ETV Bharat / state

ವೋಟರ್​ ಲಿಸ್ಟ್​​ನಲ್ಲಿ ಹೆಸರು ಇಲ್ಲದಿದ್ರೆ ಮತದಾರರು ಗಲಾಟೆ ಮಾಡೋ ಹಾಗಿಲ್ಲ

author img

By

Published : Apr 13, 2019, 8:14 PM IST

ಚುನಾವಣೆಗೆ 48 ಗಂಟೆ ಇರುವಾಗ 144 ಸೆಕ್ಷನ್ ಜಾರಿಯಾಗುತ್ತದೆ. ಆ ಸಮಯದಲ್ಲಿ ಐದು ಜನಕ್ಕಿಂತ ಹೆಚ್ಚು ಜನ ಒಟ್ಟು ಸೇರಬಾರದು. 48 ಗಂಟೆಗಳಲ್ಲಿ ಬೇರೆ ಮತದಾರರು, ನಾಯಕರು ಬೇರೆ ಕಡೆಯಿಂದ ಬೇರೆ ಕ್ಷೇತ್ರಕ್ಕೆ ಬಂದು ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳುವ ಹಾಗಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.

ಜಿಲ್ಲಾ ಚುನಾವಣಾಧಿಕಾರಿ

ಬೆಂಗಳೂರು: ದೇಶದಲ್ಲಿ ನಡೆದ ಒಂದನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಹಿಂಸಾಚಾರ ಹಾಗೂ ಅಹಿತಕರ ಘಟನೆಗಳು ನಡೆದ ಹಿನ್ನೆಲೆ ಬೆಂಗಳೂರಲ್ಲಿ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ.

ವೋಟರ್ ಲಿಸ್ಟ್​ನಲ್ಲಿ ಮತದಾರರ ಹೆಸರಿಲ್ಲದಿದ್ದರೆ ಜನರು ಗಲಾಟೆ ಮಾಡುವ ಹಾಗಿಲ್ಲ. ಇದಕ್ಕೆ ಅಧಿಕಾರಿಗಳು ಕಾರಣರಾಗೋದಿಲ್ಲ. ಜನರೇ ಫಾರ್ಮ್ ಸಿಕ್ಸ್ ಮೂಲಕ ನೋಂದಣಿಗೆ ಅಥವಾ ಸ್ಥಳ ಬದಲಾವಣೆಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಹೀಗಾಗಿ ಇದರಲ್ಲಿ ಅಧಿಕಾರಿಗಳ ಪಾತ್ರವಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.

18ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನಕ್ಕೆ ನಡೆಸಿರುವ ಸಿದ್ಧತೆಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, 15 ರಂದು ಎಲ್ಲಾ ಅಭ್ಯರ್ಥಿಗಳು ತಮ್ಮ ಚುನಾವಣೆ ಖರ್ಚಿನ ವಿವರವನ್ನು ಸಲ್ಲಿಸಬೇಕು. ಆ ದಿನ ಫ್ಲೈಯಿಂಗ್ ಸ್ಕ್ಯಾಡ್​ಗಳನ್ನು ಹೆಚ್ಚು ನಿಯೋಜನೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಆಮಿಷ ಒಡ್ಡಿದರೆ ಹಾಗೂ ಅದನ್ನು ಯಾರಾದರೂ ತೆಗೆದುಕೊಂಡರೆ ಅವರ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗುತ್ತದೆ ಎಂದರು.

ಜಿಲ್ಲಾ ಚುನಾವಣಾಧಿಕಾರಿ

ಚುನಾವಣೆಗೆ 48 ಗಂಟೆ ಇರುವಾಗ 144 ಸೆಕ್ಷನ್ ಜಾರಿಯಾಗುತ್ತದೆ. ಆ ಸಮಯದಲ್ಲಿ ಐದು ಜನಕ್ಕಿಂತ ಹೆಚ್ಚು ಜನ ಒಟ್ಟು ಸೇರಬಾರದು. 48 ಗಂಟೆಗಳಲ್ಲಿ ಬೇರೆ ಮತದಾರರು, ನಾಯಕರು ಬೇರೆ ಕಡೆಯಿಂದ ಬೇರೆ ಕ್ಷೇತ್ರಕ್ಕೆ ಬಂದು ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳುವ ಹಾಗಿಲ್ಲ. ಲಾಡ್ಜ್, ಕಲ್ಯಾಣ ಮಂಟಪಗಳು, ಧಾರ್ಮಿಕ ಕೇಂದ್ರಗಳಲ್ಲೂ ಚೆಕ್ಕಿಂಗ್​​ ನಡೆಯಲಿದೆ. ಡ್ರೈ ಡೇ ಎಂದು ಘೋಷಿಸಲಾಗುತ್ತದೆ. ಮದ್ಯ ಮಾರಾಟವಿಲ್ಲ. ಧ್ವನಿವರ್ಧಕ ಬಳಸುವ ಹಾಗಿಲ್ಲ. ಮಾಧ್ಯಮಗಳೂ ಚುನಾವಣಾ ರಿಸಲ್ಟ್​​ಗಳನ್ನು ಘೋಷಿಸೋ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದರು.

