ETV Bharat / state

ಕೋಳಿನೇ ಹುಟ್ಟಿಲ್ಲ, ರೋಷನ್ ಬೇಗ್ ಕಬಾಬ್ ಬೇಯಿಸ್ತಾರಂತೆ.. ದಿನೇಶ್‍ ಗುಂಡೂರಾವ್‍ ವ್ಯಂಗ್ಯದ ಬಾಣ - ಕೆಪಿಸಿಸಿ

ಒಬ್ಬ ಪ್ರಬುದ್ಧ ರಾಜಕಾರಣಿ ಈ ರೀತಿ ಮಾತನಾಡುವುದಿಲ್ಲ. ಅವರ ಮಾತಿನ ಹಿಂದಿನ ಉದ್ದೇಶ ಏನಿತ್ತೋ ನನಗೆ ಅರ್ಥ ಆಗ್ತಿಲ್ಲ. ಎಲ್ಲಾ ಅಧಿಕಾರವನ್ನೂ ಅನುಭವಿಸಿದವರು ಇಷ್ಟು ಕೆಳ ಮಟ್ಟಕ್ಕೆ ಇಳಿಯಬೇಕಿರಲಿಲ್ಲ. ಎಕ್ಸಿಟ್ ಪೋಲ್ ಫಲಿತಾಂಶ ರೋಷನ್ ಬೇಗ್​ಗೆ ಖುಷಿ ತಂದಿರಬೇಕು ಎಂದು ದಿನೇಶ್‍ ಕಿಡಿಕಾರಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್‍
author img

By

Published : May 21, 2019, 4:59 PM IST

ಬೆಂಗಳೂರು : ಕೋಳಿನೇ ಹುಟ್ಟದೆ ರೋಷನ್ ಬೇಗ್ ಕಬಾಬ್ ಬೇಯಿಸೋದಕ್ಕೆ ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್‌, ಮಾಜಿ ಸಚಿವರ ಕಾಲೆಳೆದಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೋಷನ್‍ ಬೇಗ್‍ ಅವರಿಗೆ ಮತಗಟ್ಟೆ ಸಮೀಕ್ಷೆ ಬಗ್ಗೆನೇ ಇಷ್ಟೊಂದು ಆತುರ ಏಕೆ? 23ರ ಫಲಿತಾಂಶ ಎಲ್ಲದಕ್ಕೂ ಉತ್ತರ ಕೊಡುತ್ತದೆ. ತಪ್ಪು ಮಾಡಿದವರ ವಿರುದ್ಧ ಪಕ್ಷ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ಇಂದು ಪಕ್ಷದ ವಿರುದ್ಧ ಅವರು ಮಾತನಾಡಿದ್ದಾರೆ. ರೋಷನ್ ಬೇಗ್ ಆತುರ ಅರ್ಥ ಆಗ್ತಿಲ್ಲ. ಕೋಳಿನೇ ಹುಟ್ಟಿಲ್ಲ, ಈಗಲೇ ಕಬಾಬ್ ತಿನ್ನೋಕೆ ಹೋಗ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಅಲ್ಪಸಂಖ್ಯಾತರು ಅಂದ್ರೇ ಅವರೊಬ್ಬರೇ ಅಲ್ಲ. ಅವರಿಗೆ ಸಚಿವ ಸ್ಥಾನ ಕೊಡದಿರುವುದು ಅಲ್ಪಸಂಖ್ಯಾತರಿಗೆ ಆದ ಮೋಸಾನಾ? ಬೇರೆಯವರಿಗೆ ಟಿಕೆಟ್ ಕೊಟ್ರೇ ಅದು ಅಲ್ಪಸಂಖ್ಯಾತರಿಗೆ ಮಾಡಿದ ಮೋಸಾನಾ? ಇವರನ್ನ ಸಚಿವರನ್ನಾಗಿ ಮಾಡದೇ ಬೇರೆಯವರನ್ನು ಸಚಿವರನ್ನಾಗಿ ಮಾಡಿದ್ರೇ ಅಲ್ಪಸಂಖ್ಯಾತರಿಗೆ ಮಾಡುವ ಮೋಸಾನಾ? ಅವರ ಹಿರಿತನಕ್ಕೆ ಎಗ್ಸಿಟ್ ಪೋಲ್ ನೋಡಿ ರಿಯಾಕ್ಟ್ ಮಾಡೋದಲ್ಲ. ಅವರು ತಾಳ್ಮೆಯಿಂದ ಇರಬೇಕಿತ್ತು. ಅವರು ಪ್ರತಿಕ್ರಿಯಿಸಿದ್ದು ಸರಿಯಲ್ಲ. ಉಪ್ಪು ತಿಂದವರು ನೀರು ಕುಡಿತಾರೆ ಎಂದು ತಿಳಿಸಿದರು.

