ETV Bharat / state

ಮಾನಹಾನಿ ಪ್ರಕರಣ: ವಾರ ಪತ್ರಿಕೆಯ ವರದಿಗಾರ, ಸಂಪಾದಕನಿಗೆ ದಂಡ ವಿಧಿಸಿದ ಹೈಕೋರ್ಟ್ - defamation case of Bhatkal teacher

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಿಂದ ಪ್ರಕಟವಾಗುವ ಪತ್ರಿಕೆಯೊಂದು 2005ರ ಆಗಸ್ಟ್ 8ರಂದು ಸ್ಥಳೀಯ ಶಾಲಾ ಶಿಕ್ಷಕಿ ಸಿಲ್ವಿನಾ ಅವರ ಕುರಿತು ಮಾನಹಾನಿ ಮಾಡುವಂತಹ ವರದಿ ಪ್ರಕಟಿಸಿತ್ತು. ಈ ವಿಚಾರವಾಗಿ ಶಿಕ್ಷಕಿ ಕೋರ್ಟ್​ ಮೆಟ್ಟಿಲೇರಿದ್ದು, ಸುದೀರ್ಘ 15 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ, ಆರೋಪಿತರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

high court
ಹೈಕೋರ್ಟ್
author img

By

Published : Sep 10, 2020, 7:03 AM IST

ದೆಬೆಂಗಳೂರು: ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಮತ್ತೊಬ್ಬರ ಬದುಕಿನ ಹಕ್ಕನ್ನು ಆಕ್ರಮಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಮಾನಹಾನಿ ಪ್ರಕರಣದಲ್ಲಿ ವಾರ ಪತ್ರಿಕೆಯೊಂದರ ಸಂಪಾದಕ ಮತ್ತು ವರದಿಗಾರನಿಗೆ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.

ಹೈಕೋರ್ಟ್ ತನ್ನ ಸವಿಸ್ತಾರವಾದ ಆದೇಶದಲ್ಲಿ ಮಾನಹಾನಿ ಮಾಡುವುದು ಸಂವಿಧಾನ ನೀಡಿರುವ ಬದುಕುವ ಹಕ್ಕನ್ನು ಉಲ್ಲಂಘಿಸಿದಂತೆ. ಸಂವಿಧಾನದ ವಿಧಿ 21 ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ನೀಡಿದೆ. ಈ ಬದುಕುವ ಹಕ್ಕಿನಲ್ಲಿ ವ್ಯಕ್ತಿಯ ಘನತೆ ಮತ್ತು ಖ್ಯಾತಿಯೂ ಒಳಗೊಂಡಿರುತ್ತದೆ. ಇದನ್ನು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಮತ್ತೊಬ್ಬರು ಆಕ್ರಮಿಸಿಕೊಳ್ಳುವುದು ಸಾಧುವಲ್ಲ ಮತ್ತು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಿಂದ ಪ್ರಕಟವಾಗುವ ವಾರ ಪತ್ರಿಕೆ 2005ರ ಆಗಸ್ಟ್ 8ರಂದು ಸ್ಥಳೀಯ ಶಾಲಾ ಶಿಕ್ಷಕಿ ಸಿಲ್ವಿನಾ ಅವರ ಕುರಿತು ಮಾನಹಾನಿ ಮಾಡುವಂತಹ ವರದಿ ಪ್ರಕಟಿಸಿತ್ತು. ಈ ವಿಚಾರವಾಗಿ ಶಿಕ್ಷಕಿ ಸ್ಥಳೀಯ ನ್ಯಾಯಾಯದಲ್ಲಿ ಪ್ರಕರಣ ದಾಖಲಿಸಿದ್ದರು. ತಮ್ಮ ಮಾನಹಾನಿ ಮಾಡಿರುವ ಪತ್ರಿಕೆಯ ಸಂಪಾದಕ ಹಾಗೂ ವರದಿಗಾರನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿ, ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಭಟ್ಕಳ ಜೆಎಂಎಫ್​​ಸಿ ನ್ಯಾಯಾಲಯ 2011ರ ಜನವರಿ 5ರಂದು ಆರೋಪಿತರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಸಿಲ್ವಿನಾ ಹೈಕೋರ್ಟ್​​ಗೆ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಇದೀಗ ಆರೋಪಿಗಳನ್ನು ಖುಲಾಸೆ ಮಾಡಿರುವ ವಿಚಾರಣಾ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದಿದ್ದು, ಆರೋಪಿತರಿಗೆ ಶಿಕ್ಷೆ ವಿಧಿಸಿದೆ.

