ETV Bharat / state

ಸ್ವಂತ ತಮ್ಮನ ಕೊಲೆಗೆ ಸುಪಾರಿ ಕೊಟ್ಟ ಅಕ್ಕ... ರೌಡಿ ಶೀಟರ್​ ಪತ್ನಿ 24 ಗಂಟೆಗಳಲ್ಲೇ ಅಂದರ್​

ಮೇ‌ 29ರಂದು ಹಾಡಹಗಲೇ ಮಾರಕಾಸ್ತ್ರಗಳಿಂದ ಮನಬಂದಂತೆ‌ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ಬಿ. ರಾಮಕೃಷ್ಣ ರೆಡ್ಡಿ ನೇತೃತ್ವದ ತಂಡ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಪಾರಿ ಕೊಟ್ಟ ಅಕ್ಕ
ಸುಪಾರಿ ಕೊಟ್ಟ ಅಕ್ಕ
author img

By

Published : Jun 3, 2020, 5:36 PM IST

ಬೆಂಗಳೂರು: ಜೈಲಿನಲ್ಲಿರುವ ಗಂಡನನ್ನು ಜಾಮೀನಿನ‌ ಮೇಲೆ ಬಿಡಿಸಲು ಹಣ ಕೊಟ್ಟಿಲ್ಲವೆಂದು, ಸ್ವಂತ ತಮ್ಮನ ಕೊಲೆಗೆ ಸುಪಾರಿ ನೀಡಿದ್ದ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ನಗರದ ದೊಡ್ಡಗುಬ್ಬಿ ನಿವಾಸಿ ಸುಮಲತಾ ಕೊಲೆಗೆ ಸುಪಾರಿ ನೀಡಿದವಳು ಹಾಗೂ ಮಂಜು, ಗೌತಮ್, ವಿನಯ್ ನಾಯಕ್ ಹಾಗೂ ಮೌಲಾ ಅಲಿಖಾನ್ ಸುಪಾರಿ ಪಡೆದಿದ್ದ ಆರೋಪಿಗಳು. ತಮ್ಮ ಸಂದೀಪ್ ರೆಡ್ಡಿ ಅಕ್ಕನ ಕೊಲೆ ಪ್ಲಾನ್​ ನಿಂದ ತಪ್ಪಿಸಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಈತ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Demanding for money
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ

ಮೇ‌ 29ರಂದು ಹಾಡಹಗಲೇ ಮಾರಕಾಸ್ತ್ರಗಳಿಂದ ಮನಬಂದಂತೆ‌ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ಬಿ. ರಾಮಕೃಷ್ಣ ರೆಡ್ಡಿ ನೇತೃತ್ವದ ತಂಡ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಗೇಪಲ್ಲಿ ಮೂಲದ ಸಂದೀಪ್ ರೆಡ್ಡಿ ಯಲಹಂಕ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಯಿ ಜೊತೆಗೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಜೀವನ ಸಾಗಿಸಲು ಹೂವಿನ ವ್ಯಾಪಾರ ಮಾಡುತ್ತಿದ್ದ. ಈ ಮಧ್ಯೆ ಆತನ ಅಕ್ಕ ಸುಮಲತಾ ಗಂಡನ ಬಿಡುಗಡೆಗಾಗಿ ಆಸ್ತಿಯಲ್ಲಿ ಪಾಲು ಕೇಳಿ ಜಗಳ ಮಾಡಿದ್ದಾಳೆ. ಇದನ್ನು ನೀಡಲು ನಿರಾಕರಿಸಿದ ತಮ್ಮನಿಗೆ ಅಕ್ಕ‌ ಕೊಲೆಗೆ ಸುಪಾರಿ ನೀಡಿರುವುದಾಗಿ ತಿಳಿದುಬಂದಿದೆ.

ನಗರದ ಕುಖ್ಯಾತ ರೌಡಿಶೀಟರ್ ಈಕೆಯ ಗಂಡ

ನಗರದ ಕುಖ್ಯಾತ ರೌಡಿಶೀಟರ್ ಕ್ಯಾಟ್ ರಾಜ ಹಾಗೂ ಮಹಿಳಾ ಆರೋಪಿ ಸುಮಲತಾ ಇಬ್ಬರು ದಂಪತಿಯಾಗಿದ್ದು, ಗಂಡನನ್ನು ಜಾಮೀನಿನ‌ ಮೇಲೆ ಹೊರತರಲು ಹಣದ ಅಭಾವ ಇದ್ದ ಕಾರಣ ಈ ಕೃತ್ಯ ಎಸಗಿದ್ದಾಳೆ. ಬೆಂಗಳೂರು ನಗರವೊಂದರಲ್ಲೇ ಕ್ಯಾಟ್ ರಾಜನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 28 ಪ್ರಕರಣಗಳಿವೆ. ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ದರೋಡೆ, ಸುಲಿಗೆ, ಕೊಲೆ, ಕೊಲೆ ಯತ್ನದಂತಹ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.