನೆಲೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಲು ಆರಂಭಿಸಿದ್ದಾರೆ.

ಮೊದಲ ದಿನವೇ ಬಿ ಫಾರಂ ಸ್ವೀಕರಿಸಲು ಆಗಮಿಸಿದ್ದ ರಘುನಾಥ್ ನಾಯ್ಡು ಅವರನ್ನ ಕಾರಣ ನೀಡದೇ ವಾಪಸ್ ಕಳುಹಿಸಲಾಗಿತ್ತು. ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಆರ್. ಅಶೋಕ್​ ಅವರನ್ನು ಬಿಜೆಪಿ ಕಣಕ್ಕಿಳಿಸಿರುವ ಹಿನ್ನೆಲೆ ಪದ್ಮನಾಭ ನಗರದಲ್ಲಿ ಅಶೋಕ್ ವಿರುದ್ಧ ಡಿ.ಕೆ ಸುರೇಶ್ ಕಣಕ್ಕಿಳಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ತಮ್ಮ ಕ್ಷೇತ್ರವಾದ ಪದ್ಮನಾಭನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಜತೆಗೆ ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ಅವರನ್ನ ಬಿಜೆಪಿ ಕಣಕ್ಕಿಳಿಸಿದೆ. ಎರಡು ಕ್ಷೇತ್ರದಿಂದ ಪ್ರತಿನಿಧಿಸುತ್ತಿರುವ ಅಶೋಕ್ ಕನಕಪುರದಲ್ಲಿ ಎಷ್ಟು ಪ್ರಮಾಣದ ಒಕ್ಕಲಿಗ ಮತದಾರರನ್ನ ಸೆಳೆಯುತ್ತಾರೆ ಎಂಬುದನ್ನು ಪರೀಕ್ಷಿಸಲು ಬಿಜೆಪಿ ಹೈಕಮಾಂಡ್ ಒಂದು ಮಹತ್ವದ ನಡೆ ಇಟ್ಟಿದೆ.

ಇದೀಗ ಡಿ.ಕೆ ಶಿವಕುಮಾರ್ ವಿರುದ್ಧ ಕಣಕ್ಕಿಳಿದಿರುವ ಅಶೋಕ್ ಬಗ್ಗೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ನಾಯಕರು ಡಿ.ಕೆ ಸುರೇಶ್ ಅವರು ಅಶೋಕ್ ವಿರುದ್ಧ ಪದ್ಮನಾಭ ನಗರದಲ್ಲಿ ಕಣಕ್ಕಿಳಿಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅಶೋಕ್ ಯಾವ ಕ್ಷೇತ್ರದಲ್ಲಿಯೂ ಗೆಲ್ಲದಂತೆ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗುತ್ತಿತ್ತು. ಇದರಿಂದಲೇ ರಘುನಾಥ್ ನಾಯ್ಡುಗೆ ಬಿ ಫಾರಂ ವಿತರಣೆ ಮಾಡಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಆಗಿತ್ತು.

ಆದರೆ, ಕಾಂಗ್ರೆಸ್ ಕಚೇರಿಗೆ ಆಗಮಿಸಿ ವಾಪಸ್ ಆಗುವ ಸಂದರ್ಭ ಸ್ವತಃ ರಘುನಾಥ್ ನಾಯ್ಡು ಮಾತನಾಡಿ ಈ ದಿನ ಚೆನ್ನಾಗಿಲ್ಲ. ಇದರಿಂದಾಗಿ ನಾಳೆ ಬಿ ಫಾರಂ ಸ್ವೀಕರಿಸುತ್ತೇನೆ. ಒಂದೊಮ್ಮೆ ಡಿ.ಕೆ ಸುರೇಶ್ ಪದ್ಮನಾಭನಗರದಿಂದ ಕಣಕ್ಕಿಳಿಯಲು ಬಯಸಿದರೆ ತಾವು ಅವರಿಗಾಗಿ ಕ್ಷೇತ್ರ ಬಿಟ್ಟು ಕೊಡುವುದಾಗಿ ತಿಳಿಸಿದ್ದರು.

ಆದರೆ,ಇದೀಗ ಪದ್ಮನಾಭನಗರದಲ್ಲಿ ಕಾಂಗ್ರೆಸ್ ಸ್ಪರ್ಧೆ ವಿಚಾರವಾಗಿ ಎದ್ದಿರುವ ದೊಡ್ಡ ಚರ್ಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತೆರೆ ಎಳೆದಿದ್ದಾರೆ. ರಘುನಾಥ್ ನಾಯ್ಡು ಅವರನ್ನ ದೂರವಾಣಿ ಮೂಲಕ ಸಂಪರ್ಕಿಸಿ ಕೆಪಿಸಿಸಿ ಕಚೇರಿಗೆ ಕರೆಸಿಕೊಂಡು ಬಿ ಫಾರಂ ವಿತರಿಸಿ ಕಳುಹಿಸಿದ್ದಾರೆ. ಈ ಮೂಲಕ ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ಡಿ.ಕೆ ಸುರೇಶ್ ಕಣಕ್ಕಿಳಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಹ ನೀಡಿದ್ದಾರೆ. ಒಂದೆರಡು ದಿನದಲ್ಲಿಯೇ ನಾಯ್ಡು ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಇದೆ.

