ಬೆಂಗಳೂರು: ರಾಜ್ಯದ ಬೊಮ್ಮಾಯಿ ನೇತೃತ್ವದ ಸರ್ಕಾರ ಡಬಲ್ ಎಂಜಿನ್ ಸರ್ಕಾರವಲ್ಲ.ಇದು ಡೀಲಿಂಗ್ ಸರ್ಕಾರ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಈ ಸರ್ಕಾರದಲ್ಲಿ ಪ್ರತಿ ಸರ್ಕಾರಿ ಉದ್ಯೋಗಕ್ಕೂ ಇಂತಿಷ್ಟು ರೇಟ್ ಎಂದು ಫಿಕ್ಸ್ ಆಗಿದೆ. PSI ನೇಮಕಾತಿಯಲ್ಲಿ ಡೀಲಿಂಗ್, ಪ್ರಾಧ್ಯಾಪಕರ ನೇಮಕಾತಿಯಲ್ಲಿ ಡೀಲಿಂಗ್, ಇಂಜಿನಿಯರ್‌ಗಳ ನೇಮಕಾತಿಯಲ್ಲೂ ಡೀಲಿಂಗ್. ಇದು ಡೀಲಿಂಗ್ ಸರ್ಕಾರವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.
-
3
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 28, 2022 " class="align-text-top noRightClick twitterSection" data="
ಡೀಲಿಂಗ್ ದಂಧೆಯಲ್ಲಿ ಮುಳುಗಿರುವ @BJP4Karnataka ಸರ್ಕಾರ ಇತಿಹಾಸ ಕಂಡ ಅತ್ಯಂತ ಕಡುಭ್ರಷ್ಟ ಸರ್ಕಾರ. ಸರ್ಕಾರಿ ಉದ್ಯೋಗಕ್ಕೆ ರೇಟ್ ಫಿಕ್ಸ್ ಮಾಡಿ ದಂಧೆ ನಡೆಸುವ ಈ ಸರ್ಕಾರಕ್ಕೆ ಮಾನ ಮಾರ್ಯಾದೆಯೇನಾದರೂ ಇದೆಯೆ? ಭ್ರಷ್ಟಾಚಾರವನ್ನು ಹಾಸು ಹೊದ್ದು ಮಲಗಿರುವ ಈ ಸರ್ಕಾರಕ್ಕೆ ಜನರ ಎದುರು ಮುಖ ತೋರಿಸಲು ನಾಚಿಕೆಯಾಗುವುದಿಲ್ಲವೆ?
">3
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 28, 2022
ಡೀಲಿಂಗ್ ದಂಧೆಯಲ್ಲಿ ಮುಳುಗಿರುವ @BJP4Karnataka ಸರ್ಕಾರ ಇತಿಹಾಸ ಕಂಡ ಅತ್ಯಂತ ಕಡುಭ್ರಷ್ಟ ಸರ್ಕಾರ. ಸರ್ಕಾರಿ ಉದ್ಯೋಗಕ್ಕೆ ರೇಟ್ ಫಿಕ್ಸ್ ಮಾಡಿ ದಂಧೆ ನಡೆಸುವ ಈ ಸರ್ಕಾರಕ್ಕೆ ಮಾನ ಮಾರ್ಯಾದೆಯೇನಾದರೂ ಇದೆಯೆ? ಭ್ರಷ್ಟಾಚಾರವನ್ನು ಹಾಸು ಹೊದ್ದು ಮಲಗಿರುವ ಈ ಸರ್ಕಾರಕ್ಕೆ ಜನರ ಎದುರು ಮುಖ ತೋರಿಸಲು ನಾಚಿಕೆಯಾಗುವುದಿಲ್ಲವೆ?3
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 28, 2022
ಡೀಲಿಂಗ್ ದಂಧೆಯಲ್ಲಿ ಮುಳುಗಿರುವ @BJP4Karnataka ಸರ್ಕಾರ ಇತಿಹಾಸ ಕಂಡ ಅತ್ಯಂತ ಕಡುಭ್ರಷ್ಟ ಸರ್ಕಾರ. ಸರ್ಕಾರಿ ಉದ್ಯೋಗಕ್ಕೆ ರೇಟ್ ಫಿಕ್ಸ್ ಮಾಡಿ ದಂಧೆ ನಡೆಸುವ ಈ ಸರ್ಕಾರಕ್ಕೆ ಮಾನ ಮಾರ್ಯಾದೆಯೇನಾದರೂ ಇದೆಯೆ? ಭ್ರಷ್ಟಾಚಾರವನ್ನು ಹಾಸು ಹೊದ್ದು ಮಲಗಿರುವ ಈ ಸರ್ಕಾರಕ್ಕೆ ಜನರ ಎದುರು ಮುಖ ತೋರಿಸಲು ನಾಚಿಕೆಯಾಗುವುದಿಲ್ಲವೆ?
ರಾಜ್ಯ ಬಿಜೆಪಿ ಸರ್ಕಾರ ಅರ್ಹತಾ ಪರೀಕ್ಷೆಯ ಮೂಲಕ ಸರ್ಕಾರಿ ಉದ್ಯೋಗ ಭರ್ತಿ ಮಾಡುವುದೇಕೆ? ವಿಧಾನಸೌಧವನ್ನೇ ಡೀಲಿಂಗ್ ಸೆಂಟರ್ ಮಾಡಿಕೊಂಡಿರುವಾಗ ಎಲ್ಲಾ ನೇಮಕಾತಿಯನ್ನು ಹರಾಜು ಪ್ರಕ್ರಿಯೆಯ ಮೂಲಕವೇ ನಡೆಸಲಿ. ಈ ಸರ್ಕಾರದಲ್ಲಿ ದುಡ್ಡಿದ್ದವನಿಗೆ ಉದ್ಯೋಗ ಎಂದ ಮೇಲೆ ಬಡವರು ಯಾಕೆ ಪರೀಕ್ಷೆ ಬರೆಯಬೇಕು? ಸಮಯ-ಹಣ ಯಾಕೆ ವ್ಯರ್ಥ ಮಾಡಬೇಕು? ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು, ಇನ್ನಿಬ್ಬರು ಗಂಭೀರ
ಸರ್ಕಾರಿ ಉದ್ಯೋಗಕ್ಕೆ ರೇಟ್ ಫಿಕ್ಸ್ ಮಾಡಿ ದಂಧೆ ನಡೆಸುವ ಈ ಸರ್ಕಾರಕ್ಕೆ ಮಾನ ಮರ್ಯಾದೆಯೇನಾದರೂ ಇದೆಯೇ?. ಭ್ರಷ್ಟಾಚಾರವನ್ನು ಹಾಸು ಹೊದ್ದು ಮಲಗಿರುವ ಈ ಸರ್ಕಾರಕ್ಕೆ ಜನರ ಎದುರು ಮುಖ ತೋರಿಸಲು ನಾಚಿಕೆಯಾಗುವುದಿಲ್ಲವೆ? ಎಂದು ಕಿಡಿಕಾರಿದ್ದಾರೆ.