ಬೆಂಗಳೂರು: ಬಿಬಿಎಂಪಿಯ ಎಲ್ಲಾ 198 ವಾರ್ಡ್ಗಳಲ್ಲಿ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಕೋಶ ಆರಂಭಿಸಲಾಗಿದೆ. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹಾಗೂ ನಿರ್ವಹಣೆಯ ಹೊಣೆ ಈ ವಿಪತ್ತು ನಿರ್ವಹಣಾ ಕೋಶ ಅಥವಾ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಸೆಲ್ಗಳದ್ದಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ಬಡವರಿಗೆ ಹಾಲು, ಆಹಾರ ಆಶ್ರಯ, ಒದಗಿಸುವುದು ಇದರ ಜವಾಬ್ದಾರಿಯಾಗಿರಲಿದೆ. ಆಶ್ರಯ ಇಲ್ಲದ ಬಡ ಜನರನ್ನು ಪಾಲಿಕೆ ನಿರ್ಮಿಸಿರುವ ನೂರು ಸೂರುಗಳಿಗೆ ಸ್ಥಳಾಂತರಿಸಲು ಮಾರ್ಷಲ್ಗಳ ಗಮನಕ್ಕೆ ತರಬೇಕೆಂದು ತಿಳಿಸಿದೆ.
ಇನ್ನು ವಲಸೆ ಕಾರ್ಮಿಕರಿಗೆ ಮನೆ ಮಾಲೀಕರು ಒಂದು ತಿಂಗಳ ಬಾಡಿಗೆ ಕೊಡಲು ಒತ್ತಾಯಿಸುವಂತಿಲ್ಲ. ಈ ರೀತಿ ನಡೆದರೆ ಸ್ಥಳೀಯ ಪೊಲೀಸರ ಸಹಾಯದಿಂದ ವಲಸಿಗರಿಗೆ ರಕ್ಷಣೆ ಕೊಡಲು ಕ್ರಮ ಕೈಗೊಳ್ಳಬಹುದು. ಪ್ರತೀ ವಲಯದ ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರು ಇದರ ಮೇಲುಸ್ತುವಾರಿ ನೋಡಿಕೊಳ್ಳಬೇಕೆಂದು ಬಿಬಿಎಂಪಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.