ರೋಷನ್‌ ಬೇಗುದಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್‍ ಕಿಡಿ

ರೋಷನ್ ಬೇಗ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ ದಿನೇಶ್ ಗುಂಡೂರಾವ್, ಆಯ್ತು ಇದು ಮುಗಿದ ಅಧ್ಯಾಯ ಅಂತಾ ಕೋಪಿಸಿಕೊಂಡರು.

ರೋಷನ್ ಬೇಗ್ ಒಬ್ಬ ಹಿರಿಯ ನಾಯಕ. ಈ ರೀತಿ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಅವರು ಏನೇ ಮಾತನಾಡುವುದಿದ್ದರೂ ಪಕ್ಷದ ವೇದಿಕೆಯಲ್ಲೇ ಮಾತನಾಡಬಹುದಿತ್ತು. ಒಬ್ಬ ಪ್ರಬುದ್ಧ ರಾಜಕಾರಣಿ ಈ ರೀತಿ ಮಾತನಾಡುವುದಿಲ್ಲ. ಅವರ ಮಾತಿನ ಹಿಂದಿನ ಉದ್ದೇಶ ಏನಿತ್ತೋ ನನಗೆ ಅರ್ಥ ಆಗ್ತಿಲ್ಲ. ಎಲ್ಲಾ ಅಧಿಕಾರವನ್ನೂ ಅನುಭವಿಸಿದವರು, ಇಷ್ಟು ಕೆಳ ಮಟ್ಟಕ್ಕೆ ಇಳಿಯಬೇಕಿರಲಿಲ್ಲ. ಎಕ್ಸಿಟ್ ಪೋಲ್ ಫಲಿತಾಂಶ ರೋಷನ್ ಬೇಗ್​ಗೆ ಖುಷಿ ತಂದಿರಬೇಕು ಎಂದು ದಿನೇಶ್‍ ಕಿಡಿಕಾರಿದರು.

ಪಕ್ಷದ ಚೌಕಟ್ಟಲ್ಲಿ ಹೇಳಬಹುದಿತ್ತು:

ಯಾವುದೇ ವಿಚಾರಗಳಿದ್ದರೆ ಅದನ್ನು ಪಕ್ಷದ ಚೌಕಟ್ಟಿನೊಳಗೆ ಹೇಳಬಹುದಿತ್ತು. ಅವರಿಗೆ ಯಾಕೆ ಇಷ್ಟು ತರಾತುರಿ, ಯಾಕಿಷ್ಟು ಆತುರವೋ ಅರ್ಥವಾಗ್ತಿಲ್ಲ. ಪ್ರಬುದ್ಧ, ನಿಸ್ವಾರ್ಥ, ನಿಷ್ಠೆ ಇರುವ ರಾಜಕಾರಣಿ ಈ ರೀತಿ ಮಾತನಾಡೋದಿಲ್ಲ. ರೋಷನ್ ಬೇಗ್ ಎಲ್ಲಾ ಸ್ಥಾನಮಾನ ಪಡೆದುಕೊಂಡವರು. ಪಕ್ಷ ಅಂದ್ರೇ ನಾವೆಲ್ಲ ತಾಯಿ ಸಮಾನ ಅಂದುಕೊಂಡವರು. ಮಂತ್ರಿ ಆಗಬೇಕು ಅಧಿಕಾರದ ಹಿಂದೆ ಹೋಗಬೇಕು ಅನ್ನುವ ಸಣ್ಣತನವನ್ನಂತೂ ನಾನು ಮಾಡಿಲ್ಲ. ನನ್ನ ಮೇಲೂ ಅಟ್ಯಾಕ್ ಮಾಡಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಸಣ್ಣತನದ ರಾಜಕೀಯ ನಾನು ಮಾಡಲ್ಲ. ಪಕ್ಷಕ್ಕೆ ತೊಂದರೆ, ಮುಜುಗರ ಕೊಡುವ ಹೇಳಿಕೆ ನಾನ್ಯಾವತ್ತೂ ಕೊಡಲ್ಲ ಎಂದು ಹೇಳಿದರು.

