ETV Bharat / state

ಕೇಂದ್ರ ತಂಡದ ಅಧ್ಯಯನ ಪ್ರವಾಸದ ನಂತರ ಮತ್ತೊಮ್ಮೆ ಸಭೆ, ಪರಿಹಾರಕ್ಕೆ ಬೇಡಿಕೆ ಸಲ್ಲಿಕೆ: ಸಿಎಂ

ರಾಜ್ಯದಲ್ಲಿ ಉಂಟಾದ ಮಳೆಹಾನಿ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಲಾಗಿದೆ. ಈ ಅಧ್ಯಯನ ತಂಡ ಮಳೆಹಾನಿ ಬಗ್ಗೆ ಪರಿಶೀಲನೆ ನಡೆಸಿದ ನಂತರ ನಷ್ಟ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಾಗವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

demand-for-compensation-is-submitted-after-central-team-visit-says-bommai
ಕೇಂದ್ರ ತಂಡದ ಅಧ್ಯಯನ ಪ್ರವಾಸದ ನಂತರ ಮತ್ತೊಮ್ಮೆ ಸಭೆ, ಪರಿಹಾರಕ್ಕೆ ಬೇಡಿಕೆ ಸಲ್ಲಿಕೆ: ಸಿಎಂ
author img

By

Published : Sep 7, 2022, 3:16 PM IST

ಬೆಂಗಳೂರು : ನಗರ ಸೇರಿದಂತೆ ರಾಜ್ಯದಲ್ಲಿ ಉಂಟಾದ ಮಳೆಹಾನಿ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ವಿಸ್ತೃತ ಮಾಹಿತಿ ನೀಡಿದ್ದು, ಈ ತಂಡಗಳು ಅಧ್ಯಯನ ನಡೆಸಿದ ನಂತರ ಮತ್ತೊಮ್ಮೆ ಸಭೆ ನಡೆಸಿ ನಷ್ಟ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಾನು ಸಚಿವರೆಲ್ಲ ಬೆಳಗಾವಿಗೆ ಹೋಗುತ್ತಿದ್ದೇವೆ. ಮಳೆ ಹಾನಿ ಬಗ್ಗೆ ಕೇಂದ್ರ ಅಧ್ಯಯನ ತಂಡದೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ಕಳೆದ ಮೂರು ತಿಂಗಳುಗಳಲ್ಲಿ ಉಂಟಾದ ಮಳೆ ಹಾನಿ ಬಗ್ಗೆ, ಪ್ರಾಣ ಹಾನಿ, ಬೆಳೆ ಹಾನಿ, ಜಾನುವಾರು ಹಾನಿ, ಮನೆ ಹಾನಿಗಳ ಬಗ್ಗೆ ವಿವರ ನೀಡಿದ್ದೇನೆ. ವಿಶೇಷವಾಗಿ ಬೆಂಗಳೂರಿನ ಮಳೆಯ ಹಾನಿಯ ಬಗ್ಗೆ ವಿವರ ನೀಡಿದ್ದೇನೆ ಎಂದರು.‌

ಕೇಂದ್ರ ತಂಡದ ಅಧ್ಯಯನ ಪ್ರವಾಸದ ನಂತರ ಮತ್ತೊಮ್ಮೆ ಸಭೆ, ಪರಿಹಾರಕ್ಕೆ ಬೇಡಿಕೆ ಸಲ್ಲಿಕೆ: ಸಿಎಂ

ಮಳೆಹಾನಿ ಪರಿಶೀಲನೆಗೆ ಕೇಂದ್ರ ಅಧ್ಯಯನ ತಂಡ: ಬೆಂಗಳೂರಿನಲ್ಲಿ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿರುವ ಬಗ್ಗೆ ಪರಿಹಾರ ನೀಡಲು ಮನವಿ ಮಾಡಿದ್ದೇವೆ. ಬೋಟ್​​​ಗೆ ನೀರು ನುಗ್ಗಿ ಹಾನಿಯಾದರೆ ಪರಿಹಾರ ನೀಡಲಾಗುವುದಿಲ್ಲ. ಆದರೆ, ಈ ಬಗ್ಗೆಯೂ ಮನವಿ ಮಾಡಿದ್ದೇವೆ. ಈಗ ವಿವರಣೆ ನೀಡಿದ್ದೇವೆ, ಅವರು ಸಂಪೂರ್ಣ ಪರಿಶೀಲನೆ ನಡೆಸಿ ಬಂದ ಬಳಿಕ ಮತ್ತೊಮ್ಮೆ ನಷ್ಟ ಅಂದಾಜು ಪರಿಹಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಅವರು ನಾಲ್ಕು ತಂಡಗಳಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಆಗಮಿಸುತ್ತಾರೆ. ಹೆಲಿಕಾಪ್ಟರ್ ಮೂಲಕ ಜಿಲ್ಲೆಗಳಿಗೆ ತೆರಳಿ ವೀಕ್ಷಣೆ ಮಾಡುತ್ತಾರೆ. ಬೆಂಗಳೂರಿನ ಮಳೆ ಹಾನಿಯ ಬಗ್ಗೆಯೂ ಒಂದು ತಂಡ ವೀಕ್ಷಣೆ ಮಾಡಲಿದೆ. ಅವರು ಬಂದು ಹೋದ ನಂತರ ಇನ್ನೊಂದು ಸಭೆ ಮಾಡಲಾಗುತ್ತದೆ. ಇದಾದ ಬಳಿಕ ಒಂದು ವರದಿ ತಯಾರಿಸಿ ಮೆಮೋರಂಡಮ್ ಕೊಡಲಾಗುತ್ತದೆ. ಕಳೆದ ವಾರವೂ ಒಂದು ಮೆಮೋರಂಡಮ್ ಕೊಡಲಾಗಿತ್ತು. ಇದೀಗ ಅದನ್ನು ಪರಿಶೀಲಿಸಿ ಮತ್ತೆ ವಿಸ್ತಾರವಾದ ವರದಿ ನೀಡಲಾಗುತ್ತದೆ ಎಂದು ಹೇಳಿದರು.

ಜನೋತ್ಸವದ ಬಗ್ಗೆ ಪ್ರತಿಕ್ರಿಯೆ ನೀಡದೆ ತೆರಳಿದ ಸಿಎಂ : ದೊಡ್ಡಬಳ್ಳಾಪುರದಲ್ಲಿ ನಾಳೆ ನಡೆಯಲಿರುವ ಸರ್ಕಾರದ ಸಾಧನಾ ಸಮಾವೇಶವಾದ ಜನೋತ್ಸವ ಸಮಾರಂಭ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ.

ಇದನ್ನೂ ಓದಿ : ಮಳೆಹಾನಿಗೆ ಕೇಂದ್ರ ಮಾರ್ಗಸೂಚಿಯಂತೆ ನ್ಯಾಯಯುತ ಪರಿಹಾರಕ್ಕೆ ಶಿಫಾರಸು ಮಾಡಿ: ಕೇಂದ್ರ ತಂಡಕ್ಕೆ ಸಿಎಂ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.