ಇವಿಎಂ ಮಷಿನ್ ಹಾಗೂ ವಿವಿ ಪ್ಯಾಟ್​ಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗಳನ್ನು ಇಪ್ಪತ್ತೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಾಡಲಾಗಿದೆ. ಇಲ್ಲಿ ಪೊಲೀಸರು, ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. 17 ರಂದು ಇವಿಎಂಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿದ್ದು, 18 ರಂದು ರಾತ್ರಿ ಎಲೆಕ್ಷನ್ ಕೌಂಟಿಂಗ್ ಸೆಂಟರ್​ಗೆ ತೆಗೆದುಕೊಂಡು ಹೋಗಿ ಮೇ 23ರವರೆಗೂ ಮೂರು ಸುತ್ತಿನ ಭದ್ರತೆ ನೀಡಲಾಗುತ್ತದೆ ಎಂದರು.

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ನಾಲ್ವರು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್​ಗಳಿದ್ದು, ನಿಯಮಗಳ ಪ್ರಕಾರ ಅವುಗಳ ಬಗ್ಗೆ ಜಾಹೀರಾತು ನೀಡಬೇಕು. ಆದರೆ, ಪ್ರಕಾಶ್ ರೈ ಬಿಟ್ಟರೆ ಸ್ವತಂತ್ರ ಅಭ್ಯರ್ಥಿಗಳಾದ ಕೆ.ವಿ.ಜಗದೀಶ್ ಕುಮಾರ್, ಹನುಮೇಗೌಡ, ಕೊಲ್ಲೂರ ಮಂಜುನಾಥ್ ನಾಯಕ ಇವರೆಲ್ಲರಿಗೂ ನೋಟಿಸ್​ ನೀಡಲಾಗಿದೆ. ಚುನಾವಣೆಗೆ ಮೊದಲೇ ಜಾಹೀರಾತು ನೀಡಬೇಕು ಎಂದು ಮಾಹಿತಿ ನೀಡಿದರು.

Intro:ವೋಟರ್ ಲಿಸ್ಟ್ ನಲ್ಲಿ ಹೆಸರಿಲ್ಲದಿದ್ರೆ ಅಧಿಕಾರಿಗಳು ಕಾರಣ ಅಲ್ಲ- ನೀವೇ ಕಾರಣ ಎಂದ ಜಿಲ್ಲಾ ಚುನಾವಣಾಧಿಕಾರಿ

ಬೆಂಗಳೂರು- ಒಂದನೇ ಹಂತದ ಲೋಕಸಭಾ ಚುನಾವಣೆ ನಡೆದ ಸ್ಥಳಗಳಲ್ಲಿ ಹಿಂಸಾಚಾರ ಹಾಗೂ ಅಹಿತಕರ ಘಟನೆಗಳು ನಡೆದ ಕಾರಣ, ಬೆಂಗಳೂರಲ್ಲಿ ಪೂರ್ವಸಿದ್ಧತೆಗಳನ್ನ ಕೈಗೊಳ್ಳಲಾಗಿದೆ. ಜನರು ಓಟರ್ ಲಿಸ್ಟ್ ಹೆಸರಿಲ್ಲದಿದ್ದರೆ ಗಲಾಟೆ ಮಾಡುವ ಹಾಗಿಲ್ಲ, ಇದಕ್ಕೆ ಅಧಿಕಾರಿಗಳು ಕಾರಣರಾಗೋದಿಲ್ಲ. ಜನರೇ ಫಾರ್ಮ್ ಸಿಕ್ಸ್ ಮೂಲಕ ನೋಂದಣಿಗೆ ಅಥವಾ ಸ್ಥಳ ಬದಲಾವಣೆಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಹೀಗಾಗಿ ಇದರಲ್ಲಿ ಅಧಿಕಾರಿಗಳ ಪಾತ್ರವಿಲ್ಲ ಎಂದು ಜಿಲ್ಲಾ ಚುನಾವಣಾ ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದರು.
18 ನೇ ತಾರೀಕಿಗೆ ನಡೆಯುವ ಲೋಕಸಭಾ ಚುನಾವಣೆಗೆ ನಡೆಸಿರುವ ಸಿದ್ಧತೆಗಳ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಅವರು, ಚುನಾವಣೆಗೆ 72 ಗಂಟೆ ಹಾಗೂ 48 ಮೊದಲು ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿಸಿದರು.