ಎಲ್ಲರಿಗೂ ಅಸಮಾಧಾನ ಇರುತ್ತೆ. ಇಂತಹ ಹೇಳಿಕೆ ಒಳ್ಳೆಯ ಬೆಳವಣಿಗೆ ಅಲ್ಲ. ಪಕ್ಷದ ಹಿತದೃಷ್ಟಿಯಿಂದ ಏನು ತೀರ್ಮಾನ ಮಾಡಬೇಕೋ ಮಾಡ್ತೀವಿ. ನಾವು ಯಾರನ್ನೂ ಕೂಡಿಹಾಕೋಕೆ, ಕಟ್ಟಿಹಾಕೋಕೆ ಆಗಲ್ಲ. ಬಿಜೆಪಿ ಬರುತ್ತೆ ಅಂತಾ ರೋಷನ್ ಬೇಗ್​ಗೆ ಯಾಕೆ ಖುಷಿಯೋ ಗೊತ್ತಿಲ್ಲ. ನಮಗೆ ಪಕ್ಷ, ಸಂಘಟನೆ ಮುಖ್ಯ. ನಮ್ಮ ಸ್ವಾರ್ಥಕ್ಕೆ ಪಕ್ಷ ಬಲಿ ಕೊಡಲು ಆಗಲ್ಲ. ಎಕ್ಸಿಟ್ ಪೋಲ್ ನಾವು ನಂಬಲ್ಲ. ರಿಸಲ್ಟ್ ಬೇರೆ ರೀತಿ ಬರುತ್ತೆ ಎಂದು ಅಭಿಪ್ರಾಯಪಟ್ಟರು.

ಸಿಎಂ, ದೇವೇಗೌಡರು ನೋಡಿಕೊಳ್ತಾರೆ :

ರೋಷನ್ ಬೇಗ್‌ರನ್ನ ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ವಿಶ್ವನಾಥ್ ಬಗ್ಗೆ ನಾನು ಕಮೆಂಟ್ ಮಾಡೋದಕ್ಕೆ ಹೋಗಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷರ ಹೇಳಿಕೆ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ ನೋಡಿಕೊಳ್ತಾರೆ ಎಂದರು.

Intro:newsBody:ಕೋಳಿನೇ ಹುಟ್ಟದೇ ರೋಷನ್ ಬೇಗ್ ಕಬಾಬ್ ಮಾಡಲು ಹೊರಟಿದ್ದಾರೆ: ದಿನೇಶ್‍ ಗುಂಡೂರಾವ್‍

ಬೆಂಗಳೂರು: ಕೋಳಿನೇ ಹುಟ್ಟದೇ ರೋಷನ್ ಬೇಗ್ ಕಬಾಬ್ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್‍ ಅಭಿಪ್ರಾಯ ಪಟ್ಟಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರೋಷನ್‍ ಬೇಗ್‍ ಅವರಿಗೆ ಮತಗಟ್ಟೆ ಸಮೀಕ್ಷೆ ಬಗ್ಗೆನೇ ಇಷ್ಟೊಂದು ಆತುರ ಏಕೆ. 23 ರ ಫಲಿತಾಂಶ ಎಲ್ಲದಕ್ಕೂ ಉತ್ತರ ಕೊಡುತ್ತದೆ. ತಪ್ಪು ಮಾಡಿದವರ ವಿರುದ್ಧ ಪಕ್ಷ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ಇಂದು ಪಕ್ಷದ ವಿರುದ್ಧ ಅವರು ಮಾತನಾಡಿದ್ದಾರೆ. ರೋಶನ್ ಬೇಗ ಆತುರ ಅರ್ಥ ಆಗ್ತಿಲ್ಲ. ಕೋಳಿನೆ ಹುಟ್ಟಿಲ್ಲ ಈಗಲೆ ಕಬಾಬ್ ತಿನ್ನೋಕೆ ಹೋಗ್ತಿದಾರೆ. ಕೋಳಿಯೇ ಹುಟ್ಟಿಲ್ಲ ಆಗಲೇ ಎಣಿಸೋಕೆ ಶುರು ಮಾಡಿದ್ದಾರೆ ಎಂದರು.

