ETV Bharat / state

ಮೊನಾಲಿಸಾ ಡೈರೆಕ್ಟರ್​ಗೆ ಸಿಸಿಬಿ ಟೈಂ ಫಿಕ್ಸ್: ನಟ-ನಟಿಯರಿಗೆ ಶುರುವಾಗಿದೆ ನಡುಕ - ಸ್ಯಾಂಡಲ್ ವುಡ್​​ ಡ್ರಗ್ ಮಾಫಿಯಾ

ಡ್ರಗ್ಸ್​​ ದಂಧೆಯ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಿರುವ ಕಾರಣ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು 11 ಗಂಟೆ‌ ಸುಮಾರಿಗೆ ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ.

CCB inquiry
ಸಿಸಿಬಿ ವಿಚಾರಣೆಗೆ ಹಾಜರಾಗಲಿರುವ ಇಂದ್ರಜಿತ್ ಲಂಕೇಶ್
author img

By

Published : Aug 31, 2020, 8:49 AM IST

ಬೆಂಗಳೂರು: ಸ್ಯಾಂಡಲ್​​ವುಡ್​​ನಲ್ಲಿ ಡ್ರಗ್ಸ್​​ ಘಾಟು ಇರುವ ಬಗ್ಗೆ ಮಾತುಗಳು ಕೇಳಿ ಬಂದಿದ್ದು, ನಶಾ ಲೋಕದಲ್ಲಿ ತೇಲಾಡುವ ಕೆಲ ಪ್ರತಿಷ್ಠಿತ ನಟ, ನಟಿ, ನಿರ್ದೇಶಕರು, ಸಂಗೀತಗಾರರಿಗೆ ಒಂದೆಡೆ ನಡುಕ ಶುರುವಾಗಿದೆ. ಮತ್ತೊಂದೆಡೆ ಮೊನಾಲಿಸಾ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ತನಗೆ ಗೊತ್ತಿರುವವರ ಹೆಸರು ಹೇಳಲು ನಾನು ರೆಡಿ ಇದ್ದೇನೆ ಎಂದಿದ್ದಾರೆ.

ಹೀಗಾಗಿ ಇಂದು ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ಹಾಜರಾಗಲು ಸಿಸಿಬಿ ಟೈಂ ಫಿಕ್ಸ್ ಮಾಡಿದೆ. ಡ್ರಗ್ಸ್​ ದಂಧೆಯ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಿದ ಕಾರಣ ಇಂದು 11 ಗಂಟೆ‌ ಸುಮಾರಿಗೆ ವಿಚಾರಣೆಗೆ ಹಾಜರಾಗಿ ತಮಗೆ ಗೊತ್ತಿರುವ ಮಾಹಿತಿ ನೀಡಲಿದ್ದಾರೆ. ಸಿಸಿಬಿ, ಡಿಸಿಪಿ ರವಿ ನೇತೃತ್ವದಲ್ಲಿನ ತಂಡ ಈಗಾಗಲೇ ಕೆಲ ಪ್ರಶ್ನೆಗಳನ್ನು ತಯಾರಿ ಮಾಡಿ ಲಂಕೇಶ್ ಅವರಿಂದ ಮಾಹಿತಿ ಕಲೆಹಾಕಲಿದೆ. ಇಂದ್ರಜಿತ್ ಲಂಕೇಶ್ ಡ್ರಗ್ಸ್ ದಂಧೆ ಬಗ್ಗೆ ತಮ್ಮ ಬಳಿ ಇರುವ ಮಾಹಿತಿ ಹಂಚಿಕೊಂಡರೆ ಹಲವಾರು ನಟ-ನಟಿಯರ ಹೆಸರು ಬಹಿರಂಗವಾಗಲಿದೆ ಎನ್ನಲಾಗುತ್ತಿದೆ. ಪ್ರಕರಣ ಗಂಭೀರವಾದ ಕಾರಣ ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಸುಮೋಟೋ ಪ್ರಕರಣ ದಾಖಲು ಮಾಡಿ ಬಹುತೇಕ ಮಂದಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಸದ್ಯ ಇಂದು ಮೊನಾಲಿಸಾ ಡೈರೆಕ್ಟರ್ ಇಂದ್ರಜಿತ್​ಗೆ ಸಿಸಿಬಿ ಪೊಲೀಸರು ಸ್ಯಾಂಡಲ್​​ವುಡ್​​ನಲ್ಲಿ ಯಾವಾಗಿನಿಂದ ಡ್ರಗ್ಸ್ ದಂಧೆ ನಡೆಯುತ್ತಿದೆ? ಈ ದಂಧೆಯಲ್ಲಿ ಯಾರೆಲ್ಲಾ ನಟ, ನಟಿ, ನಿರ್ದೇಶಕರು ಭಾಗಿಯಾಗಿದ್ದಾರೆ.? ನಿಮ್ಮ ಬಳಿ ಯಾವೆಲ್ಲಾ ಸಾಕ್ಷಿಗಳಿವೆ.? ಹೇಗೆ ನಿಮಗೆ ಗೊತ್ತು, ಅಕ್ರಮ ಡ್ರಗ್ಸ್ ಜಾಲದ ಬಗ್ಗೆ ಗೊತ್ತಿದ್ದರೂ ಯಾಕೆ ಇಷ್ಟು ದಿನ ತಾವು ಮಾಹಿತಿ ನೀಡಿಲ್ಲ?. ಅನಿಕಾ ನಿಮಗೆನಾದರು ಪರಿಚಯನಾ?, ಡ್ರಗ್ಸ್​ ಸಂಬಂಧ ವಿಡಿಯೋ ಅಥವಾ ಫೋಟೋ ಇವೆಯೇ ಎನ್ನುವ ಕುರಿತು ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಡ್ರಗ್ಸ್​​ ಪ್ರಕರಣದಲ್ಲಿ ಇಂದ್ರಜಿತ್ ಅವರನ್ನ ಸಾಕ್ಷಿಯನ್ನಾಗಿ ಪೊಲೀಸರು ಪರಿಗಣಿಸಿ ಇಂದ್ರಜಿತ್ ಅವರಿಂದ ದೂರು ಪಡೆದುಕೊಳ್ಳುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.