ETV Bharat / state

ದೀಪಾವಳಿಗೆ ದಿನಗಣನೆ: ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ಬಣ್ಣ ಬಣ್ಣದ ದೀಪಗಳು

ದೀಪಾವಳಿ ಹಬ್ಬ ಅಂದ್ರೆ ಸಿಲಿಕಾನ್ ಸಿಟಿ ಮಂದಿಗೆ ಸಡಗರವೋ ಸಡಗರ. ದೀಪಾವಳಿ ಹತ್ತಿರವಾಗ್ತಿದ್ದಂತೆ ಹಬ್ಬವನ್ನು ಹೇಗೆಲ್ಲಾ ಆಚರಿಸಬೇಕೆಂದು ತಯಾರಿ ನಡೆಸುತ್ತಾರೆ. ಹಾಗಾಗಿ ವಿಧವಿಧವಾದ‌ ಕಲರ್​ಫುಲ್ ದೀಪಗಳು ನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

Diyas are available in bangalore market
ಬೆಂಗಳೂರು: ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ಬಣ್ಣ ಬಣ್ಣದ ದೀಪಗಳು
author img

By

Published : Nov 6, 2020, 8:15 AM IST

ಬೆಂಗಳೂರು: ದೀಪಾವಳಿ ಹಿನ್ನೆಲೆ ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿ‌ ಹಬ್ಬಕ್ಕೆ ಕಲರ್ ಫುಲ್ ದೀಪಗಳು ನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ವಿವಿಧ ಹಬ್ಬಗಳ ಪೈಕಿ ಯುಗಾದಿ, ಗೌರಿ-ಗಣೇಶ ಹಬ್ಬ, ಲಕ್ಷ್ಮೀ ಹಬ್ಬ,‌ ದಸರಾ‌‌ ಮತ್ತು ದೀಪಾವಳಿ ಹಬ್ಬಗಳನ್ನು ಅದ್ಧೂರಿಯಾಗೇ ಆಚರಿಸಲಾಗುತ್ತಿದ್ದು, ವ್ಯಾಪಾರ ಜೋರಾಗಿಯೇ ಇರುತ್ತದೆ. ‌ಅದರಲ್ಲೂ ದೀಪಾವಳಿ ಹಬ್ಬ ಅಂದ್ರೆ ಸಿಲಿಕಾನ್ ಸಿಟಿ ಮಂದಿಗೆ ಸಡಗರವೋ ಸಡಗರ. ದೀಪಾವಳಿ ಹತ್ತಿರವಾಗ್ತಿದ್ದಂತೆ ಹಬ್ಬವನ್ನು ಹೇಗೆಲ್ಲಾ ಆಚರಿಸಬೇಕೆಂದು ತಯಾರಿ ನಡೆಸುತ್ತಾರೆ. ಮನೆಯಲ್ಲಿ ವಿವಿಧ ಬಗೆಯ ದೀಪಗಳನ್ನು ಇಟ್ಟು ಅಲಂಕಾರ ಮಾಡೋದು ಗೃಹಿಣಿಯರ ಪ್ಲಾನ್​ ಆಗಿರುತ್ತೆ. ಹೀಗಾಗಿ ದೀಪಗಳನ್ನು ಖರೀದಿಸಲು ಬೆಂಗಳೂರಿಗರು ಸದಾ ತಯಾರಾಗಿರುತ್ತಾರೆ.

ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ಬಣ್ಣ ಬಣ್ಣದ ದೀಪಗಳು

ಹಾಗಾಗಿ ಬಣ್ಣ ಬಣ್ಣ ದೀಪಗಳು ನಗರದ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.‌ ಹಿಂದಿನ‌ ಕಾಲದಲ್ಲಿ ಮಣ್ಣಿನ‌ ಹಣತೆಗಳನ್ನು ಬಳಸುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ಹಬ್ಬ ಆಚರಿಸುವ ಜನರು ಹೊಸತನ್ನು ಬಯಸೋ ಕಾರಣ ವಿಶೇಷ ಹಾಗೂ ಇಂದಿನ‌‌ ಕಾಲಕ್ಕೆ ತಕ್ಕಂತೆ ವಿಭಿನ್ನವಾದ ಹಣತೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ.

ಕೊರೊನಾ ಹಿನ್ನೆಲೆ ದುಬಾರಿಯಾದ ಹಣತೆ:

ಕೋವಿಡ್​​ ಹಿನ್ನೆಲೆ ಈ ಮಣ್ಣಿನ ದೀಪಗಳ ಬೆಲೆ ಕೊಂಚ ಏರಿಕೆಯಾಗಿದೆ. ಆಗಿದ್ರೂ ಕೂಡ ಜನರು ಚಂದದ ಮಣ್ಣಿನ‌ ದೀಪಗಳನ್ನ ಕೊಳ್ಳುವಲ್ಲಿ ನಿರತರಾಗಿದ್ದಾರೆ. ಒಟ್ಟಾರೆ ಕೊರೊನಾ ಕಾರಣದಿಂದಾಗಿ ಯಾವ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು‌ ಆಗದೆ ಇದ್ರು ಕೂಡ ಬೆಳಕಿನ ಹಬ್ಬದ ಆಚರಣೆಯಲ್ಲಿ ಯಾವುದೇ ಕೊರತೆಯಾಗಬಾರದು ಅನ್ನೋದು ಉದ್ಯಾನನಗರಿ ಜನರ ಆಶಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.