ಬೆಂಗಳೂರು: ನಿನ್ನೆ ಡಿಕೆಶಿ ಪುತ್ರಿ ಐಶ್ವರ್ಯಾ ಮತ್ತು ಉದ್ಯಮಿ ಅಮರ್ತ್ಯ ಹೆಗ್ಡೆ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆದಿದ್ದು, ಐಶ್ವರ್ಯಾ ನಿನ್ನೆ ಸಂಜೆಯೇ ಪತಿ ಮನೆಯನ್ನು ಪ್ರವೇಶ ಮಾಡಿದ್ದಾರೆ.
ನಗರದ ವೈಟ್ ಫೀಲ್ಡ್ ಶೆರಟಾನ್ ಖಾಸಗಿ ಹೋಟೆಲ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಕಾಫಿ ಡೇ ಮಾಲೀಕರಾದ ದಿ. ಸಿದ್ದಾರ್ಥ ಹೆಗ್ಡೆ ಪುತ್ರ ಅಮರ್ತ್ಯ ಹೆಗ್ಡೆ ಅವರು ಭಾನುವಾರ ಸಪ್ತಪದಿ ತುಳಿದರು. ಸಮಾರಂಭದಲ್ಲಿ ರಾಜಕೀಯ ನಾಯಕರು, ಗಣ್ಯರು, ಮಠಾಧೀಶರು ಸೇರಿದಂತೆ ಅನೇಕರು ಭಾಗಿಯಾಗಿ ನವ ವಧು-ವರರನ್ನು ಹಾರೈಸಿದರು.
ಓದಿ: ವೈವಾಹಿಕ ಬದುಕಿಗೆ ಕಾಲಿಟ್ಟ ಐಶ್ವರ್ಯಾ- ಅಮರ್ತ್ಯ: ಯುವ ಜೋಡಿಯ ಕಲ್ಯಾಣಕ್ಕೆ ಗಣ್ಯರು ಸಾಕ್ಷಿ
ವಿವಾಹ ಸಮಾರಂಭದ ನಂತರ ಸಂಜೆ ಶುಭ ಲಗ್ನದಲ್ಲಿ ಐಶ್ವರ್ಯಾ ಪತಿ ಅಮರ್ತ್ಯ ಹೆಗ್ಡೆ ನಿವಾಸವನ್ನು ಪ್ರವೇಶ ಮಾಡಿದ್ದು, ಇಂದು ನಗರದ ಹೊರ ಹೊಲಯದಲ್ಲಿರುವ ರೆಸಾರ್ಟ್ನಲ್ಲಿ ನವಜೋಡಿಯ ಆರತಕ್ಷತೆ ಸಮಾರಂಭ ಜರುಗಲಿದೆ. ಫೆ.20ರಂದು ಅರಮನೆ ಮೈದಾನದಲ್ಲಿ ಬೀಗರೂಟ ನಡೆಯಲಿದೆ.