ಚುನಾವಣೆಯ 72 ಗಂಟೆಗಳ ಮೊದಲು ಹೀಗಿರಬೇಕು-
72 ಗಂಟೆಗೆ ಮೊದಲು ಅಂದ್ರೆ ಹದಿನೈದನೇ ತಾರೀಕಿನಂದು ಎಲ್ಲಾ ಅಭ್ಯರ್ಥಿಗಳು ತಮ್ಮ ಚುನಾವಣೆ ಖರ್ಚಿನ ವಿವರವನ್ನು ಒಪ್ಪಿಸಲು ಕೊನೇ ದಿನವಾಗಿರುತ್ತದೆ. ಅಲ್ಲದೆ ಫ್ಲೈಯಿಂಗ್ ಸ್ಕ್ಯಾಡ್ ಗಳನ್ನು ಹೆಚ್ಚು ನಿಯೋಜನೆ ಮಾಡಲಾಗುತ್ತದೆ. ಈ ದಿನಗಳಲ್ಲಿ ಆಮಿಷ ಒಡ್ಡಿದವರಿಗೂ, ಅದನ್ನು ತೆಗೆದುಕೊಂಡವರ ಮೇಲೂ ಎಫ್ ಐ ಆರ್ ದಾಖಲಾಗಿಸಲಾಗುತ್ತದೆ ಎಂದರು. ಅಲ್ಲದೆ
ಯಾವುದೇ ಸಭೆ- ಸಮಾರಂಭ ನಡೆಸುವವರ ಮೇಲೂ ನಿಗಾ ಇಡಲಾಗ್ತಿದೆ. ಕಲ್ಯಾಣ ಮಂಟಪಗಳು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

48 ಗಂಟೆಗಳ ಮೊದಲು ಚುನಾವಣಾಧಿಕಾರಿಗಳ ಕೆಲಸ-
ಕಡೇ 48 ದಿನಗಳು ಇರುವಾಗ 144 ಸೆಕ್ಷನ್ ಜಾರಿಯಾಗುತ್ತದೆ. ಆ ಸಮಯದಲ್ಲಿ ಐದು ಜನಕ್ಕಿಂತ ಹೆಚ್ಚು ಜನ ಒಟ್ಟು ಸೇರಬಾರದು. 48 ಗಂಟೆಗಳಲ್ಲಿ ಬೇರೆ ಮತದಾರರು, ನಾಯಕರು ಬೇರೆ ಕಡೆಯಿಂದ ಬೇರೆ ಕ್ಷೇತ್ರಕ್ಕೆ ಬಂದು ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳುವ ಹಾಗಿಲ್ಲ. ಲಾಡ್ಜ್, ಕಲ್ಯಾಣ ಮಂಟಪಗಳು, ಧಾರ್ಮಿಕ ಕೇಂದ್ರಗಳಲ್ಲೂ ಚೆಕಿಂಗ್ ನಡೆಯಲಿದೆ. ಡ್ರೈ ಡೇ ಎಂದು ಘೋಷಿಸಲಾಗುತ್ತದೆ. ಮದ್ಯ ಮಾರಾಟವಿಲ್ಲ. ಧ್ವನಿವರ್ಧಕ ಬಳಸುವ ಹಾಗಿಲ್ಲ. ಮಾಧ್ಯಮಗಳೂ ಚುನಾವಣಾ ರಿಸಲ್ಟ್ ಗಳನ್ನು ಘೋಷಿಸೋ ಹಾಗಿಲ್ಲ ಎಂದರು.

ಚುನಾವಣಾ ದಿನದಂದು, ಮತದಾರರು ಮತಗಟ್ಟೆಗಳಿಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗೋ ಹಾಗಿಲ್ಲ. ಚುನಾವಣಾ ಸಿಬ್ಬಂದಿಗಳಿಗೆ ಮಾತ್ರ ಫೋಮ್ ಬಳಕೆಗೆ ಅನುಮತಿ ಇರುತ್ತದೆ. ಇನ್ನು ಒಬ್ಬ ಅಭ್ಯರ್ಥಿಗೆ ಅನುಮತಿ ಪಡೆದ ಒಟ್ಟು ಹತ್ತು ವಾಹನಗಳನ್ನು ಬಳಸಲು ಅನುಮತಿ ನೀಡಲಾಗ್ತದೆ. ಮತಗಟ್ಟೆಯ ನೂರು ಮೀಟರ್ ಒಳಗೆ ಯಾವುದೇ ಪಕ್ಷ ಚಿಹ್ನೆಗಳನ್ನು ಪ್ರದರ್ಶಿಸೋ ಹಾಗಿಲ್ಲ.
ಆದ್ರೆ ಅದರ ಹೊರಗೆ ಒಂದು ಟೇಬಲ್ ಹಾಕಿ ಇಬ್ಬರು ಕುಳಿತುಕೊಳ್ಳಬಹುದು. ಚುನಾವಣೆ ದಿನ ಎನ್ ಸಿಸಿ, ಸ್ಕೌಟ್-ಗೈಡ್ಸ್, ಎನ್ ಎಸ್ ಎಸ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗ್ತದೆ ಎಂದರು.

