ಬೆಂಗಳೂರು : ಸಚಿವ ಸ್ಥಾನ ನೀಡುವುದು ಬಿಡುವುದು ಪಕ್ಷದ ಹೈಕಮಾಂಡ್ಗೆ ಬಿಟ್ಟ ವಿಚಾರವಾಗಿದೆ. ಇದೀಗ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸುವ ಕಡೆ ಮಾತ್ರ ನಮ್ಮ ಚಿತ್ತ ಇದೆ ಎಂದು ಶಾಸಕ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನನಗೆ ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ನಾನು ಈವರೆಗೆ ಸಚಿವ ಸ್ಥಾನವನ್ನು ಕೊಡಿ ಎಂದು ಕೇಳಿಯೂ ಇಲ್ಲ. ಅವರು ಕೊಡುವುದಾಗಿ ಹೇಳಿಯೂ ಇಲ್ಲ. ನಾನು ಪ್ರಣಾಳಿಕೆ ಸಮಿತಿಯಲ್ಲಿ ಉಪಾಧ್ಯಕ್ಷನಾಗಿರುವುದರಿಂದ ಮೊದಲು ನಾವು ಕೊಟ್ಟ ಐದು ಗ್ಯಾರಂಟಿಯನ್ನು ಈಡೇರಿಸುವುದು ನಮ್ಮ ಕರ್ತವ್ಯ. ಅದನ್ನು ಮಾಡುವ ನಿಟ್ಟಿನಲ್ಲಿ ನಾವು ಮುಂದುವರೆಯುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ : ಕಲಬುರಗಿ ಜಿಲ್ಲೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಿ: ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ
ಇನ್ನು ಇದೆ ವೇಳೆ ಮಾತನಾಡಿದ ಶಾಸಕ ರಂಗನಾಥ್ ಅವರು, ಬಹಳ ವರ್ಷಗಳ ನಂತರ ರಾಜ್ಯದಲ್ಲಿ ನಡೆದ ಈ ಬಾರಿಯ ವಿಧಾನಸಭಾ ಚವುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮಹಿಳೆಯರ, ಬಡವರ, ಕೂಲಿ ಕಾರ್ಮಿಕರ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತೇವೆ.
ಈ ವಿಚಾರವಾಗಿ ಅಭಿವೃದ್ದಿ ಕಡೆ ನಮ್ಮ ಗಮನವಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಂತ್ರಿ ಸಿದ್ದರಾಮಯ್ಯ ನವರ ಶ್ರಮದಿಂದ ಸರ್ಕಾರ ಬಂದಿದೆ. ಉತ್ತಮ ಕೆಲಸ ಮಾಡುವ ಕಡೆ ನಮ್ಮ ಗಮನವಿದೆ. ಈ ವಿಚಾರವಾಗಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು.
ಸಹೋದರ ಸವಾಲ್, ಗೆದ್ದು ಬಂದ ಮಧು ಬಂಗಾರಪ್ಪ : ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಕುಟುಂಬ ಭಿನ್ನ ಪಕ್ಷಗಳಲ್ಲಿ ಗುರುತಿಸಿಕೊಂಡಿದೆ. ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ 2004 ರಿಂದಲೂ ಅಧಿಕಾರಕ್ಕಾಗಿ ಸೆಣಸಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಇಬ್ಬರೂ ಪ್ರತ್ಯೇಕವಾಗಿ ಒಬ್ಬರ ವಿರುದ್ಧ ಒಬ್ಬರು ಚುನಾವಣಾ ಅಖಾಡದಲ್ಲಿದ್ದರು. ಈ ಬಾರಿಯ ಚುನಾವಣೆಯಲ್ಲೂ ಪ್ರತಿಸ್ಪರ್ಧಿಗಳಾಗಿದ್ದು, ಪಕ್ಷಗಳು ಬೇರೆಯಾಗಿತ್ತು.
ಇದನ್ನೂ ಓದಿ : ಖಾಸಗಿ ಕಂಪನಿಗಳು ಹಾಗೂ ಹೆಚ್ಎಎಲ್ನಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡದಿದ್ದರೆ ಲೈಸೆನ್ಸ್ ರದ್ದು: ಸಚಿವ ಪರಮೇಶ್ವರ್
ಕುಮಾರ್ ಬಿಜೆಪಿಯಿಂದ, ಮಧು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದರು. ಆದರೇ ಸೊರಬ ಕ್ಷೇತ್ರದ ಮತದಾರರು ಮಧು ಬಂಗಾರಪ್ಪ ಅವರನ್ನು 20,621 ಮತಗಳ ಅಂತರದಿಂದ ಗೆಲ್ಲುವಂತೆ ಆಶೀರ್ವಾದಿಸಿದರು. ಈ ಹಿಂದೆ ನಡೆದ ಅಣ್ಣ-ತಮ್ಮಂದಿರ ನಡುವಿನ ಎರಡೂ ಚುನಾವಣೆಯಲ್ಲಿ ಕುಮಾರ ಬಂಗಾರಪ್ಪ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ : ತಂದೆ ಬಿಎಸ್ವೈ ಆಶೀರ್ವಾದ ಪಡೆದು ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲೇರಿದ ವಿಜಯೇಂದ್ರ