ETV Bharat / state

ಡ್ರಗ್ಸ್ ಪ್ರಕರಣ; ಚಿತ್ರ ತಾರೆಯರ ಜೊತೆಗೆ ಡಿಜೆಗಳ ಬೆನ್ನು ಹತ್ತಿದ ಪೊಲೀಸರು!

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಡಿಜೆಗಳನ್ನು ಕರೆಯಿಸಿಕೊಂಡ ಸಿಸಿಬಿ ಪೊಲೀಸರು, ಪಾರ್ಟಿಗಳಲ್ಲಿ ಯಾವೆಲ್ಲ ನಟ-ನಟಿಯರು ಬರುತ್ತಿದ್ದರು ಎಂಬುದರ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

DJs inquiry from CCB police
ಚಿತ್ರತಾರೆಯರ ಜೊತೆಗೆ ಡಿಜೆಗಳ ಬೆನ್ನು ಹತ್ತಿದ ಪೊಲೀಸರು
author img

By

Published : Sep 17, 2020, 11:25 PM IST

ಬೆಂಗಳೂರು : ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಲವು ಸಿನಿಮಾ ತಾರೆಯರು ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳನ್ನ ಸೇವಿಸುತ್ತಿದ್ರೂ ಎಂಬ ಪೂರಕವಾಗಿ ನಿನ್ನೆ ಸಂಜೆಯಿಂದ ಇಬ್ಬರು ಡಿಜೆಗಳನ್ನ ಸಿಸಿಬಿ ಪೊಲೀಸರು ಗೌಪ್ಯ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಈ ಟಿವಿ ಭಾರತಕ್ಕೆ ಲಭಿಸಿದೆ.

ಪ್ರಕರಣಕ್ಕೆ ಪೂರಕವಾಗಿ ಪಾರ್ಟಿಯಲ್ಲಿ ಸಂಗೀತ ಪ್ರಸಾರ ಮಾಡುತ್ತಿದ್ದ ಇಬ್ಬರು ಡಿಜೆಗಳ ಹೇಳಿಕೆಯನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿಕೊಂಡಿದ್ದಾರೆ. ನಗರಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳ ಬಗ್ಗೆ ಅವರಿಂದ ಮಾಹಿತಿ ಕಲೆ ಹಾಕಿದ ಸಿಸಿಬಿ ಅಧಿಕಾರಿಗಳು ಡಿಜೆಗಳನ್ನ ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಡಿಜೆಗಳಾದ ಗಣೇಶ್ ಹಾಗೂ ಜಸ್ಮಿತ್ ಎಂಬುವರನ್ನು ಮೊದಲು ಕರೆದಿದ್ದ ಸಿಸಿಬಿ ಅಧಿಕಾರಿಗಳು, ಅವರ ಹೇಳಿಕೆಗಳನ್ನ ದಾಖಲಿಸಿಕೊಂಡಿದ್ದಾರೆ. ಡ್ರಗ್ಸ್ ನಶೆಯಲ್ಲಿ ಆ ರಾತ್ರಿ ಏನೇನು ನಡೆಯುತ್ತಿತ್ತು. ಯಾವೆಲ್ಲ ನಟ-ನಟಿಯರು ಬರುತ್ತಿದ್ದರು ಎಂಬುದರ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ದಿನಕ್ಕೊಂದು ಸಾಕ್ಷಿಗಳು ಪೊಲೀಸರಿಗೆ ಸಿಗುತ್ತಿರುವುದರಿಂದ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.