ETV Bharat / state

ನವೆಂಬರ್ 3 ರಿಂದ ಕುವೈತ್ ಮತ್ತು ಬೆಂಗಳೂರು ನಡುವೆ ನೇರ ವಿಮಾನ ಹಾರಾಟ

author img

By

Published : Nov 2, 2022, 6:22 PM IST

ನವೆಂಬರ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುವೈತ್​ನಿಂದ ಬರುವ ಜಜೀರಾ ಏರ್​ ಲೈನ್​​ ವಿಮಾನ ಲ್ಯಾಂಡ್​ ಆಗಲಿದೆ.

ಕುವೈತ್ ಮತ್ತು ಬೆಂಗಳೂರು ನಡುವೆ ನೇರ ವಿಮಾನ ಹಾರಾಟ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕುವೈತ್ ಮತ್ತು ಬೆಂಗಳೂರು ನಡುವೆ ನೇರ ವಿಮಾನ ಹಾರಾಟವನ್ನು ಕುವೈತ್ ಮೂಲದ ಜಜೀರಾ ಏರ್ ಲೈನ್ಸ್​ ಆರಂಭಿಸಿದೆ. ಮೊದಲ ವಿಮಾನ ನವೆಂಬರ್ 3ರ ಗುರುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ.

ಕುವೈತ್ ಮೂಲದ ಕಡಿಮೆ ದರದ ಜಜೀರಾ ಏರ್​ಲೈನ್ಸ್​ ಕುವೈತ್ ಮತ್ತು ಬೆಂಗಳೂರು ನಡುವೆ ನೇರ ವಿಮಾನಯಾನ ಆರಂಭಿಸಿದೆ. ವಾರದಲ್ಲಿ ಎರಡು ವಿಮಾನಗಳು ಕುವೈತ್ ಮತ್ತು ಬೆಂಗಳೂರು ನಡುವೆ ಹಾರಾಟ ನಡೆಸಲಿವೆ. ಶುಕ್ರವಾರ ಮತ್ತು ಭಾನುವಾರ ಬೆಂಗಳೂರಿನಿಂದ ಕುವೈತ್​ಗೆ ವಿಮಾನ ಪ್ರಯಾಣಿಸಲಿದೆ.

ಇದನ್ನೂ ಓದಿ: ವಿಜಯನಗರ ಏರ್​ಪೋರ್ಟ್​ನಿಂದ ಬೆಂಗಳೂರು ಹೈದರಾಬಾದ್​ಗೆ ವಿಮಾನಸೇವೆ ಆರಂಭ

ಗುರುವಾರ ಮತ್ತು ಶನಿವಾರ ಕುವೈತ್​ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಯಾನವಿದೆ. 2017 ರಲ್ಲಿ ಹೈದರಾಬಾದ್​ನಲ್ಲಿ ಜಜೀರಾ ಏರ್​ಲೈನ್ಸ್​ ವಿಮಾನಯಾನ ನಡೆಸಿದ್ದು, ಸದ್ಯ ಭಾರತದಲ್ಲಿ 8 ಸ್ಥಳಗಳಲ್ಲಿ ವಿಮಾನ ಕಾರ್ಯಾಚರಣೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.