ETV Bharat / state

ಟ್ರಂಪ್ ಗೆಲ್ಲಿಸಲು ಮೋದಿ.. ಫಡ್ನವಿಸ್‌ ಗೆಲ್ಲಿಸಲು ಬಿಎಸ್​ವೈ .. ದಿನೇಶ್ ಗುಂಡೂರಾವ್​ ಲೇವಡಿ - ಯಡಿಯೂರಪ್ಪ

ನೆರೆ ಆದಾಗ ಪ್ರಧಾನಿ ಮೋದಿ ವಿದೇಶ ಪ್ರವಾಸ ಮಾಡಿದ್ದರು. ಟ್ರಂಪ್ ಗೆಲ್ಲಿಸಲು ಮೋದಿ ಅಲ್ಲಿಗೆ ಹೋಗಿದ್ದರು. ಇದೀಗ ರಾಜ್ಯದಲ್ಲಿ ಬಿಜೆಪಿ ನಾಯಕರು ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

ದಿನೇಶ್ ಗುಂಡೂರಾವ್​
author img

By

Published : Oct 16, 2019, 7:50 PM IST

Updated : Oct 16, 2019, 8:58 PM IST

ಬೆಂಗಳೂರು: ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲ್ಲಿಸಲಿಕ್ಕೆ ಯಡಿಯೂರಪ್ಪ ಮತ್ತು ಸಚಿವರ ತಂಡ ಹೋಗಿದೆ. ಆದರೆ, ರಾಜ್ಯದ ನೆರೆ ಸಂತ್ರಸ್ತರನ್ನ ನೋಡೋದು ಯಾರು? ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೆರೆ ಆದಾಗ ಪ್ರಧಾನಿ ಮೋದಿ ವಿದೇಶ ಪ್ರವಾಸ ಮಾಡಿದ್ದರು. ಟ್ರಂಪ್ ಗೆಲ್ಲಿಸಲು ಮೋದಿ ಅಲ್ಲಿಗೆ ಹೋಗಿದ್ದರು. ರಾಜ್ಯದಲ್ಲಿ ಬಿಜೆಪಿ ನಾಯಕರು ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕೇವಲ ಮೂರು ದಿನಕ್ಕೆ ಅಧಿವೇಶನ ಸೀಮಿತ ಮಾಡಿದ್ದರು. ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂದು ಹೇಳಿದ್ದರು. ಸಿಎಂ, ಡಿಸಿಎಂ, ಸಚಿವರು ಎಲ್ಲರೂ ಪ್ರಚಾರಕ್ಕೆ ಹೋಗಿದ್ದಾರೆ. ನೆರೆ ವಿಚಾರದಲ್ಲಿ ಬಿಜೆಪಿ ನಾಯಕರು ಕಾರ್ಯ ನಿರ್ವಹಿಸುತ್ತಿಲ್ಲ ಎಂದರು.

ಮೋದಿ ಬಳಿ ಮಾತನಾಡಲು ರಾಜ್ಯ ಕಾಂಗ್ರೆಸ್ ನಾಯಕರು ಮೋದಿ ಬಳಿ ಹೋಗಿ ಮಾತಾಡಲ್ಲ. ನೀತಿ ಸಂಹಿತೆ ಜಾರಿಯಾಗಿದ್ದ ವೇಳೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡ್ತಾರೆ. ಅವರಿಗೆ ಅನುದಾನ ಬಿಡುಗಡೆ ಮಾಡ್ತಾರೆ ಅಂದ್ರೇ ಹೇಗೆ? ಚುನಾವಣಾ ಆಯೋಗ ದುರುದ್ದೇಶದಿಂದ ಕೆಲಸ ಮಾಡ್ತಿದೆ. ಇಲ್ಲವಾದಲ್ಲಿ ನಿಗಮ‌ ಮಂಡಳಿ ಅಧ್ಯಕ್ಷರ ನೇಮಕ ಮಾಡಿದ್ದನ್ನ ರದ್ದು ಮಾಡಬೇಕು ಎಂದಿದ್ದಾರೆ.

ರಾಜ್ಯಸಭಾ ಸದಸ್ಯರಾಗಿದ್ದ ಕೆ ಸಿ ರಾಮಮೂರ್ತಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿದ ಗುಂಡೂರಾವ್‌, ನಾವು ಇದಕ್ಕೆ ಏನ್ಮಾಡೋಕ್ಕಾಗುತ್ತೆ. ಬಿಜೆಪಿ ಇದನ್ನ ವ್ಯಾಪಾರ ಮಾಡ್ಕೊಂಡು ಬಿಟ್ಟಿದೆ. ಇತರೆ ಪಕ್ಷದ ಮುಖಂಡರನ್ನ ಭಯ ಬೀಳಿಸೋದು. ಹೀಗೆಲ್ಲಾ ಭಯ ಬೀಳಿಸಿ ಪಕ್ಷ ತೊರೆಯುವಂತೆ, ಬಿಜೆಪಿ ಸೇರುವ ವಾತಾವರಣ ನಿರ್ಮಾಣ ಮಾಡಲಾಗ್ತಿದೆ ಎಂದರು.

ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಸುದ್ದಿಯಾಗಿದ್ದ ಶಿವಾಜಿನಗರ ರೌಡಿಶೀಟರ್ ಪೈಲ್ವಾನ್ ಇಸ್ತಿಯಾಕ್ ಅಹಮ್ಮದ್ ಕುರಿತು ಮಾತನಾಡಿ, ವೇಣುಗೋಪಾಲರನ್ನ ಸಾಕಷ್ಟು ಜನ ಮುಖಂಡರು ಭೇಟಿ ಮಾಡಿದ್ದಾರೆ. ಅನಗತ್ಯವಾಗಿ ವೇಣುಗೋಪಾಲರ ತೇಜೋವಧೆ ಮಾಡಲಾಗ್ತಿದೆ. ಅವರ ಮೇಲಿನ ಕೆಲ ಪ್ರಕರಣಗಳು ರದ್ದಾಗಿವೆ. ಅವರು ಹಲವಾರು ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ನನ್ನನ್ನ ಭೇಟಿ ಮಾಡಿದ್ದಾರೆ.‌ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ. ಆದರೆ, ಬಿಜೆಪಿ ಬಗ್ಗೆ ಮಾತಾಡಲ್ಲ. ಐಎಂಎ ಪ್ರಕರಣದಲ್ಲಿ ಭಾಗಿಯಾಗಿರೋ ಬಿಜೆಪಿ ಬೆಂಬಲಿಗರನ್ನ ವಿಚಾರಣೆ ಮಾಡ್ತಿಲ್ಲ. ಅವರ ಮೇಲೆ ಹಿಂದೆ ಪ್ರಕರಣಗಳಿದ್ವು. ಈಗಿಲ್ಲ ಅಂತಾ ಹೇಳ್ತಿಲ್ಲ. ಅವರು ನಮ್ಮ ಪಕ್ಷದಲ್ಲಿದ್ದಾರೆ. ಅವರ ಪತ್ನಿ ಕಾರ್ಪೊರೇಟರ್ ಆಗಿದ್ದಾರೆ. ಪಕ್ಷದ ಹಲವಾರು ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಇಸ್ತಿಯಾಕ್ ಅಹಮ್ಮದ್ ಭೇಟಿಯನ್ನ ಗುಂಡೂರಾವ್​ ಸಮರ್ಥಿಸಿಕೊಂಡರು.

