ಬೆಂಗಳೂರು: ಗೋವಾಕ್ಕೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಆರೋಪದಡಿ ನಗರದ ಅಪಾರ್ಟ್ಮೆಂಟ್ವೊಂದರ ಮೇಲೆ ಕೇಂದ್ರ ಮಾದಕ ದ್ರವ್ಯ ನಿಗ್ರಹ ದಳ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
![Detention of Drugs Supply three arrested in Bangalore](https://etvbharatimages.akamaized.net/etvbharat/prod-images/5676317_drugs.jpg)
ಸಂಜಯನಗರದ ಅಪಾರ್ಟ್ಮೆಂಟ್ವೊಂದರ ಮೇಲೆ ದಾಳಿ ನಡೆಸಿ ಮುಹಾದ್ ಮುಸೀನ್, ಆಸೀಫ್ ಪತನ್, ಎಂ.ಡಿ.ಅಜರುದ್ದೀನ್ ಬಂಧಿತ ಆರೋಪಿಗಳು. ಇವರು ಅಪಾರ್ಟ್ಮೆಂಟ್ನಲ್ಲಿ ವಿವಿಧ ಮಾದರಿಯ ಡ್ರಗ್ಸ್ಗಳನ್ನು ಸಂಗ್ರಹಿಸಿಟ್ಟು, ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಮಾರಾಟ ಮಾಡುತ್ತಿದ್ದರು. ಅಲ್ಲದೇ ಹೆಚ್ಚಾಗಿ ಪಾರ್ಟಿಗಳಲ್ಲಿ ತೊಡಗಿಸುವಕೊಳ್ಳುವವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಇವರು ಗೋವಾಕ್ಕೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು. ಮನೆಯಲ್ಲಿ ಅಡಗಿಸಿಟ್ಟಿದ್ದ 1.5 ಕೆ.ಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಎನ್ಡಿಪಿಎಸ್ ನ್ಯಾಯಾಲಯಕ್ಕೆ ಹಾಜರುಪಡಿಸಿ 6 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.