ಪಕ್ಷದ ಹೈಕಮಾಂಡ್ ತಮಗೆ ಪದ್ಮನಾಭನಗರ ಜೊತೆ ಕನಕಪುರದಿಂದಲೂ ಸ್ಪರ್ಧಿಸುವಂತೆ ಸೂಚಿಸಿರುವುದು ಸ್ವತಃ ಆರ್.ಅಶೋಕ್ ಅವರಿಗೆ ಆಘಾತ ಮೂಡಿಸಿತ್ತು. ಹೈಕಮಾಂಡ್ ನಿಲುವು ತಮಗೆ ಅಚ್ಚರಿ ತಂದಿದೆ ಎಂದು ಸಹ ಹೇಳಿದ್ದರು. ಒಂದೊಮ್ಮೆ ಡಿ.ಕೆ ಶಿವಕುಮಾರ್ ಅವರು ಆರ್.ಅಶೋಕ್​ ಅವರನ್ನು ಪದ್ಮನಾಭ ನಗರದಲ್ಲಿ ಸೋಲಿಸುವ ಯೋಚನೆ ಮಾಡಿ ಡಿ.ಕೆ ಸುರೇಶರನ್ನ ಕಣಕ್ಕಿಳಿಸಿದ್ದರೆ ನಿಜವಾಗಿಯೂ ಅಶೋಕ್ ಇಕ್ಕಟ್ಟಿಗೆ ಸಿಲುಕುತ್ತಿದ್ದರು ಎಂಬ ಮಾತು ಸಹ ಕೇಳಿ ಬರುತ್ತಿದೆ.

ಗುರುವಾರ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಆರಂಭಿಸಿದ್ದು, ಮಹಾಲಕ್ಷ್ಮಿ ಲೇಔಟ್ ಅಭ್ಯರ್ಥಿ ಎಸ್.ಕೇಶವಮೂರ್ತಿ,‌ ಆರ್​​ಆರ್ ನಗರ ಅಭ್ಯರ್ಥಿ ಕುಸುಮಾ, ಹೆಬ್ಬಾಳ ಅಭ್ಯರ್ಥಿ ಬೈರತಿ ಸುರೇಶ್, ದೊಡ್ಡಬಳ್ಳಾಪುರ ಅಭ್ಯರ್ಥಿ ಟಿ. ವೆಂಕಟರಮಣಯ್ಯ, ಗುಬ್ಬಿ ಶ್ರೀನಿವಾಸ್ ಪರವಾಗಿ ಅವರ ಪುತ್ರ ದುಷ್ಯಂತ್, ಬಾಲರಾಜ ಗೌಡ ಯಶವಂತಪುರ, ರಘುನಾಥ ನಾಯ್ಡು, ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್ ಖಾನ್ ರೂಪಾ ಶಶಿಧರ್, ಶರತ್ ಬಚ್ಚೇಗೌಡ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿಗೆ ಬಿ ಫಾರಂ ವಿತರಿಸಲಾಯಿತು.

ಮನವೊಲಿಕೆ: ಟಿಕೆಟ್ ಸಿಗದೆ ನೊಂದಿದ್ದ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯೋಗೇಶ್ ಬಾಬು ಅವರೊಂದಿಗೆ ಯಶಸ್ವಿ ಸಂಧಾನ ನಡೆಸಲಾಯಿತು. ಅವರ‌ ರಾಜಕೀಯ ಬೆಳವಣಿಗೆಗೆ ಪಕ್ಷವು ಬೆನ್ನಾಗಿ ನಿಲ್ಲುವುದಾಗಿ ಭರವಸೆ ನೀಡಿ ಅವರನ್ನು ಮನವೊಲಿಸಲಾಯಿತು.

ಇದನ್ನೂ ಓದಿ: ಕ್ಷೇತ್ರ ತ್ಯಾಗಕ್ಕೆ ಸಿದ್ದರಾದ ರಘುನಾಥ ನಾಯ್ಡು; ಡಿ.ಕೆ.ಸುರೇಶ್‌ಗಾಗಿ ಪದ್ಮನಾಭನಗರ ಬಿಟ್ಟು ಕೊಡುವ ಭರವಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.