ETV Bharat / state

ಕೇವಲ 105 ಮತಗಳ ಅಂತರದಿಂದ ಗೆಲುವು ಸಾಧಿಸಿದ ದಿನೇಶ್​ ಗುಂಡೂರಾವ್

ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿ ದಿನೇಶ್​​ ಗುಂಡೂರಾವ್ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ವಿರುದ್ಧ 105 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

author img

By

Published : May 13, 2023, 3:33 PM IST

dinesh-gundurao-won-by-a-margin-of-only-105-votes-in
ಕೇವಲ 105 ಮತಗಳ ಅಂತರದಿಂದ ಗೆಲುವು ಸಾಧಿಸಿದ ದಿನೇಶ್​ ಗುಂಡೂರಾವ್

ಬೆಂಗಳೂರು: ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿ ದಿನೇಶ್ ಗುಂಡೂರಾವ್ ಅವರು ಕೇವಲ 105 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಮರು ಮತ ಎಣಿಕೆಗೆ ಒಪ್ಪದ ಚುನಾವಣಾಧಿಕಾರಿಗಳು ದಿನೇಶ್ ಗುಂಡೂರಾವ್ ಗೆಲುವೆಂದು ಘೋಷಣೆ ಮಾಡಿದ್ದಾರೆ.

ಮೊದಲು 900 ಮತಗಳ ಅಂತರ ಎಂದು ಘೋಷಿಸಿದ್ದ ಚುನಾವಣಾ ಅಧಿಕಾರಿಗಳು. ಬಳಿಕ ಸಪ್ತಗಿರಿಗೌಡರಿಂದ ಪೋಸ್ಟಲ್ ವೋಟ್ ಹಾಗೂ ಇವಿಎಂಗಳನ್ನು ಸೇರಿ, ಮರು ಏಣಿಕೆಗೆ ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ನಂತರ ಚುನಾವಣಾಧಿಕಾರಿಗಳು ಸಪ್ತಗಿರಿಗೌಡ ಹಾಗೂ ದಿನೇಶ್ ಗುಂಡೂರಾವ್ ಇಬ್ಬರನ್ನು ಕರೆಸಿ ಮಾತುಕತೆ ನಡೆಸಿ, ನಿಯಮ ತಿಳಿಸಿದ ಅಧಿಕಾರಿಗಳು, ಅಸಿಂಧುವಾದ ಮತಗಳಿಂದ ಕಡಿಮೆ ಅಂತರದಿಂದ ಗೆಲುವು ಸಾಧಿಸಿದರೆ ಮಾತ್ರ ಮರು ಏಣಿಕೆಗೆ ಅವಕಾಶ, 76 ಅನರ್ಹ (ಇನ್ ವ್ಯಾಲಿಡ್ ವೋಟ್​​) ಮತಗಳು ಇವೆ ಇದನ್ನು ಸೇರಿಸಿದರು ಗೆಲುವು ಆಗಲ್ಲ, ಇದರಿಂದ ನಿಯಮ ಪ್ರಕಾರ ಮತ್ತೊಮ್ಮೆ ಮರು ಎಣಿಕೆ ಸಾಧ್ಯವಿಲ್ಲ ಎಂದು ಹೇಳಿ ಮರು ಮತ ಏಣಿಕೆ ತಿರಸ್ಕರಿಸಿ. 105 ಮತಗಳಿಂದ ದಿನೇಶ್ ಗುಂಡೂರಾವ್ ಗೆಲುವು ಎಂದು ಅಧಿಕಾರಿಗಳು ಘೋಷಣೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಮಾತನಾಡಿ, "ಮರು ಎಣಿಕೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ, 76 ಅನರ್ಹ ಅಂಚೆ ಮತಗಳು ಇವೆ. ಆದ್ದರಿಂದ ನಿಯಮಾನುಸಾರ ಮರು ಎಣಿಕೆ ಸಾಧ್ಯವಿಲ್ಲ ಎಂದು ಚುನಾವಣಾಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ನಿಯಮಗಳನ್ನ ನಾವು ಗೌರವಿಸಲೇಬೇಕು. ಇಷ್ಟು ದೊಡ್ಡಮಟ್ಟದಲ್ಲಿ ನನಗೆ ಮತ ನೀಡಿರುವ ಜನತೆಗೆ ನಾನು, ಕಾರ್ಯಕರ್ತರಿಗೆ ಧನ್ಯವಾದಗಳು. ಮಾಜಿ ಪ್ರಧಾನಿ ದಿವಂಗತ ಅಟಲ್ ಜಿ ಹೇಳಿರುವಂತೆ 'ನ ದೈನ್ಯಂ ನ ಪಲಾಯನಂ' ನಾನು ಪಲಾಯನ ಮಾಡುವವನಲ್ಲ, ಜನರ ಜೊತೆಯೇ ಇರುತ್ತೇನೆ. ಕ್ಷೇತ್ರದ ಜನತೆಗೆ ಏನೇ ಕಷ್ಟ ಕಾರ್ಪಣ್ಯಗಳಿದ್ದರು ಜತೆಯಲ್ಲಿದ್ದು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಕೆಟ್ಟ ಆಡಳಿತದ ವಿರುದ್ಧ ರೊಚ್ಚಿಗೆದ್ದು ಜನ ಮತ ಹಾಕಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

For All Latest Updates

TAGGED:

dinesh
ETV Bharat Logo

Copyright © 2024 Ushodaya Enterprises Pvt. Ltd., All Rights Reserved.