ETV Bharat / state

ಬಿಎಸ್​ವೈ ಭೇಟಿ ಮಾಡಿದ ಬೋಪಯ್ಯ: ರಾಜೀನಾಮೆ ಪತ್ರಗಳ ಕ್ರಮಬದ್ಧತೆ ಕುರಿತು ಚರ್ಚೆ?

ಮುಂಬೈನಿಂದ ಹಿಂದಿರುಗಿದ ಮಾಜಿ ಸ್ಪೀಕರ್ ಬೋಪಯ್ಯ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳ ಕ್ರಮಬದ್ಧತೆ ಸಂಬಂಧ ಮಾತುಕತೆ ನಡೆಸಿದರು.

ಮಾಜಿ ಸಿಎಂ ಯಡಿಯೂರಪ್ಪ
author img

By

Published : Jul 11, 2019, 12:37 PM IST

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳ ಕ್ರಮಬದ್ಧತೆ ಸಂಬಂಧ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಮಾಲೋಚನೆ ನಡೆಸಿದರು.

ಮುಂಬೈನಿಂದ ಹಿಂದಿರುಗಿದ ಮಾಜಿ ಸ್ಪೀಕರ್ ಬೋಪಯ್ಯ ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಗೆ ಆಗಮಿಸಿದರು. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

9 ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ಹೇಳಿಕೆ ನೀಡಿದ್ದು ಈ ಹಿನ್ನೆಲೆಯಲ್ಲಿ ಶಾಸಕರು ನೀಡಿದ್ದ ರಾಜೀನಾಮೆ ಪತ್ರಗಳ ಪ್ರತಿಗಳನ್ನು ಪರಿಶೀಲನೆ ಮಾಡಿ ಹೊಸದಾಗಿ ರಾಜೀನಾಮೆ ಪತ್ರಗಳನ್ನು ಸಿದ್ದಪಡಿಸಲು ಬೋಪಯ್ಯ, ಶಾಸಕರಿಗೆ ಅಗತ್ಯ ನೆರವು ನೀಡಿದ್ದು, ಈ ಎಲ್ಲಾ ಮಾಹಿತಿಯನ್ನು ಯಡಿಯೂರಪ್ಪ ಅವರಿಗೆ ನೀಡಿದರು.

ಶಾಸಕರು ಖುದ್ದಾಗಿ ಬಂದು ಮತ್ತೊಮ್ಮೆ ರಾಜೀನಾಮೆ ಪತ್ರ ನೀಡುವ ಬದಲು ಫ್ಯಾಕ್ಸ್​ ಮೂಲಕ ಸ್ಪೀಕರ್ ಕಚೇರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಎದುರು ಖುದ್ದು ಹಾಜರಾಗುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅವರು ನೇರವಾಗಿಯೇ ಮತ್ತೊಮ್ಮೆ ರಾಜೀನಾಮೆ ಪತ್ರ ಸಲ್ಲಿಸಲು ಸೂಚನೆ ನೀಡಿರುವುದಾಗಿ ಯಡಿಯೂರಪ್ಪ ಅವರಿಗೆ ಬೋಪಯ್ಯ ಮಾಹಿತಿ ನೀಡಿದರು.

ಇಂದು ಸಂಜೆ ಸ್ಪೀಕರ್ ತೀರ್ಮಾನ ಪ್ರಕಟಿಸಲೇಬೇಕಿರುವ ಕಾರಣ ರಮೇಶ್ ಕುಮಾರ್ ನಿರ್ಣಯ ನೋಡಿ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು. ಸುಪ್ರೀಂಕೋರ್ಟ್ ನಾಳೆ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಿರುವ ಹಿನ್ನೆಲೆಯಲ್ಲಿ ಶಾಸಕರ ರಾಜೀನಾಮೆ ಅಂಗೀಕರಿಸಲಿದ್ದಾರೆ. ಆದರೂ ಅವರ ನಡೆ ಏನು ಎಂದು ನೋಡಿ ನಾವು ಮತ್ತೆ ನಿರ್ಧಾರ ಕೈಗೊಳ್ಳೋಣ ಎಂದು ಯಡಿಯೂರಪ್ಪ ಅವರಿಗೆ ಮಾಜಿ ಸ್ಪೀಕರ್ ಬೋಪಯ್ಯ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Intro:

