ETV Bharat / state

ವಿಮಾ ಕಂಪನಿಗಳು ರೈತರ ಪಿಎಂಎಫ್​ಬಿವೈ ಮೊತ್ತ ಉಳಿಸಿಕೊಂಡಿರುವುದು ವಿಪರ್ಯಾಸ: ದಿನೇಶ್ - ರೈತರಿಗೆ ವಿಮಾ ಕಂಪೆನಿಗಳಿಂದ ಹಣ ಬಂದಿಲ್ಲ ಎಂದು ದಿನೇಶ್​ ಗುಂಡೂರಾವ್​ ಆರೋಪ

ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ಪಿಎಂಎಫ್​ಬಿವೈ) ಯೋಜನೆಯಡಿ ರಾಜ್ಯದ 3.73 ಲಕ್ಷ ಫಲಾನುಭವಿಗಳಿಗೆ ವಿಮಾ ಕಂಪನಿಗಳು 427 ಕೋಟಿ ಹಣ ಬಾಕಿ ಉಳಿಸಿಕೊಂಡಿವೆ. ಕೃಷಿ ಸಚಿವರು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ತೆಗೆದುಕೊಳ್ಳಲಿ ಎಂದು ದಿನೇಶ್ ಗುಂಡೂರಾವ್ ಟ್ವೀಟ್​ ಮೂಲಕ ಒತ್ತಾಯಿಸಿದ್ದಾರೆ.

Dinesh gundurao tweet
ದಿನೇಶ್ ಗುಂಡೂರಾವ್ ಟ್ವೀಟ್
author img

By

Published : Oct 21, 2020, 12:52 PM IST

ಬೆಂಗಳೂರು: ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ (ಪಿಎಂಎಫ್​ಬಿವೈ) ಫಲಾನುಭವಿ ರೈತರಿಗೆ ಬರಬೇಕಾದ ಮೊತ್ತವನ್ನು ವಿಮಾ ಕಂಪನಿಗಳು ಉಳಿಸಿಕೊಂಡಿರುವುದು ವಿಪರ್ಯಾಸ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.

Dinesh gundurao tweet
ದಿನೇಶ್ ಗುಂಡೂರಾವ್ ಟ್ವೀಟ್

ರಾಜ್ಯದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ವಿಮಾ ಕಂಪನಿಗಳು ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಜ್ಯದ 3.73 ಲಕ್ಷ ಫಲಾನುಭವಿಗಳಿಗೆ ವಿಮಾ ಕಂಪನಿಗಳು 427 ಕೋಟಿ ಬಾಕಿ ಉಳಿಸಿಕೊಂಡಿರುವುದು ದುರದೃಷ್ಟಕರ ಎಂದು ಟ್ವೀಟ್​ ಮಾಡಿದ್ದಾರೆ.

Dinesh gundurao tweet
ದಿನೇಶ್ ಗುಂಡೂರಾವ್ ಟ್ವೀಟ್

ರೈತರಿಗೆ‌ ಕೃಷಿಯೇ ಬದುಕಿನ ಆಧಾರ:
ಬದುಕಿನ ಹಳಿ ತಪ್ಪದಿರಲು ಬೆಳೆಗಳಿಗೆ ರೈತರು ವಿಮೆ ಮಾಡಿಸುತ್ತಾರೆ. ಹೀಗಾಗಿ ವಿಮಾ ಕಂಪನಿಗಳು ಇಲ್ಲದ ನೆಪ ಹೇಳಿ ವಿಮೆ ನೀಡದಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಕಳೆದ‌ 3 ವರ್ಷಗಳಿಂದಲೂ ಅತಿವೃಷ್ಟಿಯಿಂದ ರೈತರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಈ ಸಂದರ್ಭದಲ್ಲಿ ವಿಮಾ ಕಂಪನಿಗಳು ರೈತರ ವಿಮೆ ಪಾವತಿಸಿ ಕರ್ತವ್ಯ ಮೆರೆಯಬೇಕು. ರೈತರಿಂದ ಪ್ರೀಮಿಯಂ ಪಾವತಿಸಿಕೊಂಡು ವಿಮೆ ನೀಡದಿದ್ದರೆ ಹೇಗೆ? ಕೃಷಿ ಸಚಿವರು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

Dinesh gundurao tweet
ದಿನೇಶ್ ಗುಂಡೂರಾವ್ ಟ್ವೀಟ್

ಪ್ರಧಾನಿ ಅತಿಥಿ ನಟನ ಪಾತ್ರ:
ಕೊರೊನಾ ಸರಣಿಯ ಮುಂದುವರೆದ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅತಿಥಿ ನಟನ ಪಾತ್ರವನ್ನು ನಿರ್ವಹಿಸಿ ಹೋಗಿದ್ದಾರೆ. ಕೊರೊನಾ ಸೋಂಕು ವ್ಯಾಪಕವಾದ ಹಿಂದೆ ತಮ್ಮದೇ ಸರ್ಕಾರದ ವೈಫಲ್ಯವಿದ್ದರೂ ಅಪ್ಪಿತಪ್ಪಿಯೂ ಅದರ ಬಗ್ಗೆ ಬಾಯಿ ಬಿಟ್ಟಿಲ್ಲ. ಬದಲಿಗೆ ಜನರಿಗೆ ಕರ್ತವ್ಯ ಪಾಲನೆಯ ಬೋಧನೆ ಮಾಡಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.