ಅಲ್ಪಸಂಖ್ಯಾತರು ಅಂದ್ರೆ ಅವರೊಬ್ಬರೆ ಅಲ್ಲಾ. ಅವರಿಗೆ ಸಚಿವ ಸ್ಥಾನ ಕೊಡದಿರುವುದು ಅಲ್ಪಸಂಖ್ಯಾತರಿಗೆ ಆದ ಮೋಸಾನಾ...? ಬೇರೆಯವರಿಗೆ ಟಿಕೆಟ್ ಕೊಟ್ರೆ ಅದು ಅಲ್ಪಸಂಖ್ಯಾತರಿಗೆ ಮಾಡಿದ ಮೋಸಾನಾ...? ಇವರನ್ನ ಸಚಿವರನ್ನಾಗಿ ಮಾಡದ ಬೇರೆಯವರನ್ಸಚಿವರನ್ನಾಗಿ ಮಾಡಿದ್ರೆ ಅಲ್ಪ ಸಂಖ್ಯಾತರಿಹೆ ಮಾಡುವ ಮೋಸಾನಾ? ಅವರ ಹಿರಿತನಕ್ಕೆ ಎಗ್ಸಿಟ್ ಪೋಲ್ ನೋಡಿ ರಿಯಾಕ್ಟ್ ಮಾಡೋದಲ್ಲ. ಅವರು ತಾಳ್ಮೆಯಿಂದ ಇರಬೇಕಿತ್ತು. ಅವರು ಪ್ರತಿಕ್ರಿಯಿಸದ್ದು ಸರಿಯಲ್ಲ.ಉಪ್ಪು ತಿಂದವರು ನೀರು ಕುಡಿತಾರೆ ಎಂದರು.

ರೋಶನ್ ಬೇಗ್ ವಿರುದ್ಧ ದ ಕ್ರಮದ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ ದಿನೇಶ್ ಗುಂಡೂರಾವ್, ಆಯ್ತು ಇಷ್ಟೆ ಮುಗಿದ ಅಧ್ಯಾಯ ಅಂತ ಕೋಪಿಸಿಕೊಂಡರು.

ಹಿರಿಯರಿಗೆ ಶೋಭೆ ತರಲ್ಲ

ರೋಷನ್ ಬೇಗ್ ಒಬ್ಬ ಹಿರಿಯ ನಾಯಕ.ಈ ರೀತಿ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಅವರು ಏನೇ ಮಾತನಾಡುವುದಿದ್ದರು ಪಕ್ಷದ ವೇದಿಕೆಯಲ್ಲಿ ಮಾತನಾಡಬಹುದಿತ್ತು. ಒಬ್ಬ ಪ್ರಬುದ್ಧ ರಾಜಕಾರಣಿ ಈ ರೀತಿ ಮಾತನಾಡುವುದಿಲ್ಲ. ಅವರ ಮಾತಿನ ಹಿಂದಿನ ಉದ್ದೇಶ ಏನಿತ್ತೋ ನನಗೆ ಅರ್ಥ ಆಗ್ತಿಲ್ಲ. ಎಲ್ಲಾ ಅಧಿಕಾರವನ್ನು ಅನುಭವಿಸಿದವರು ಇಷ್ಟು ಕೆಳ ಮಟ್ಟಕ್ಕೆ ಇಳಿಯಬೇಕಿರಲಿಲ್ಲ. ಎಕ್ಸಿಟ್ ಪೋಲ್ ಫಲಿತಾಂಶ ರೋಷನ್ ಬೇಗ್ ಗೆ ಖುಷಿ ತಂದಿರಬೇಕು ಎಂದು ದಿನೇಶ್‍ ವಿವರಿಸಿದರು.

