ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದೂರುದಾರ ದೂರು ವಾಪಸ್ ಪಡೆದ ಬೆನ್ನಲ್ಲೇ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಹೇಳುವುದೇನು?
- ನಮ್ಮ ಕುಟಂಬವನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ
- ಪ್ರಕರಣದಲ್ಲಿ ಪಕ್ಷ ಮತ್ತು ಕುಟುಂಬಕ್ಕೆ ಮುಜುಗರ ತರಲು ಪ್ರಯತ್ನಿಸಲಾಗಿದೆ.
- ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿರುವ ಕಲ್ಲಹಳ್ಳಿಯವರನ್ನು ದಾರಿ ತಪ್ಪಿಸಿರಬಹುದು.
- ಆಕೆಯನ್ನು ಸಂತ್ರಸ್ತ ಮಹಿಳೆ ಎಂದು ಯಾರೂ ಕರೆಯಬೇಡಿ
- ಇದರಲ್ಲಿ ಮಹಿಳೆಯೇ ನಂ 1 ಆರೋಪಿ
- ಇದರ ಹಿಂದೆ ಬೇರೆ ಯಾರಿದ್ದಾರೆ ಎಂಬುದು ಬಹಿರಂಗವಾಗಲಿ
- ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ
- ಜಾರಕಿಹೊಳಿ ಕುಟುಂಬದ ತೇಜೋವಧೆಗೆ ಯತ್ನಿಸಿದ್ದಾರೆ
- ಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಈ ಹುನ್ನಾರ ಮಾಡಿದ್ದಾರೆ
- ಮಹಿಳೆಗೆ 50 ಲಕ್ಷ ರೂಪಾಯಿ ಕೊಟ್ಟು, ದುಬೈನಲ್ಲಿ ಕೆಲಸ ಆಮಿಷ
- 15 ಕೋಟಿ ರೂ ಖರ್ಚು ಮಾಡಿ 17 ಸರ್ವರ್ ಖರೀದಿಸಿದ್ದಾರೆ
- ರಷ್ಯಾದಲ್ಲಿ 3 ಗಂಟೆ ಮೊದಲೇ ವಿಡಿಯೋ ಅಪ್ಲೋಡ್ ಆಗಿದೆ
- ರಮೇಶ್ ಹೊರಬಂದು ದೂರು ನೀಡಲಿ
- ರಮೇಶ್ ದೂರು ಕೊಡದೇ ಇದ್ದರೆ ನಮಗೆ ಹೇಳಲಿ
- ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು
- ನಾಳೆ ನಾವು ಸದನಕ್ಕೆ ಹಾಜರಾಗುತ್ತೇವೆ
- ದಿನೇಶ್ ಕಲ್ಲಹಳ್ಳಿ ಕೇಸ್ ವಾಪಸ್ ಪಡೆಯುತ್ತಿದ್ದಾರೆ