ETV Bharat / state

ಆರ್​​ಎಸ್​​ಎಸ್, ರಾಮಮಂದಿರ ವಿರುದ್ಧ ಅವಹೇಳನಕಾರಿ ಹೇಳಿಕೆ: ಕ್ಷಮೆಯಾಚಿಸಿದ ಸೋಮಶೇಖರ್​ - ಕ್ಷಮೆಯಾಚಿಸಿದ ಸೋಮಶೇಖರ್​

ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸೋಮಶೇಖರ್ ಗೌಡ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪ ಕೇಳಿ ಬಂದಿದೆ. ಇದನ್ನು ಖಂಡಿಸಿ ನಿನ್ನೆ ನೂರಾರು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಅವರು ಕ್ಷಮೆ ಯಾಚಿಸಿದ್ದಾರೆ.

ಕ್ಷಮೆಯಾಚಿಸಿದ ಸೋಮಶೇಖರ್​
Somashekhar apologized
author img

By

Published : Dec 19, 2020, 11:45 AM IST

ಬೆಂಗಳೂರು: ಆರ್​​ಎಸ್​​ಎಸ್ ಮತ್ತು ರಾಮಮಂದಿರದ ವಿರುದ್ಧ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸೋಮಶೇಖರ್ ಗೌಡ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪ ಕೇಳಿ ಬಂದಿತ್ತು. ಈ ಕುರಿತಂತೆ ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಸೋಮಶೇಖರ್​​ ಕ್ಷಮೆ ಯಾಚಿಸಿದ್ದಾರೆ.

ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ

'ಆರ್​ಎಸ್​​ಎಸ್ ರಾಷ್ಟ್ರ ಸರ್ವನಾಶ ಸಮಿತಿ, ಭಿಕ್ಷೆ ಬೇಡಿ ರಾಮಮಂದಿರ ಕಟ್ಟುತ್ತಿದ್ದಾರೆ' ಎಂದೆಲ್ಲಾ ಸೋಮಶೇಖರ್ ಹೇಳಿರುವ ವಿಡಿಯೋ ಕೆಲದಿನಗಳ ಹಿಂದೆ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ, ಹಿಂದೂ ಧರ್ಮದ ಶಾಲಿನ ಮೇಲೆ ಕಾಲಿಟ್ಟು ಅವರು ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಸಂಬಂಧ ನಿನ್ನೆ ರಾತ್ರಿ ನಗರದ ನಂದಿನಿ ಲೇಔಟ್ ಪೊಲೀಸ್ ಠಾಣೆ ಮುಂದೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ರಾಷ್ಟ್ರ ರಕ್ಷಣಾ ಸಮಿತಿ ಹಾಗೂ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿತ್ತು.

ಓದಿ: ಗ್ರಾ.ಪಂ. ಚುನಾವಣೆ ಅಖಾಡಕ್ಕಿಳಿದ ಮಾಜಿ ಸಚಿವರ ಪುತ್ರಿಯರು

ನೂರಾರು ಹಿಂದೂ ಕಾರ್ಯಕರ್ತರು ಸೋಮಶೇಖರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ಘಟನೆಯ ಸತ್ಯಾಸತ್ಯತೆ ಪರಿಶೀಲಿಸಿ ರಾಜಿ ಸಂಧಾನ ಮಾಡಿಸಿದ್ದರು.

ಕ್ಷಮೆ ಯಾಚಿಸಿದ ಸೋಮಶೇಖರ್​

ಕ್ಷಮೆ ಯಾಚಿಸಿದ ಸೋಮಶೇಖರ್​

'ಹಿಂದೂ ಧರ್ಮದ ಶಾಲಿನ ಮೇಲೆ ಕಾಲಿಟ್ಟದ್ದು, ಫೇಸ್​ಬುಕ್​ನಲ್ಲಿ ರಾಮನ ಕುರಿತಾಗಿ ಪೋಸ್ಟರ್​ ಹಾಕಿದ್ದ ವಿಚಾರ ಹಾಗೂ ಆರ್​ಎಸ್​ಎಸ್​ ಕುರಿತಾಗಿ ಹೇಳಿಕೆ ನೀಡಿರುವ ಬಗ್ಗೆ ನಾನು ಜನರಲ್ಲಿ ಕ್ಷಮೆ ಕೇಳುತ್ತೇನೆ. ನಾನೊಬ್ಬ ಹಿಂದೂ ಪರಿಪಾಲಕನಾಗಿ ಸಮಸ್ತ ನಾಡಿನ ಜನತೆಯಲ್ಲಿ ಕ್ಷಮೆಯಾಚನೆ ಮಾಡುತ್ತಿದ್ದೇನೆ' ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.