ಪಕ್ಷದ ಚೌಕಟ್ಟಲ್ಲಿ ಹೇಳಬಹುದಿತ್ತು

ಯಾವುದೇ ವಿಚಾರಗಳಿದ್ದರೆ ಅದನ್ನು ಪಕ್ಷದ ಚೌಕಟ್ಟಿನೊಳಗೆ ಹೇಳಬಹುದಿತ್ತು. ಅವರಿಗೆ ಯಾಕೆ ಇಷ್ಟು ತರಾತುರಿ, ಯಾಕಷ್ಟು ಆತುರ ಅರ್ಥವಾಗ್ತಿಲ್ಲ. ಪ್ರಬುದ್ದ, ನಿಸ್ವಾರ್ಥ, ನಿಷ್ಟೆ ಇರುವ ರಾಜಕಾರಣಿ ಈ ತರಹ ಮಾತಾಡೋದಿಲ್ಲ. ಪ್ರಾಮಾಣಿಕತೆ, ಬದ್ದತೆ ಇರುವ ರಾಜಕಾರಣಿ ಈ ನಾಗರೀಕತೆ ಸುಸಂಸ್ಕೃತ ರಾಜಕಾರಣಿ ರೋಷನ್ ಬೇಗ್ ತರಹ ಮಾತನಾಡೋದಿಲ್ಲ. ರೋಷನ್ ಬೇಗ್ ಎಲ್ಲ ಸ್ಥಾನ ಮಾನ ಗಳಿಸಿರತಕ್ಕಂತವರು. ಪಕ್ಷ ಅಂದ್ರೆ ನಾವೆಲ್ಲ ತಾಯಿ ಸಮಾನ ಅಂದುಕೊಂಡವರು. ಮಂತ್ರಿ ಆಗಬೇಕು ಅಧಿಕಾರದ ಹಿಂದೆ ಹೋಗಬೇಕು ಅನ್ನುವ ಸಣ್ಣತನವನ್ನಂತು ನಾನು ಮಾಡಿಲ್ಲ. ನನ್ನ ಮೇಲೂ ಅಟ್ಯಾಕ್ ಮಾಡಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಸಣ್ಣ ತನದ ರಾಜಕೀಯ ನಾನು ಮಾಡಲ್ಲ. ಪಕ್ಷಕ್ಕೆ ತೊಂದರೆ, ಮುಜುಗರ ಕೊಡುವ ಹೇಳಿಕೆ ನಾನ್ಯಾವತ್ತೂ ಕೊಡಲ್ಲ ಎಂದು ಹೇಳಿದರು.

ಎಲ್ಲರಿಗೂ ಅಸಮಾಧಾನ ಇರುತ್ತೆ. ಇಂತಹ ಹೇಳಿಕೆ ಒಳ್ಳೆಯ ಬೆಳವಣಿಗೆ ಅಲ್ಲ. ಪಕ್ಷದ ಹಿತದೃಷ್ಟಿಯಿಂದ ಏನು ತೀರ್ಮಾನ ಮಾಡಬೇಕೋ ಮಾಡ್ತೀವಿ. ನಾವು ಯಾರನ್ನು ಕೂಡಿಹಾಕೋಕೆ, ಕಟ್ಟಿಹಾಕೋಕೆ ಆಗಲ್ಲ. ಬಿಜೆಪಿ ಬರುತ್ತೆ ಅಂತ ರೋಷನ್ ಬೇಗ್ ಗೆ ಯಾಕೆ ಖುಷಿಯೋ ಗೊತ್ತಿಲ್ಲ. ನಮಗೆ ಪಕ್ಷ, ಸಂಘಟನೆ ಮುಖ್ಯ. ನಮ್ಮ ಸ್ವಾರ್ಥಕ್ಕೆ ಪಕ್ಷ ಬಲಿ ಕೊಡಲು ಆಗಲ್ಲ. ಎಕ್ಸಿಟ್ ಪೋಲ್ ನಾವು ನಂಬಲ್ಲ. ರಿಸಲ್ಟ್ ಬೇರೆ ರೀತಿ ಬರುತ್ತೆ ಎಂದು ಅಭಿಪ್ರಾಯಪಟ್ಟರು.

ಸಿಎಂ, ದೇವೇಗೌಡರು ನೋಡಿಕೊಳ್ತಾರೆ

ರೋಷನ್ ಬೇಗ್ ರನ್ನ ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್, ವಿಶ್ವನಾಥ್ ಬಗ್ಗೆ ನಾನು ಕಮೆಂಟ್ ಮಾಡೋದಕ್ಕೆ ನಾನು ಹೋಗಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷರ ಹೇಳಿಕೆ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ ನೋಡಿಕೊಳ್ತಾರೆ ಎಂದರು.

Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.