ETV Bharat / state

ಕೊರೊನಾ ಲಸಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ನೀಡಿದ ಸಲಹೆ ಏನು?

ಪ್ರಧಾನಿ ಮೋದಿ ಅವರು ಲಸಿಕೆ ಹಂಚಿಕೆ ಸಂಬಂಧಪಟ್ಟಂತೆ ನಡೆಸಿದ ಸರ್ವಪಕ್ಷಗಳ ವರ್ಚುವಲ್ ಸಭೆಯಲ್ಲಿ ದೇವೇಗೌಡರು ನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಜೊತೆಗೆ ನಾಲ್ಕು ಸಲಹೆಗಳನ್ನು ನೀಡಿದ್ದಾರೆ.

deve-gowda
ಮಾಜಿ ಪ್ರಧಾನಿ ದೇವೇಗೌಡರು
author img

By

Published : Dec 4, 2020, 4:15 PM IST

ಬೆಂಗಳೂರು : ಕೊರೊನಾ ಲಸಿಕೆಯನ್ನು ಗ್ರಾಮ ಪಂಚಾಯತ್‌ ಮಟ್ಟಕ್ಕೆ ತಲುಪಿಸಲು ವ್ಯವಸ್ಥಿತವಾದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಕಾರ್ಯಕರ್ತರ ತಂಡವನ್ನು ರಚಿಸುವಂತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ಲಸಿಕೆ ಹಂಚಿಕೆ ಸಂಬಂಧಪಟ್ಟಂತೆ ನಡೆಸಿದ ಸರ್ವಪಕ್ಷಗಳ ವರ್ಚುವಲ್ ಸಭೆಯಲ್ಲಿ ದೇವೇಗೌಡರು ನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಜೊತೆಗೆ ನಾಲ್ಕು ಸಲಹೆಗಳನ್ನು ನೀಡಿದ್ದಾರೆ.

ಭಾರತದಲ್ಲಿ ಲಸಿಕೆ ಸಂಗ್ರಹ ಮತ್ತು ಸಾಗಾಣಿಕೆ ದೊಡ್ಡ ಸವಾಲಾಗಿದೆ. ಈ ವಿಷಯವಾಗಿ ನೇರವಾಗಿ ಪ್ರಧಾನಿ ಕಚೇರಿಯೊಂದಿಗೆ ಸಂಪರ್ಕ ಹೊಂದಿರುವ ಉನ್ನತಮಟ್ಟದ ತಂಡವೊಂದನ್ನು ರಚಿಸಬೇಕು. ಜೊತೆಗೆ ಗ್ರಾಮ ಪಂಚಾಯಿತಿ ಮಟ್ಟದವರೆಗೂ ಸಂಪರ್ಕ ಹೊಂದಿರುವ ಸರ್ಕಾರದ ಯೋಜಿತ ಜಾಲವೊಂದನ್ನು ಸೃಷ್ಟಿಸಬೇಕೆಂದು ಸಲಹೆ ಮಾಡಿದ್ದಾರೆ.

ಕೊರೊನಾ ಲಸಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಂದ ಸಲಹೆ

ಲಸಿಕೆಯನ್ನು ದೀರ್ಘ ಕಾಲ ಸಂರಕ್ಷಿಸಿಡಲು ದೊಡ್ಡ ಪ್ರಮಾಣದ ಶೈತ್ಯಾಗಾರಗಳ ಅಗತ್ಯವಿದೆ. ಈ ಸವಾಲನ್ನು ಎದುರಿಸಲು ಪ್ರಧಾನಿ ಮೋದಿ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿಎಸ್)ಯ ಸಲಹೆ ಪಡೆಯಬೇಕು. ಸಾಮಾನ್ಯ ಕೊಠಡಿಗಳನ್ನು ಶೈಥಲೀಗಾರಗಳನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂದು ಹೇಳಿದ್ದಾರೆ.

ಲಸಿಕೆಯ ದರ ಜನ ಸಾಮಾನ್ಯರ ಕೈಗೆಟುಕುವಂತಿರಬೇಕು. ಸರ್ಕಾರ ದುರ್ಬಲ ವರ್ಗದವರಿಗೆ ಉಚಿತವಾಗಿ ಲಸಿಕೆ ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಬೇಕು. ಲಸಿಕೆಯ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆಯೇ ಅಥವಾ ರಾಜ್ಯ ಸರ್ಕಾರದ ಪಾಲು ಇದೆಯೇ ಎಂದು ಪ್ರಶ್ನಿಸಿರುವ ದೇವೇಗೌಡರು, ವಿದೇಶದಿಂದ ನಾವು ಲಸಿಕೆಯನ್ನು ಖರೀದಿ ಮಾಡುತ್ತಿದ್ದೇವೆ. ನಮ್ಮಲ್ಲಿಯೇ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಸಾಮರ್ಥ್ಯವಿಲ್ಲವೇ? ಮೂರನೇ ಹಂತದ ಪ್ರಯೋಗಕ್ಕೆ ಒಳಗಾದ ಲಸಿಕೆ ಸುರಕ್ಷಿತವಾಗಿರುತ್ತದೆಯೇ ಮತ್ತು ಅದರ ಸಾಮರ್ಥ್ಯ ನಂಬಲರ್ಹವೇ ಎಂದು ಪ್ರಶ್ನಿಸಿದ್ದಾರೆ.

ಮೊದಲ ಹಂತದಲ್ಲಿ ಎಷ್ಟು ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಪ್ರಶ್ನಿಸಿರುವ ಅವರು, ಅನಪೇಕ್ಷಿಯವಾಗಿ ಸೃಷ್ಟಿಯಾದ ಕೋವಿಡ್ ಸಂಕಷ್ಟವನ್ನು ಶೀಘ್ರ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತಷ್ಟು ಕ್ರಮ ತೆಗೆದುಕೊಳ್ಳುವಂತೆ ಗೌಡರು ಸಲಹೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.