Intro:newsBody:ಟ್ರಂಪ್ ಗೆಲ್ಲಿಸಲು ಮೋದಿ ಹೋದರು ಮಹಾರಾಷ್ಟ್ರ ಗೆಲ್ಲಿಸಲು ಬಿಎಸ್ವೈ ತೆರಳಿದ್ದಾರೆ: ದಿನೇಶ್ ಲೇವಡಿ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲ್ಲಿಸಲಿಕ್ಕೆ ಯಡಿಯೂರಪ್ಪ ಮತ್ತು ಸಚಿವರ ತಂಡ ಹೋಗಿದೆ. ಆದ್ರೆ ರಾಜ್ಯದ ನೆರೆ ಸಂತ್ರಸ್ತರನ್ನ ನೋಡೋದು ಯಾರು ? ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನೆರೆ ಆದಾಗ ಪ್ರಧಾನಿ ಮೋದಿ ವಿದೇಶ ಪ್ರವಾಸ ಮಾಡಿದ್ದರು. ಟ್ರಂಪ್ ಗೆಲ್ಲಿಸಲು ಮೋದಿ ಅಲ್ಲಿಗೆ ಹೋಗಿದ್ದರು. ರಾಜ್ಯದಲ್ಲಿ ಬಿಜೆಪಿ ನಾಯಕರು ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕೇವಲ ಮೂರು ದಿನಕ್ಕೆ ಅಧಿವೇಶನ ಸೀಮಿತ ಮಾಡಿದ್ದರು. ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂದು ಹೇಳಿದ್ದರು. ಸಿಎಂ, ಡಿಸಿಎಂ, ಸಚಿವರು ಎಲ್ಲರೂ ಪ್ರಚಾರಕ್ಕೆ ಹೋಗಿದ್ದಾರೆ. ನೆರೆ ವಿಚಾರದಲ್ಲಿ ಬಿಜೆಪಿ ನಾಯಕರು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದರು.
ಮೋದಿ ಬಳಿ ಮಾತನಾಡಲು
ರಾಜ್ಯ ಕಾಂಗ್ರೆಸ್ ನಾಯಕರು ಮೋದಿ ಬಳಿ ಹೋಗಿ ಮಾತಾಡಲ್ಲ. ನೀತಿ ಸಂಹಿತೆ ಜಾರಿಯಾಗಿದ್ದ ವೇಳೆ, ನಿಗಮ ಮಂಡಳಿ ಅಧ್ಯಕ್ಷ ನೇಮಕ ಮಾಡ್ತಾರೆ. ಅವರಿಗೆ ಅನುದಾನ ಬಿಡುಗಡೆ ಮಾಡ್ತಾರೆ ಅಂದ್ರೆ ಹೇಗೆ ? ಚುನಾವಣಾ ಆಯೋಗ ದುರುದ್ದೇಶದಿಂದ ಕೆಲಸ ಮಾಡ್ತಿದೆ. ಇಲ್ಲವಾದಲ್ಲಿ ನಿಗಮ‌ ನೇಮಕ ಮಾಡಿದ್ದನ್ನ ರದ್ದು ಮಾಡಬೇಕು ಎಂದಿದ್ದಾರೆ.
ರಾಜ್ಯಸಭಾ ಸದಸ್ಯರಾಗಿದ್ದ ಕೆ.ಸಿ. ರಾಮಮೂರ್ತಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ವಿಚಾರ ಮಾತನಾಡಿ, ನಾವು ಇದಕ್ಕೆ ಏನ್ಮಾಡೋಕ್ಕಾಗುತ್ತೆ. ಬಿಜೆಪಿ ಇದನ್ನ ವ್ಯಾಪಾರ ಮಾಡ್ಕೊಂಡು ಬಿಟ್ಟಿದೆ. ಇತರೆ ಪಕ್ಷದ ಮುಖಂಡರನ್ನ ಭಯ ಬೀಳಿಸೋದು. ಹೀಗೆಲ್ಲಾ ಭಯ ಬೀಳಿಸಿ ಪಕ್ಷ ತೊರೆಯುವಂತೆ, ಬಿಜೆಪಿ ಸೇರುವಂತ ವಾತಾವರಣ ನಿರ್ಮಾಣ ಮಾಡಲಾಗ್ತಿದೆ ಎಂದರು.
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಸುದ್ದಿಯಾಗಿದ್ದ ಶಿವಾಜಿನಗರ ರೌಡಿಶೀಟರ್ ಪೈಲ್ವಾನ್ ಇಸ್ತಿಯಾಕ್ ಅಹಮ್ಮದ್ ಕುರಿತು ಮಾತನಾಡಿ, ವೇಣುಗೋಪಾಲ ರನ್ನ ಸಾಕಷ್ಟು ಜನ ಮುಖಂಡರು ಭೇಟಿ ಮಾಡಿದ್ದಾರೆ. ಅನಗತ್ಯವಾಗಿ ವೇಣುಗೋಪಾಲರ ತೇಜೋವಧೆ ಮಾಡಲಾಗ್ತಿದೆ. ಅವರ ಮೇಲಿನ ಕೆಲ ಪ್ರಕರಣಗಳು ರದ್ದಾಗಿವೆ. ಅವರು ಹಲವಾರು ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ನನ್ನನ್ನ ಭೇಟಿ ಮಾಡಿದ್ದಾರೆ.‌ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ. ಆದ್ರೆ ಬಿಜೆಪಿ ಬಗ್ಗೆ ಮಾತಾಡಲ್ಲ. ಐಎಂಎ ಪ್ರಕರಣದಲ್ಲಿ ಭಾಗಿಯಾಗಿರೋ ಬಿಜೆಪಿ ಬೆಂಬಲಿಗರನ್ನ ವಿಚಾರಣೆ ಮಾಡ್ತಿಲ್ಲ. ಅವರ ಮೇಲೆ ಹಿಂದೆ ಪ್ರಕರಣಗಳಿದ್ವು. ಈಗಿಲ್ಲ ಅಂತಾ ಹೇಳ್ತಿಲ್ಲ. ಅವರು ನಮ್ಮ ಪಕ್ಷದಲ್ಲಿದ್ದಾರೆ. ಅವರ ಪತ್ನಿ ಕಾರ್ಪೊರೇಟರ್ ಆಗಿದ್ದಾರೆ. ಪಕ್ಷದ ಹಲವಾರು ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಇಸ್ತಿಯಾಕ್ ಅಹಮ್ಮದ್ ಭೇಟಿಯನ್ನ ಸಮರ್ಥಿಸಿಕೊಂಡರು.

Conclusion:news
Last Updated : Oct 16, 2019, 8:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.