ಬೆಂಗಳೂರು: ಅತೃಪ್ತ ಶಾಸಕರ ರಾಜಿನಾಮೆ ಪತ್ರಗಳ ಕ್ರಮಬದ್ದತೆ ಸಂಬಂಧ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮಾಲೋಚನೆ ನಡೆಸಿದರು.

ಮುಂಬೈನಿಂದ ಹಿಂದಿರುಗಿದ ಮಾಜಿ ಸ್ಪೀಕರ್ ಬೋಪಯ್ಯ ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಗೆ ಆಗಮಿಸಿದರು.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

9 ಶಾಸಕರ ರಾಜಿನಾಮೆ ಪತ್ರ ಕ್ರಮಬದ್ದವಾಗಿಲ್ಲ ಎಂದು ಸ್ಪೀಕರ್ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಶಾಸಕರು ನೀಡಿದ್ದ ರಾಜಿನಾಮೆ ಪತ್ರಗಳ ಪ್ರತಿಗಳನ್ನು ಪರಿಶೀಲನೆ ಮಾಡಿ ಹೊಸದಾಗಿ ರಾಜಿನಾಮೆ ಪತ್ರಗಳನ್ನು ಸಿದ್ದಪಡಿಸಲು ಬೋಪಯ್ಯ ಶಾಸಕರಿಗೆ ಅಗತ್ಯ ನೆರವು ನೀಡಿದ್ದು ಈ ಎಲ್ಲಾ ಮಾಹಿತಿಯನ್ನು ಯಡಿಯೂರಪ್ಪ ಅವರಿಗೆ ನೀಡಿದರು.

ಶಾಸಕರು ಖುದ್ದಾಗಿ ಬಂದು ಮತ್ತೊಮ್ಮೆ ರಾಜಿನಾಮೆ ಪತ್ರ ನೀಡುವ ಬದಲು ಫ್ಯಾಕ್ಸ್ ಮೂಲಕ ಸ್ಪೀಕರ್ ಕಚೇರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು ಆದರೆ ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಎದುರು ಖುದ್ದು ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಅವರು ನೇರವಾಗಿಯೇ ಮತ್ತೊಮ್ಮೆ ರಾಜಿನಾಮೆ ಪತ್ರ ಸಲ್ಲಿಸಲು ಸೂಚನೆ ನೀಡಿರುವುದಾಗಿ ಯಡಿಯೂರಪ್ಪ ಅವರಿಗೆ ಬೋಪಯ್ಯ ಮಾಹಿತಿ ನೀಡಿದರು.

ಇಂದು ಸಂಜೆ ಸ್ಪೀಕರ್ ತೀರ್ಮಾನ ಪ್ರಕಟಿಸಲೇಬೇಕಿರುವ ಕಾರಣ ರಮೇಶ್ ಕುಮಾರ್ ನಿರ್ಣಯ ನೋಡಿ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು,ಸುಪ್ರೀಂ ಕೋರ್ಟ್ ನಾಳೆ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಿರುವ ಹಿನ್ನಲೆಯಲ್ಲಿ ಶಾಸಕರ ರಾಜಿನಾಮೆ ಅಂಗೀಕರಿಸಲಿದ್ದಾರೆ ಆದರೂ ಅವರ ನಡೆ ಏನು ಎಂದು ನೋಡಿ ನಾವು ಮತ್ತೆ ನಿರ್ಧಾರ ಕೈಗೊಳ್ಳೋಣ ಎಂದು ಯಡಿಯೂರಪ್ಪ ಅವರಿಗೆ ಮಾಜಿ ಸ್ಪೀಕರ್ ಬೋಪಯ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Body:.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.