ETV Bharat / state

ಸಿಬಿಐ ಮುಂದೆ ಹಾಜರಾದ ಡಿಕೆ ಬ್ರದರ್ಸ್ - KPCC President D.K. Shivakumar news

ವಿಚಾರಣೆ ಹಾಜರಾಗುವಂತೆ ನವೆಂಬರ್ 19 ರಂದು ಡಿ‌.ಕೆ.ಶಿವಕುಮಾರ್​​ಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ಹೀಗಾಗಿ ಇಂದು ಡಿಕೆ ಬ್ರದರ್ಸ್​ ವಿಚಾರಣೆಗೆ ಹಾಜರಾಗಿದ್ದಾರೆ.

ಡಿ‌.ಕೆ.ಶಿವಕುಮಾರ್​​
ಡಿ‌.ಕೆ.ಶಿವಕುಮಾರ್​​
author img

By

Published : Nov 25, 2020, 4:42 PM IST

ಬೆಂಗಳೂರು: ನೋಟಿಸ್​ ನೀಡಿದ್ದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ​ ಇಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ವಿಚಾರಣೆ ಹಾಜರಾಗುವಂತೆ ನವೆಂಬರ್ 19 ರಂದು ಡಿ‌.ಕೆ.ಶಿವಕುಮಾರ್​​ಗೆ ಸಮನ್ಸ್ ಜಾರಿ ಮಾಡಿತ್ತು. ಉತ್ತರ ಕರ್ನಾಟಕ‌ ಪ್ರವಾಸ ಹಿನ್ನೆಲೆ 23 ರಂದು ಹಾಜರಾಗಲು ಸಾಧ್ಯವಿಲ್ಲ. ಬದಲಾಗಿ ನ.25 ರಂದು ಹಾಜರಾಗುವುದಾಗಿ ಸಿಬಿಐ ತನಿಖಾಧಿಕಾರಿಗಳಿಗೆ ಮನವಿ ಮಾಡಿದ್ದು, ಇದಕ್ಕೆ‌ ಅಧಿಕಾರಿಗಳು ಒಪ್ಪಿದ್ದರು.

ಸಿಬಿಐ ಎದುರು ವಿಚಾರಣೆಗೆ ಹಾಜರಾಗಲಿರುವ ಡಿ. ಕೆ. ಶಿವಕುಮಾರ್​ ಹೇಳಿದ್ದೇನು?

ಅಕ್ಟೋಬರ್ 5 ರಂದು ಡಿಕೆಶಿ, ಸಹೋದರ ಸುರೇಶ್ ನಿವಾಸ ಸೇರಿದಂತೆ 14 ಕಡೆಗಳಲ್ಲಿ ಸಿಬಿಐ‌ ದಾಳಿ ನಡೆಸಿ ಶೋಧಕಾರ್ಯ ನಡೆಸಿತ್ತು. ದಾಳಿ ವೇಳೆ ಮಹತ್ವದ ದಾಖಲಾತಿ ಪತ್ರಗಳನ್ನು ವಶಪಡಿಸಿಕೊಂಡಿತ್ತು. ಪತ್ತೆಯಾಗಿರುವ ದಾಖಲಾತಿ ಇಟ್ಟುಕೊಂಡು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ರಾಜಕೀಯ ಕಾರಣಕ್ಕಾಗಿ ಬಿಜೆಪಿ ಸರ್ಕಾರ ನನ್ನ ಮನೆ ಮೇಲೆ ಸಿಬಿಐ ಮೂಲಕ ದಾಳಿ ಮಾಡಿಸಿದೆ ಎಂದು ಡಿಕೆಶಿ ಆರೋಪಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.