ಇನ್ನು ಇವಿಎಮ್ ಮೆಷಿನ್ ಹಾಗೂ ವಿವಿ ಪ್ಯಾಟ್ ಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂ ಗಳನ್ನು ಇಪ್ಪತ್ತೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಾಡಲಾಗಿದೆ. ಇಲ್ಲಿ ಪೊಲೀಸರು, ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 17 ನೇ ತಾರೀಕು ಇವಿಎಮ್ ಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿದ್ದು,, 18 ನೇ ತಾರೀಕು ರಾತ್ರಿ ಎಲೆಕ್ಷನ್ ಕೌಂಟಿಂಗ್ ಸೆಂಟರ್ ಗೆ ತೆಗೆದುಕೊಂಡು ಹೋಗಿ ಮೇ 23 ರ ವರೆಗೂ, ಮೂರು ಸುತ್ತಿನ ಭದ್ರತೆ ನೀಡಲಾಗ್ತದೆ ಎಂದರು.
ಇನ್ನು ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ನಾಲ್ವರು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಗಳಿದ್ದು ನಿಯಮಗಳ ಪ್ರಕಾರ ಅವುಗಳ ಬಗ್ಗೆ ಜಾಹಿರಾತು ನೀಡಬೇಕು. ಆದರೆ ಪ್ರಕಾಶ್ ರಾಜ್ ಬಿಟ್ಟರೆ ಸ್ವತಂತ್ರ ಅಭ್ಯರ್ಥಿಗಳಾದ ಕೆವಿ ಜಗದೀಶ್ ಕುಮಾರ್, ಹನುಮೇಗೌಡ, ಕೊಲ್ಲೂರ ಮಂಜುನಾಥ್ ನಾಯಕ ಇವರೆಲ್ಲರಿಗೂ ನೊಟೀಸು ನೀಡಲಾಗಿದೆ. ಚುನಾವಣೆಗೆ ಮೊದಲೇ ಜಾಹಿರಾತು ನೀಡಬೇಕು ಎಂದರು.
ನಿನ್ನೆಯವರೆಗೆ ಶೇಕಡಾ 78 ರಷ್ಟು ಓಟರ್ ಸ್ಲಿಪ್ ಗಳು ಹಂಚಿಕೆ ಮಾಡಲಾಗಿದೆ. ಹೊಸ ಎಪಿಕ್ ಕಾರ್ಡ್ ಗಳನ್ನು ನೀಡಲಾಗಿದೆ. 8514 ಬೂತ್ ಗಳಲ್ಲಿ 18 ನೇ ತಾರೀಕು ಮತದಾನ ನಡೆಸಲು 45 ಸಾವಿರ ಸಿಬ್ಬಂದಿಗಳಿಗೆ ತರಬೇತಿಯೂ ನೀಡಲಾಗಿದೆ. ತರಬೇತಿಗೆ ಹಾಜರಾಗದ ಸಿಬ್ಬಂದಿಗಳಿಗೆ ನೋಟೀಸು ಕೊಟ್ಟು ಕ್ರಿಮಿನಲ್ ಕೇಸ್ ಬುಕ್ ಮಾಡಲು ಆದೇಶಿಸಲಾಗಿದೆ. ನಿನ್ನೆಯಿಂದ ನಾಲ್ಕು ಸಾವಿರ ಸಿಬ್ಬಂದಿಗಳಿಗೆ ಹೊಸ ಅಪಾಯಿಂಡ್ಮೆಂಟ್ ಪತ್ರಗಳನ್ನು ನೀಡಲಾಗಿದೆ. 1234 ಮೈಕ್ರೋ ಅಬ್ಸರ್ವರ್ಸ್ ಗೂ ಟ್ರೈನಿಂಗ್ ನೀಡಲಾಗಿದೆ ಎಂದರು.

ಸೌಮ್ಯಶ್ರೀ
KN_BNG_01_13_election_PC_script_sowmya_7202707
Body:..Conclusion:...

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.