ETV Bharat / state

ಅನರ್ಹ ಶಾಸಕನಿಗೆ ಟಿಕೆಟ್​ ವಿಚಾರ: ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ? - Disqualified mla bypoll ticket matter,

ಅನರ್ಹ ಶಾಸಕ ಮುನಿರತ್ನಗೆ ಟಿಕೆಟ್ ನೀಡುವ ವಿಚಾರ ಸಂಬಂಧ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ ಎಂದು ಹೇಳಲಾಗ್ತಿದೆ.

ಕೃಪೆ: Twitter
author img

By

Published : Oct 22, 2019, 2:35 PM IST

ಬೆಂಗಳೂರು: ಉಪ‌ ಚುನಾವಣೆಯಲ್ಲಿ ಅನರ್ಹ ಶಾಸಕ ಮುನಿರತ್ನಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ವರ್ಸಸ್​ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬಣ ಪರಸ್ಪರ ಪೈಪೋಟಿಗಿಳಿದಿದ್ದು, ಬಿಜೆಪಿಯಲ್ಲಿ ಭಿನ್ನಮತ‌ ಸ್ಫೋಟಗೊಳ್ಳುವ ಸಾಧ್ಯತೆ ಕಂಡುಬಂದಿದೆ ಎಂದು ಹೇಳಲಾಗ್ತಿದೆ.

ಡಿಸೆಂಬರ್ 5 ರಂದು ಅನರ್ಹ ಶಾಸಕರ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ರಾಜರಾಜೇಶ್ವರಿ ನಗರ ಕ್ಷೇತ್ರದ ಟಿಕೆಟ್​ಗೆ ಬಿಜೆಪಿಯಲ್ಲಿ ಭಾರಿ ಪೈಪೋಟಿ ಆರಂಭವಾಗಿದೆ. ಅನರ್ಹ ಶಾಸಕ ಮುನಿರತ್ನ ಬೆನ್ನಿಗೆ ಸಿಎಂ ಬಿಎಸ್​ವೈ ನಿಂತಿದ್ದಾರೆ. ಕ್ಷೇತ್ರದಲ್ಲಿ ತುಳಸಿ ಮುನಿರಾಜು ಬಂಡಾಯ ಎದ್ದಿರುವ ಹಿನ್ನೆಲೆ ತಮ್ಮ ನಿವಾಸಕ್ಕೆ ಅವರನ್ನು ಕರೆಸಿಕೊಂಡಿದ್ದ ಸಿಎಂ, ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಆದರೆ ಸಿಎಂ ಮಾತನ್ನು ಕೇಳದ ತುಳಸಿ ಮುನಿರಾಜುಗೌಡ ಟಿಕೆಟ್​ಗಾಗಿ ಪಟ್ಟು ಮುಂದುವರೆಸಿದ್ದಾರೆ.

ತುಳಸಿ ಮುನಿರಾಜು ಬೆನ್ನಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ನಿಂತಿದ್ದು, ಮೂಲ ಬಿಜೆಪಿಗರಿಗೆ ಟಿಕೆಟ್ ಎನ್ನುವ ಮಂತ್ರ ಜಪಿಸುತ್ತಿದ್ದಾರೆ. ಹೀಗಾಗಿ ಮುನಿರತ್ನ ಪ್ರಕರಣದಲ್ಲಿ ಬಿ.ಎಲ್. ಸಂತೋಷ್ ಮತ್ತು ಸಿಎಂ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅನರ್ಹರಿಗೆ ಟಿಕೆಟ್ ಭರವಸೆ ನೀಡಿದ್ದರಿಂದ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಅವರು ರಾಜೀನಾಮೆ ನೀಡಿರುವುದರಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಆದರೆ ಈಗ ಅವರಿಗೆ ಟಿಕೆಟ್ ನೀಡಲ್ಲ ಎನ್ನುವುದು ಸರಿ ಅಲ್ಲ ಎನ್ನುವ ವಾದ ಸಿಎಂ ಆಪ್ತ ಬಳಗದ್ದಾಗಿದೆ.

ಈ ಎಲ್ಲಾ ಬೆಳವಣಿಗೆ ಮಧ್ಯೆಯೂ ಮುನಿರತ್ನ ಪರ ನಿಂತಿರುವ ಸಿಎಂ ಮತ್ತು ಸಿಎಂ ಆಪ್ತ ಬಳಗ ತುಳಸಿ ಮುನಿರಾಜು ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಅಭಯ ನೀಡಿದೆ ಎಂದು ತಿಳಿದುಬಂದಿದೆ. ಮುನಿರತ್ನಗೆ ಟಿಕೆಟ್ ಕೊಡಲೇಬೇಕಾದ ಅನಿವಾರ್ಯತೆ ಸಿಎಂಗಿದ್ದರೆ ಸ್ಪರ್ಧೆ ಮಾಡಲೇಬೇಕು ಎನ್ನುವ ಹಠ ತುಳಸಿ ಮುನಿರಾಜುಗೌಡರದ್ದಾಗಿದೆ. ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಬಂಡಾಯವಾಗಿ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದು, ಮುನಿರತ್ನ ವಿಷಯ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Intro:

