ETV Bharat / state

ರಾಜ್ಯ ಸರ್ಕಾರದ ಪಾಪದ ಫಲವನ್ನು ಜನರು ಅನುಭವಿಸಬೇಕಾಗಿರುವುದು ದುರಂತ : ದಿನೇಶ್ ಗುಂಡೂರಾವ್

ಅಂದು ತಜ್ಞರ ವರದಿ ಕಡೆಗಣಿಸಿ ಹುಡುಗಾಟವಾಡಿದ್ದ ಸರ್ಕಾರ, ಇಂದು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬಂತೆ ಕೊರೊನಾ ನಿಯಂತ್ರಿಸಲು ಹೆಣಗಾಡುವುದರಲ್ಲಿ ಏನರ್ಥವಿದೆ? ಎಂದು ಕೇಳಿದ್ದಾರೆ..

author img

By

Published : Apr 28, 2021, 12:24 PM IST

dinesh gundu rao
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು : ಕೋವಿಡ್ ಎರಡನೇ ಅಲೆ ಮುನ್ಸೂಚನೆಯನ್ನು ತಜ್ಞರು ನೀಡಿದ್ದರೂ ಕೂಡ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು. ಇದರ ಫಲವನ್ನು ಇಂದು ಜನ ಅನುಭವಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

  • 2
    ರಾಜ್ಯ ಸರ್ಕಾರದ ಪಾಪದ ಫಲವನ್ನು ಜನ ಅನುಭವಿಸಬೇಕಾಗಿರುವುದು ದುರಂತ. ರಾಜ್ಯದಲ್ಲಿ ಆಗುತ್ತಿರುವ ಪ್ರತಿ ಕೊರೊನಾ ಸಾವಿನ ಹಿಂದೆಯೂ ಸರ್ಕಾರದ ಬೇಜವಬ್ಧಾರಿಯಿದೆ‌.

    ಅಂದು ತಜ್ಞರ ವರದಿ ಕಡೆಗಣಿಸಿ ಹುಡುಗಾಟವಾಡಿದ್ದ ಸರ್ಕಾರ, ಇಂದು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬಂತೆ ಕೊರೊನಾ ನಿಯಂತ್ರಿಸಲು ಹೆಣಗಾಡುವುದರಲ್ಲಿ ಏನರ್ಥವಿದೆ?

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 28, 2021 " class="align-text-top noRightClick twitterSection" data=" ">

ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕೋವಿಡ್ 2ನೇ ಅಲೆಯ ಪರಿಣಾಮದ ಬಗ್ಗೆ ಕಳೆದ ನವೆಂಬರ್‌ನಲ್ಲಿ ತಜ್ಞರು ಕೊಟ್ಟಿದ್ದ ವರದಿಯನ್ನು ರಾಜ್ಯ ಸರ್ಕಾರ ಕಸದ ಬುಟ್ಟಿಗೆ ಹಾಕಿತ್ತು. ಅದರ ಪರಿಣಾಮವನ್ನು ರಾಜ್ಯದ ಜನರು ಈಗ ಅನುಭವಿಸುತ್ತಿದ್ದಾರೆ.

ಸರ್ಕಾರ ಅಂದು ತಜ್ಞರ ವರದಿಯನ್ನು ಸ್ವಲ್ಪವೇ ಗಂಭೀರವಾಗಿ ಪರಿಗಣಿಸಿದ್ದರೂ ರಾಜ್ಯ ಇಂತಹ ದುರಂತಕ್ಕೆ ಸಾಕ್ಷಿಯಾಗುತ್ತಿರಲಿಲ್ಲ ಎಂದಿದ್ದಾರೆ.

ರಾಜ್ಯ ಸರ್ಕಾರದ ಪಾಪದ ಫಲವನ್ನು ಜನ ಅನುಭವಿಸಬೇಕಾಗಿರುವುದು ದುರಂತ. ರಾಜ್ಯದಲ್ಲಿ ಆಗುತ್ತಿರುವ ಪ್ರತಿ ಕೊರೊನಾ ಸೋಂಕಿತರ ಸಾವಿನ ಹಿಂದೆ ಸರ್ಕಾರದ ಬೇಜವಾಬ್ದಾರಿಯಿದೆ‌.

ಅಂದು ತಜ್ಞರ ವರದಿ ಕಡೆಗಣಿಸಿ ಹುಡುಗಾಟವಾಡಿದ್ದ ಸರ್ಕಾರ, ಇಂದು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬಂತೆ ಕೊರೊನಾ ನಿಯಂತ್ರಿಸಲು ಹೆಣಗಾಡುವುದರಲ್ಲಿ ಏನರ್ಥವಿದೆ? ಎಂದು ಕೇಳಿದ್ದಾರೆ.

ಕೊರೊನಾ ಭೀಕರತೆಯ ಬಗ್ಗೆ ವಿಪಕ್ಷಗಳು ಆಗಲೇ ಸರ್ಕಾರವನ್ನು ಎಚ್ಚರಿಸಬೇಕಿತ್ತು ಎಂದು ಸಿ.ಟಿ. ರವಿ ಹೇಳಿದ್ದಾರೆ. ಬಿಜೆಪಿ ಸರ್ಕಾರ ವಿಪಕ್ಷಗಳ ಎಚ್ಚರಿಕೆಯನ್ನು ಯಾವಾಗ ಕಿವಿಗೆ ಹಾಕಿಕೊಂಡು ಪಾಲಿಸಿದೆ ಎಂದು ಸಿ.ಟಿ. ರವಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ. ವಿಪಕ್ಷಗಳ ಎಚ್ಚರಿಕೆ ಅಂದು ಕೂಡ ಸರ್ಕಾರಕ್ಕೆ ಅಪಥ್ಯವಾಗಿತ್ತು, ಇಂದು ಕೂಡ ಅಪಥ್ಯವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್​ ಕುರಿತು ತುಂಬಾ ಜಾಗ್ರತೆ ವಹಿಸಿ: ಶಾಸಕರಿಗೆ ಸಲಹೆ ನೀಡಿದ ಸ್ಪೀಕರ್

ಕೊರೊನಾ 2ನೇ ಅಲೆಯ ಪರಿಣಾಮದ ಬಗ್ಗೆ ತಜ್ಞರ ವರದಿಯನ್ನೇ ಕಾಲ ಕಸ ಮಾಡಿಕೊಂಡಿದ್ದ ಈ ಸರ್ಕಾರ ವಿಪಕ್ಷಗಳ ಎಚ್ಚರಿಕೆಯನ್ನು ಪಾಲಿಸಲು ಸಾಧ್ಯವಿತ್ತೆ? ಹೊರುವವನಿಗೆ ಹೆಗಲು ಭಾರ ಎಂಬಂತೆ ಸಿ.ಟಿ. ರವಿಯವರು ನೆಪ ಹೇಳುವುದನ್ನು ಬಿಟ್ಟು ತಮ್ಮ ರಾಜ್ಯ ಸರ್ಕಾರದ ಅಸಮರ್ಥತೆಯನ್ನು ಒಪ್ಪಿಕೊಳ್ಳಲಿ. ಕನಿಷ್ಠ ಆಗಲಾದರೂ ಮಾಡಿದ ಪಾಪದ ಭಾರ ಕಡಿಮೆಯಾಗಬಹುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.