ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಷ್ಟೇ ವೇತನವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಉದ್ಯೋಗಿಗಳಿಗೆ ನೀಡಬೇಕೆಂದು ಒತ್ತಾಯಿಸಿ ಬ್ಯಾಂಕ್ ನೌಕರರ ಸಂಘಗಳ ಸಂಯುಕ್ತ ಒಕ್ಕೂಟ ಬ್ಯಾಂಕ್ ದೇಶಾದ್ಯಂತ ಮುಷ್ಕರ ನಡೆಸುತ್ತಿದೆ.
ನಗರದಲ್ಲೂ ಬ್ಯಾಂಕ್ಗಳು ಮುಷ್ಕರ ನಡೆಸುತ್ತಿದ್ದು, ಜ.31, ಫೆಬ್ರುವರಿ 1 ಹಾಗೂ ಫೆ.2 ರಂದು ಬ್ಯಾಂಕ್ ಸೇವೆ ಜನರಿಗೆ ಲಭ್ಯ ಇರೋದಿಲ್ಲ. ಎಟಿಎಂ ಕಾರ್ಯ ನಿರ್ವಹಿಸಿದರೂ, ಮೂರು ದಿನಗಳ ಕಾಲ ಹಣ ಸಿಗೋದು ಅನುಮಾನ ಎನ್ನಲಾಗುತ್ತಿದೆ. ಇನ್ನು ವೇತನ ಹೆಚ್ಚಳ ಸೇರಿದಂತೆ ಇತರೆ ಬೇಡಿಕೆಗಳಿಗೆ ಆಗ್ರಹಿಸಿ, ನಗರದ ಬ್ಯಾಂಕ್ಗಳೂ ಕೂಡಾ ನಾಳೆಯಿಂದ ಬಂದ್ ಆಗಲಿವೆ. ಕೆನರಾ ಬ್ಯಾಂಕ್ ಟೌನ್ ಹಾಲ್ ಮುಂಭಾಗದ ಕೇಂದ್ರ ಕಚೇರಿಯ ಆವರಣದಲ್ಲೇ ಮುಷ್ಕರ ನಡೆಯಲಿದೆ ಎಂದು ಬ್ಯಾಂಕ್ ಸಂಘದ ಮ್ಯಾನೇಜರ್ ಜಿ.ಎಸ್. ರಾಧಾಕೃಷ್ಣ ತಿಳಿಸಿದ್ದಾರೆ.
ಇನ್ನು ನಗರದ ವಿವಿಧೆಡೆ ಪ್ರತಿಭಟನೆ, ಮುಷ್ಕರ ನಡೆಸಲು ಬ್ಯಾಂಕ್ ಉದ್ಯೋಗಿಗಳು ತೀರ್ಮಾನಿಸಿದ್ದಾರೆ. ಇನ್ನು ಬ್ಯಾಂಕ್ಗಳ ಮುಂಭಾಗದಲ್ಲಿ ಪ್ರತಿಭಟನೆ ಕುರಿತ ಮಾಹಿತಿಯ ನೋಟೀಸ್ ಅಂಟಿಸಲಾಗಿದೆ. ಅದರಂತೆ ಜ.31 ರಿಂದ ಫೆ. 1 ರವರೆಗೆ, ಬಳಿಕ ಮಾರ್ಚ್ 11 ರಿಂದ 13 ರ ವರೆಗೆ, ಹಾಗೂ ಎಪ್ರಿಲ್ ಒಂದರಿಂದ ಅನಿರ್ದಿಷ್ಟಾವಧಿಯ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಇನ್ನು 2017 ರಿಂದ ಈ ಬೇಡಿಕೆ ಇದ್ದು, ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸಲು ಬ್ಯಾಂಕ್ ನೌಕರರ ಸಂಘಗಳ ಸಂಯುಕ್ತ ಒಕ್ಕೂಟ ತೀರ್ಮಾನಿಸಿದೆ.