ಬೆಂಗಳೂರು: ಉಪ‌ ಚುನಾವಣೆಯಲ್ಲಿ ಅನರ್ಹ ಶಾಸಕ ಮುನಿರತ್ನಗೆ ಟಿಕೆಟ್ ನೀಡುವ ವಿಚಾರ ಸಂಬಂಧ ಸಿಎಂ ವರ್ಸಸ್ ಬಿ.ಎಲ್ ಸಂತೋಷ್ ಬಣ ಪರಸ್ಪರ ಪೈಪೋಟಿಗಿಳಿದಿದ್ದು,ಬಿಜೆಪಿಯಲ್ಲಿ ಭಿನ್ನಮತ‌ ಸ್ಪೋಟವಾಗುವ ಸಾಧ್ಯತೆ ಕಂಡುಬಂದಿದೆ.

ಡಿಸೆಂಬರ್ 5 ರಂದು ಅನರ್ಹ ಶಾಸಕರ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ರಾಜರಾಜೇಶ್ವರಿ ನಗರ ಕ್ಷೇತ್ರದ ಟಿಕೆ್ ಗೆ ಬಿಜೆಪಿಯಲ್ಲಿ ಭಾರೀ ಪೈಪೋಟಿ ಆರಂಭಗೊಂಡಿದೆ.ಅನರ್ಹ ಶಾಸಕ ಮುನಿರತ್ನ ಬೆನ್ನಿಗೆ ಬಲವಾಗಿ ನಿಂತಿರುವ ಸಿಎಂ ಬಿಎಸ್ ವೈ, ಕ್ಷೇತ್ರದಲ್ಲಿ ತುಳಸಿ ಮುನಿರಾಜು ಬಂಡಾಯ ಹಿನ್ನಲೆಯಲ್ಲಿ ತಮ್ಮ ನಿವಾಸಕ್ಕೆ ಅವರನ್ನು ಕರೆಸಿಕೊಂಡಿದ್ದ ಸಿಎಂ, ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಆದರೆ ಸಿಎಂ ಮಾತನ್ನು ಕೇಳದ ತುಳಸಿ ಮುನಿರಾಜುಗೌಡ ಟಿಕೆಟ್ ಗಾಗಿ ಪಟ್ಟು ಮುಂದುವರೆಸಿದ್ದಾರೆ.

ತುಳಸಿ ಮುನಿರಾಜು ಬೆನ್ನಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ನಿಂತಿದ್ದು ನಿಷ್ಟರಿಗೆ,ಮೂಲ ಬಿಜೆಪಿಗರಿಗೆ ಟಿಕೆಟ್ ಎನ್ನುವ ಮಂತ್ರ ಜಪಿಸುತ್ತಿದ್ದಾರೆ ಹೀಗಾಗಿ ಮುನಿರತ್ನ ಪ್ರಕರಣದಲ್ಲಿ ಬಿ.ಎಲ್ ಸಂತೋಷ್ ಮತ್ತು ಸಿಎಂ ನಡುವೆ ಮುಸುಕಿನ ಗುದ್ದಾಟ ಆರಂಭಗೊಂಡಿದೆ.

ಅನರ್ಹರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರಿಂದ ಅವರು ರಾಜೀನಾಮೆ ನೀಡಿದ್ದಾರೆ,ಅವರು ರಾಜೀನಾಮೆ ನೀಡಿರುವುದಕ್ಕೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ ಆದರೆ ಈಗ ಅವರಿಗೆ ಟಿಕೆಟ್ ನೀಡಲ್ಲ ಎನ್ನುವುದು ಸರಿ ಅಲ್ಲ ಎನ್ನುವ ವಾದ ಸಿಎಂ ಆಪ್ತ ಬಳಗದ್ದಾಗಿದೆ.

ಈ ಎಲ್ಲಾ ಬೆಳವಣಿಗೆ ಮಧ್ಯೆಯೂ ಮುನಿರತ್ನ ಪರ ನಿಂತ ಸಿಎಂ ಮತ್ತು ಸಿಎಂ ಆಪ್ತ ಬಳಗ ತುಳಸಿ ಮುನಿರಾಜು ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಅಭಯ ನೀಡಿದೆ ಎಂದು ತಿಳಿದುಬಂದಿದೆ. ಮುನಿರತ್ನಗೆ ಟಿಕೆಟ್ ಕೊಡಲೇಬೇಕಾದ ಅನಿವಾರ್ಯತೆ ಸಿಎಂಗಿದ್ದರೆ ಸ್ಪರ್ಧೆ ಮಾಡಲೇಬೇಕು ಎನದನುವ ಹಠ ತುಳಸಿ ಮುನಿರಾಜುಗೌಡರದ್ದಾಗಿದೆ ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಬಂಡಾಯವಾಗಿ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದು ಮುನಿರತ್ನ ವಿಷಯ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.