ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ವಿವಾಹ ಇಂದು ಅಮಾರ್ಥ್ಯ ಹೆಗ್ಡೆ ಜೊತೆ ನೆರವೇರಲಿದ್ದು, ಐಶ್ವರ್ಯಾ ಅಪ್ಪ, ಅಮ್ಮನ ಮಮತೆ ಹಾಗೂ ತನ್ನ ಫ್ಯಾಮಿಲಿ ಮೇಲಿನ ಪ್ರೀತಿಯನ್ನ ನೃತ್ಯದ ಮೂಲಕ ಪ್ರದರ್ಶಿಸಿದರು.
ಅಮ್ಮ, ಅಪ್ಪ, ಚಿಕ್ಕಪ್ಪ, ತಮ್ಮ, ತಂಗಿಗೆ ವಿಶೇಷ ಪತ್ರ ಬರೆದು ನೃತ್ಯ ಮಾಡಿ ತಮ್ಮ ಕುಟುಂಬ ಸದಸ್ಯರನ್ನು ಹಾಡಿ ಹೊಗಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಿಂದಿ, ಕನ್ನಡ ಹಾಡುಗಳಿಗೆ ಐಶ್ವರ್ಯಾ ಮಾಡಿದ ನೃತ್ಯ ಮನೋಜ್ಞವಾಗಿದೆ. ತನ್ನ ಕುಟುಂಬ ಸದಸ್ಯರೆಲ್ಲರ ನೆನೆದು ತಾವು ಕೈ ಹಿಡಿಯುತ್ತಿರುವ ಅಮಾರ್ಥ್ಯ ಹೆಗ್ಡೆ ಕುರಿತು ಹಾಡಿಗೆ ನೃತ್ಯ ಮಾಡಿದರು. ಮಗಳ ಈ ಪ್ರೀತಿ ಕಂಡು ಡಿ ಕೆ ಶಿವಕುಮಾರ್ ಕ್ಷಣಕಾಲ ಭಾವುಕರಾದರು.
ಪತ್ರ ಬರೆದು, ನೃತ್ಯ ಮಾಡಿ ಐಶ್ವರ್ಯಾ ಕುಟುಂಬದ ಸದಸ್ಯರನ್ನು ನೆನೆಯುವ ಮೂಲಕ ಎಲ್ಲರನ್ನೂ ಭಾವುಕರನ್ನಾಗಿ ಮಾಡಿದರು.