ಬೆಂಗಳೂರು: ಸಿಎಂ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿನ ದೇವರಾಜ್ ಅರಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ದೇವರಾಜ್ ಅರಸರ 104ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ದೇವರಾಜ್ ಅರಸರ ಪ್ರತಿಮೆ ಗೆ ಸಿಎಂ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಆರ್.ಅಶೋಕ್, ಅಶ್ವಥ್ ನಾರಾಯಣ್, ಹರತಾಳು ಹಾಲಪ್ಪ, ಬಸವರಾಜ್ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಮೇಯರ್ ಗಂಗಾಂಬಿಕೆ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ದೇವರಾಜ್ ಅರಸರು ಅವರು ನಾಡು ಕಂಡ ಧೀಮಂತ, ಮೇಧಾವಿ ರಾಜಕಾರಣಿ. ಹಿಂದುಳಿದ ವರ್ಗಗಳ ಪರವಾಗಿ ಕಾಳಜಿ ಹೊಂದಿದವರಾಗಿದ್ದರು. ಅವರು ಸಾಮಾಜಕ್ಕೆ ಮಾಡಿರುವ ಕಾರ್ಯಗಳು ಅಚ್ಚಳಿಯದೆ ಉಳಿದಿದೆ ಎಂದು ಸ್ಮರಿಸಿದರು.
ಪ್ರಮುಖವಾಗಿ ಭೂ ಸುಧಾರಣಾ ಕಾಯ್ದೆ , ಕರ್ನಾಟಕ ಋಣಮುಕ್ತ ಕಾಯ್ದೆಯಂತಹ ಬಡವರ ಪರವಾದ ಯೋಜನೆಗನ್ನು ಜಾರಿಗೆ ತಂದಿದ್ದರು. ಅವರು ಈ ನಾಡಿಗೆ ಕೊಟ್ಟಂತಹ ಸೇವೆ, ಕಾರ್ಯಕ್ರಮಗಳು ಯಾರೂ ಮರೆಯುವ ಹಾಗಿಲ್ಲ ಎಂದರು.
ಆದರೆ, ಹಲವಾರು ಸಚಿವಾಕಾಂಕ್ಷಿಗಳು ಅಸಮಾಧಾನ ಗೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಲು ಸಿಎಂ ನಿರಾಕರಿಸಿದರು.