ಹೈಕೋರ್ಟ್ ಹೇಳಿರುವುದೇನು?: ಸಂವಿಧಾನದ ವಿಧಿ 21 ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಈ ಹಕ್ಕನ್ನು ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಆಕ್ರಮಿಸಬಾರದು. ಇನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕಿರುವುದು ಕೂಡ ಸಂವಿಧಾನದ ವಿಧಿ 19ರ ಅಡಿಯಲ್ಲಿ. ಈ ಹಕ್ಕು ಅನಿರ್ಬಂಧಿತವಲ್ಲ. ಇದಕ್ಕೆ ಅದರದೇ ಆದ ಮಿತಿಗಳಿವೆ. ಹೀಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಮಾನಹಾನಿ ಮಾಡುವುದು ಅಪರಾಧ ಎಂದಿದೆ. ಅಲ್ಲದೆ ವಿಚಾರಣಾ ನ್ಯಾಯಾಲಯದ ತೀರ್ಪನ್ನೂ ಟೀಕಿಸಿರುವ ಪೀಠ, ಪ್ರಕರಣದಲ್ಲಿನ ಅಂಶಗಳು ಹಾಗೂ ಸಂದರ್ಭಗಳನ್ನು ಗಮನಿಸಿದರೆ ಆರೋಪಿತರು ಸಮಾಜದ ಹಿತಕ್ಕಾಗಿ ಅಥವಾ ಸದುದ್ದೇಶದಿಂದ ವರದಿ ಪ್ರಕಟಿಸಿದ್ದಾರೆ ಎಂಬಂತೆ ಕಾಣುವುದಿಲ್ಲ. ಹಾಗೆಯೇ ವರದಿ ಪ್ರಕಟಿಸಿರುವ ವಿಚಾರದಲ್ಲಿ ಅವರು ಮುಗ್ಧರೆಂದೂ ಪರಿಗಣಿಸಲು ಸಾಧ್ಯವಿಲ್ಲ. ಹಾಗಿದ್ದೂ ವಿಚಾರಣಾ ನ್ಯಾಯಾಲಯ ಸೂಕ್ತ ಕಾರಣಗಳಿಲ್ಲದೆ ಆರೋಪಿತರನ್ನು ಖುಲಾಸೆಗೊಳಿಸಿರುವ ತೀರ್ಪು ಅಸಹಜ ಮತ್ತು ದೋಷಪೂರಿತ ಎಂದಿದೆ.

ಶಿಕ್ಷೆ ಪ್ರಮಾಣವೆಷ್ಟು?: 2011ರ ಜನವರಿ 5ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ವಜಾಗೊಳಿಸಿರುವ ಹೈಕೋರ್ಟ್, ಆರೋಪಿತರಿಗೆ ಶಿಕ್ಷ ವಿಧಿಸುವಲ್ಲಿ ಕರುಣೆ ತೋರಿರುವುದಾಗಿ ಹೇಳಿದೆ. ಅದರಂತೆ ಆರೋಪಿತ ಸಂಪಾದಕ ಹಾಗೂ ವರದಿಗಾರನಿಗೆ ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ತಲಾ 30 ಸಾವಿರ ದಂಡ ವಿಧಿಸಿದೆ. ಈ ದಂಡದ ಮೊತ್ತವನ್ನು ಒಂದು ತಿಂಗಳಲ್ಲಿ ಪಾವತಿಸಬೇಕು. ಒಂದು ವೇಳೆ ದಂಡ ಕಟ್ಟಲು ವಿಫಲರಾದರೆ ಒಂದು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ಪ್ರಕಟಿಸಿದೆ. ಅಲ್ಲದೆ ದಂಡದ ಮೊತ್ತದಲ್ಲಿ ದೂರುದಾರರಿಗೆ ಪರಿಹಾರವಾಗಿ ಒಟ್ಟು 50 ಸಾವಿರ ರೂಪಾಯಿ ನೀಡಬೇಕು. ಮಹಿಳೆಯನ್ನು ಕೀಳಾಗಿ ಮತ್ತು ಅನುಮಾನಾಸ್ಪದ ರೀತಿಯಲ್ಲಿ ಚಿತ್ರಿಸಿ ಅವರ ತೇಜೋವಧೆ ಮಾಡಿರುವುದರಿಂದ ಅವರಿಗೆ ಈ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಒಟ್ಟಾರೆ ಶಿಕ್ಷಕಿಯೊಬ್ಬರು ತಮ್ಮ ಮಾನಹಾನಿ ಮಾಡಿದವರ ವಿರುದ್ಧ ಸುದೀರ್ಘ 15 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ, ಆರೋಪಿತರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.