ಬೆಂಗಳೂರು : ಕೋವಿಡ್ ಒಂದನೇ ಅಲೆಯ ಹೊಡೆತದಿಂದ ಈಗಾಗಲೇ ನಮ್ಮ ಹೋಟೆಲ್ ಉದ್ಯಮ ತತ್ತರಿಸಿ ಹೋಗಿದೆ. ಈಗ ಎರಡನೇ ಅಲೆಯಿಂದ ಮತ್ತೊಮ್ಮೆ ಉದ್ಯಮದ ಮೇಲೆ ಬಹುದೊಡ್ಡ ಹೊಡೆತ ಬೀಳಲಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಉದ್ಯಮಿಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಕಳವಳ ವ್ಯಕ್ತಪಡಿಸಿದ್ದಾರೆ.
ಹೋಟೆಲ್ ಉದ್ಯಮಿಗಳ ಆರ್ಥಿಕ ಸಂಕಷ್ಟ ದೂರ ಮಾಡಲು ಸಹಾಯ ಮಾಡುವಂತೆ ಅವರು ಸರ್ಕಾರವನ್ನು ಕೋರಿದ್ದು, ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವುಗಳು ಹೀಗಿವೆ.
1. ಆಸ್ತಿ ತೆರಿಗೆಯಲ್ಲಿ ಶೇ. 50 ವಿನಾಯಿತಿ
2. ವಿದ್ಯುಚ್ಛಕ್ತಿ ದರದ ಸ್ಥಿರ ದರಗಳಲ್ಲಿ ನಲ್ಲಿ ಶೇ. 50 ವಿನಾಯಿತಿ
3. ಲೈಸನ್ಸ್ ಶುಲ್ಕದಲ್ಲಿ ಶೇ. 50 ವಿನಾಯಿತಿ
4. ಸರ್ಕಾರದ ಇತರ ಇಲಾಖೆಗಳ ಪರವಾನಗಿಗಳಲ್ಲಿ ಶೇ. 50 ವಿನಾಯಿತಿ
5. ಕಟ್ಟಡ ಮಾಲೀಕರಿಗೂ ಬಾಡಿಗೆಯಲ್ಲಿ ಶೇ. 50 ಕಡಿಮೆ ಮಾಡಲು ಅಧಿಸೂಚನೆ ಹೊರಡಿಸಬೇಕು
6. ಹೋಟೆಲ್ ಉದ್ಯಮದ ಎಲ್ಲಾ ಕಾರ್ಮಿಕರಿಗೆ ತಕ್ಷಣ ಕೋವಿಡ್ ಲಸಿಕೆ ನೀಡಬೇಕು