ಬೆಂಗಳೂರು: ಇಂದಿನಿಂದ 3ನೇ ಹಂತದ ಕೋವಿಡ್ ವ್ಯಾಕ್ಸಿನ್ ವಿತರಣೆ ಆರಂಭವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 60 ವರ್ಷ ಮೇಲ್ಪಟ್ಟ 1576 ಜನರಿಗೆ ಹಾಗೂ 45 ರಿಂದ 60 ವರ್ಷ ವಯಸ್ಸಿನ ಅನಾರೋಗ್ಯ ಪೀಡಿತ 374 ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದ್ದು, ಈವರೆಗೆ ಒಟ್ಟು 8,24,202 ಜನರಿಗೆ ಲಸಿಕೆ ನೀಡಿದಂತಾಗಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಹಿರಿಯ ನಾಗರಿಕರು ವ್ಯಾಕ್ಸಿನ್ ಪಡೆದಿದ್ದು, ಒಟ್ಟು 938 ಮಂದಿ 45 ರಿಂದ 60 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದಿದ್ದಾರೆ. ಒಟ್ಟು 23 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡುವ ಯೋಜನೆ ಕೈಗೊಳ್ಳಲಾಗಿದ್ದು, ಇಂದು 17 ಕಡೆಗಳಲ್ಲಿ ಲಸಿಕೆ ನೀಡಲಾಗಿದೆ.
ಓದಿ: ಒಂದು ತಿಂಗಳವರೆಗೆ ವಿಧಾನಸೌಧ ಸುತ್ತ ನಿಷೇಧಾಜ್ಞೆ ಜಾರಿ..!
ಬೊಮ್ಮನಹಳ್ಳಿಯಲ್ಲಿ 75, ದಾಸರಹಳ್ಳಿಯಲ್ಲಿ 0, ಪೂರ್ವ ವಲಯದಲ್ಲಿ 287, ಮಹದೇವಪುರ 0, ರಾ.ರಾ.ನಗರ 18, ದಕ್ಷಿಣ 181, ಪಶ್ಚಿಮ 248, ಯಲಹಂಕದಲ್ಲಿ 129 ಮಂದಿ ಲಸಿಕೆ ಪಡೆದಿದ್ದಾರೆ.