ETV Bharat / state

ಡೆಂಗ್ಯೂ ದೃಢ: ವಿಶ್ರಾಂತಿ ಮೊರೆ ಹೋದ ಪ್ರಿಯಾಂಕ್ ಖರ್ಗೆ - ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ

ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಅವರಿಗೆ ಡೆಂಗ್ಯೂ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

priyank kharge
ಪ್ರಿಯಾಂಕ್ ಖರ್ಗೆ
author img

By

Published : Dec 4, 2022, 9:22 AM IST

ಬೆಂಗಳೂರು: ಮಾಜಿ ಸಚಿವ ಪ್ರಿಯಾಂಕ್​ ಖರ್ಗೆಗೆ ಡೆಂಗ್ಯೂ ಜ್ವರ ದೃಢಪಟ್ಟಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. 'ಕಳೆದ ಮೂರು ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದು ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ. ನಿನ್ನೆ ಬಂದಿರುವ ವರದಿಯ ಅನುಸಾರ ಡೆಂಗ್ಯೂ ಸೋಂಕು ಕಂಡುಬಂದಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

'ಕಳೆದ ಮೂರು ದಿನಗಳಿಂದ ನಾನು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು, ಜನರನ್ನು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಅದಕ್ಕೆ ಕ್ಷಮೆಯಿರಲಿ. ನಾನು ವೈದ್ಯಕೀಯ ಆರೈಕೆಯಲ್ಲಿದ್ದೇನೆ. ಇನ್ನು ಕೆಲವು ದಿನಗಳ ಕಾಲ ಯಾರ ಭೇಟಿಗೂ ಸಿಗಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ತಮ್ಮೆಲ್ಲರ ಸಹನೆ ಮತ್ತು ಸಹಕಾರ ಸದಾ ನನ್ನೊಂದಿಗಿರಲೆೆಂದು ವಿನಂತಿಸಿಕೊಳ್ಳುತ್ತೇನೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸರ್ಕಾರದ ಗೋಮಾತೆ ಮೇಲಿನ ಪ್ರೀತಿ ಕೇವಲ ಕಾನೂನು ಜಾರಿಗೆ ಸೀಮಿತ: ಪ್ರಿಯಾಂಕ್​ ಖರ್ಗೆ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.