ETV Bharat / state

ಡ್ರಗ್ಸ್​ ಪೆಡ್ಲಿಂಗ್ ಆರೋಪ: ಬೆಂಗಳೂರಲ್ಲಿ ಇಬ್ಬರು ಉದ್ಯಮಿಗಳು ಅರೆಸ್ಟ್​ - ಬೆಂಗಳೂರು ಅಪ್ಡೇಟ್‌

ಡ್ರಗ್ಸ್​ ಪೆಡ್ಲಿಂಗ್​ ಆರೋಪದಡಿ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಕಾರಿನಲ್ಲಿ ಗಾಂಜಾ ಸೇವನೆ ಮಾಡುವಾಗ ಪೊಲೀಸರ ಕೈಗೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ‌.

Detention of two businessmen involved in drug peddling
ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಇಬ್ಬರು ಉದ್ಯಮಿಗಳ ಬಂಧನ
author img

By

Published : Oct 4, 2020, 9:45 AM IST

ಬೆಂಗಳೂರು: ಸ್ಯಾಂಡಲ್ ವುಡ್​ ಡ್ರಗ್ಸ್​ ಮಾಫಿಯಾ ಆರೋಪ ಪ್ರಕರಣ ಸಂಬಂಧ ಒಂದೆಡೆ ಸಿಸಿಬಿ ಪೊಲೀಸರು ಡ್ರಗ್ಸ್​​ ಮಾಫಿಯಾದಲ್ಲಿ ತೊಡಗಿದವರಿಗೆ ತಲಾಷ್ ನಡೆಸುತ್ತಿದ್ದಾರೆ. ಇತ್ತ ಸಂಜಯ್ ನಗರ ಪೊಲೀಸರು ಡ್ರಗ್ಸ್​ ಪೆಡ್ಲಿಂಗ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ವರುಣ್ ಹಾಗೂ ವಿನೋದ್ ಬಂಧಿತ ಆರೋಪಿಗಳು. ಈ ಆರೋಪಿಗಳು ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಕಾರಿನಲ್ಲಿ ಗಾಂಜಾ ಸೇವನೆ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ‌. ಆರೋಪಿಗಳನ್ನ ಸ್ಥಳೀಯರ ಮಾಹಿತಿ ಮೇರೆಗೆ ವಶಕ್ಕೆ ಪಡೆದು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದಾಗ ಡಾಲರ್ಸ್ ಕಾಲೋನಿಯ ಅಪಾರ್ಟ್ಮೆಂಟ್ ಬಳಿ ಉದ್ಯಮಿಗಳ ಜೊತೆ ಗಾಂಜಾ ಸೇವನೆ ಮಾಡುತ್ತಿದ್ದ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.

Detention of two businessmen involved in drug peddling
ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಇಬ್ಬರು ಉದ್ಯಮಿಗಳ ಬಂಧನ

ಇಷ್ಟು ಮಾತ್ರವಲ್ಲದೇ ಪೇಜ್ 3 ಪಾರ್ಟಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿರುವುದಾಗಿ ಹೇಳಿದ್ದಾರೆ. ಹೆಚ್ವಿನ ಅನುಮಾನದ ಮೇರೆಗೆ ಉದ್ಯಮಿಗಳ‌ ಮೊಬೈಲ್ ವಶಕ್ಕೆ ಪಡೆದು ತನಿಖೆ ಮಾಡಿದಾಗ ಬಹಳಷ್ಟು ವಿಚಾರ ಬಯಲಾಗಿದೆ ಎನ್ನಲಾಗ್ತಿದೆ. ಬಂಧನ ಆಗಿರುವ ಆರೋಪಿಗಳಿಗೆ ನಟ, ನಟಿಯರ ಸಂಪರ್ಕ ಇರುವ ಬಗ್ಗೆ ಪರಿಶೀಲನೆಯಲ್ಲಿ ಪೊಲೀಸರು ನಿರತರಾಗಿದ್ದಾರೆ.

ಇನ್ನು ಬಂಧಿತ ಆರೋಪಿಗಳಿಬ್ಬರು ಉದ್ಯಮಿಗಳಾಗಿದ್ದು, ಬಹಳಷ್ಟು ಪೇಜ್ 3 ಪಾರ್ಟಿಗಳಿಗೆ ಡ್ರಗ್ಸ್​​ ಪೂರೈಸುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಈ ಪಾರ್ಟಿಯಲ್ಲಿ ಹಲವು ನಟ ನಟಿಯರು, ರಾಜಕಾರಣಿಗಳ ಮಕ್ಕಳು ಸೇರುವ ಕಾರಣ, ಸದ್ಯ ಪೊಲೀಸರು ಆರೋಪಿಗಳನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.